ಭ್ರಷ್ಟಾಚಾರ ಎಳ್ಳಷ್ಟು ಸಹಿಸಲ್ಲ, ಭಾರತೀಯ ಆಹಾರ ನಿಗಮಕ್ಕೆ ಕೇಂದ್ರದಿಂದ ಹೊಸ ರೂಪ!

By Suvarna NewsFirst Published Jan 14, 2023, 9:17 PM IST
Highlights

ಕೋವಿಡ್ ಸಂದರ್ಭದಲ್ಲಿ ಆರಂಭಿಸಿದ ಉಚಿತ ಪಡಿತರ ಸೇರಿದಂತೆ ಹಲವು ಕ್ರಮಗಳನ್ನು ವಿಶ್ವವೇ ಮಾದರಿ ಎಂದು ಗುರುತಿಸಿದೆ. ಆದರೆ ಇದೇ ಸಂಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ. ಇದನ್ನು ಸಹಿಸಲ್ಲ ಎಂದು ಸಿಚವ ಪಿಯೂಷ್ ಗೋಯಲ್ ಹೇಳಿದ್ದಾರೆ.

ನವದೆಹಲಿ(ಜ.14): ಭಾರತೀಯ ಆಹಾರ ನಿಗಮದಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಆಹಾರ ನಿಗಮ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪಿಯೂಷ್ ಗೋಯೆಲ್, ಸಂಸ್ಥೆಗೆ ಎಚ್ಚರಿಕೆ ನೀಡಿದರು.  ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರ ಸಹಿಸಲು ಸಾಧ್ಯವಿಲ್ಲ. ಅಕ್ರಮದ ಬಗ್ಗೆ ಮಾಹಿತಿ ನೀಡುವವರಿಗೆ ಪಾರಿತೋಷಕ ನೀಡಲು ವ್ಯವಸ್ಥಿತ ಕ್ರಮ ರೂಪಿಸುವಂತೆಯೂ ಗೋಯಲ್, ಕಾರ್ಯದರ್ಶಿಗಳಿಗೆ ಸೂಚನೆ ನೀಡದರು. ಭ್ರಷ್ಟಾಚಾರದ ಯಾವುದೇ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಅವರು ಎಫ್ ಸಿ ಐ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ನೀಡಿದ್ದಾರೆ.

ದೇಶದ ರೈತರಿಗೆ ಮತ್ತು ಬಡವರಿಗೆ ನಿರಂತವಾಗಿ ನೆರವು ನೀಡುವುದನ್ನು ಮುಂದುವರಿಸುವಂತಾಗಲು ಭಾರತೀಯ ಆಹಾರ ನಿಗಮ (ಎಫ್ ಸಿ ಐ)ಗೆ ಹೊಸ ರೂಪ ಕೊಡುವ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಮಾಡಬೇಕಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. 

Invest Karnataka 2022: ಚಿಕ್ಕ ಬಜೆಟ್‌, ದೊಡ್ಡ ಆದಾಯ, 'ಕಾಂತಾರ' ಚಿತ್ರವೇ ಉದಾಹರಣೆ: ಪೀಯುಷ್‌ ಗೋಯೆಲ್‌

ಎಫ್ ಸಿ ಐನ 59 ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ ಉದ್ಘಾಟನಾ ಭಾಷಣ ಗೋಯೆಲ್, ಎಫ್ ಸಿ ಐ ನ ಮತ್ತು ಕೇಂದ್ರ ಗೋದಾಮು ನಿಗಮ (ಸಿಡಬ್ಲ್ಯುಸಿ) ನ  ರೂಪಾಂತರ ಪ್ರಕ್ರಿಯೆಯ ಬಗ್ಗೆ ನಿಗಾವಹಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಸಹಕರಿಸದ ಅಥವಾ ಪ್ರಕ್ರಿಯೆ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸದರು. 

ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಎಫ್ ಸಿ ಐ ಕೈಗೊಂಡಿದ್ದು ವಿಶ್ವದ ಬೃಹತ್ ಆಹಾರ ಪೂರೈಕೆ ಸರಪಳಿ ವ್ಯವಸ್ಥೆಗೆ ಸಚಿವ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಲಿಲ್ಲ ಎಂದು ಗೋಯಲ್ ಹೇಳಿದರು. ಆಹಾರ ಭದ್ರತೆ, ಆರ್ಥಿಕ ಪರಿಸ್ಥಿತಿ ಬಲವರ್ಧನೆ, ಹಣದುಬ್ಬರ ನಿಯಂತ್ರಣ ಮತ್ತಿತರ ವಲಯಗಳಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.

2047ರ ವೇಳೆಗೆ Indian Economy 30 ಟ್ರಿಲಿಯನ್ ಡಾಲರ್‌ ಮೌಲ್ಯ ಆಗಲಿದೆ: Piyush Goyal ವಿಶ್ವಾಸ

ಈ ವರ್ಷದ ಅಕ್ಕಿ ಖರೀದಿ ಅಂಕಿಅಂಶಗಳು ಉತ್ತಮವಾಗಿದ್ದು, ಅದೇ ರೀತಿ ಮುಂಬರುವ ಋತುಮಾನದಲ್ಲಿ ಗೋಧಿ ಖರೀದಿಯನ್ನು ಎದುರು ನೋಡುತ್ತಿರುವುದಾಗಿಯೂ ಗೋಯಲ್ ಹೇಳಿದರು.ಸಮಾರಂಭದಲ್ಲಿ ವರ್ಚುಯಲ್ ಮಾಧ್ಯಮದ ಮೂಲಕ ಭಾಗಿಯಾದ ಮಾನ್ಯ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಅವರು, ಸಾಂಕ್ರಾಮಿಕದ ಅವಧಿಯಲ್ಲಿ ದೇಶದ ಎಲ್ಲ ಭಾಗಗಳಿಗೂ, ಸಾಕಷ್ಟು ಆಹಾರ ಧಾನ್ಯ ಪೂರೈಕೆ ಖಾತರಿಪಡಿಸಲು ಎಫ್ ಸಿ ಐ ಕೈಗೊಂಡಿದ್ದ ಮಹತ್ವದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಅವರ ಮುನ್ನೋಟದೊಂದಿಗೆ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ ದುರ್ಬಲ ವರ್ಗದ ಹಸಿವು ನೀಗಿಸಿದ ಕ್ರಮವನ್ನು ಅವರು ಶ್ಲಾಘಿಸಿದರು.

click me!