
ನವದೆಹಲಿ: ಅಬಕಾರಿ ನೀತಿ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ನನ್ನ ಕಚೇರಿ ಹಾಗೂ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಿದ್ದಾರೆ ಎಂದು ಆಪ್ ನಾಯಕ ಹಾಗೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೊಂಡಿದ್ದಾರೆ. ಆದರೆ, ಇದು ದಾಳಿ ಅಲ್ಲ. ಕೇವಲ ಕೆಲವು ದಾಖಲೆ ಸಂಗ್ರಹಿಸಲು ಹೋಗಿದ್ದೆವಷ್ಟೇ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಸಿಸೋಡಿಯಾ, ಸಿಬಿಐಗೆ ಸ್ವಾಗತ. ಸಿಬಿಐ ಮತ್ತೊಮ್ಮೆ ನನ್ನ ಕಚೇರಿ ಹಾಗೂ ಮನೆ ಮೇಲೆ ದಾಳಿ ಮಾಡಿದೆ. ಲಾಕರ್ ತಪಾಸಿಸಿದೆ. ನನ ಗ್ರಾಮದಲ್ಲೂ ನನ್ನ ಬಗ್ಗೆ ವಿಚಾರಿಸಿದೆ. ಆದರೆ ಕಳೆದ ಬಾರಿ ದಾಳಿ ಮಾಡಿದಾಗಲೂ ಅವರಿಗೆ ಏನೂ ದೊರೆಯಲಿಲ್ಲ. ಅದೇ ರೀತಿ ಈ ಬಾರಿಯೂ ಖಾಲಿ ಕೈಯಲ್ಲಿ ಹಿಂದಿರುಗಿದ್ದಾರೆ ಎಂದಿದ್ದಾರೆ. ಇದನ್ನು ತಳ್ಳಿಹಾಕಿದ ಸಿಬಿಐ ಅಧಿಕಾರಿಗಳು, ಒಂದಿಷ್ಟುದಾಖಲೆ ಸಂಗ್ರಹಕ್ಕೆ ಅವರ ಕಚೇರಿಗೆ ಹೋಗಿದ್ದೆವು. ಇದು ಯಾವುದೇ ದಾಳಿಯಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಜಾರಿ ಮಾಡಲಾದ ಅಬಕಾರಿ ನೀತಿಯಲ್ಲಿ (Excise policy) ಅಕ್ರಮ ನಡೆದಿದೆ ಎಂದು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ (V.K. Saxena) ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ತನಿಖೆ ನಡೆಸುತ್ತಿದೆ.
Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia
Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ