ದೆಹಲಿ ಹೈಕೋರ್ಟ್ ಯೂಟ್ಯೂಬರ್ ಧ್ರುವ ರಾಠಿಗೆ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದೆ.
ದೆಹಲಿ ಹೈಕೋರ್ಟ್ ಯೂಟ್ಯೂಬರ್ ಧ್ರುವ ರಾಠಿಗೆ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದೆ. ಹಿಂಸೆಕೋರ, ನಿಂದಕ (Violent & Abusive)ಎಂದು ಕರೆದು ತನ್ನನ್ನು ಟ್ರೋಲ್ ಮಾಡಲಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಧ್ರುವ ರಾಠಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಧ್ರುವ ರಾಠಿಗೆ ನೋಟೀಸ್ ಜಾರಿ ಮಾಡಿದೆ. ಬಿಜೆಪಿಯ ವಕ್ತಾರ ಸುರೇಶ್ ಕರಮ್ಶಿ ನಖುವಾ ಎಂಬುವವರು ತಮ್ಮ ಇತ್ತೀಚಿನ ವಿಡಿಯೋವೊಂದರಲ್ಲಿ ತನ್ನನ್ನು ಹಿಂಸೆಕೋರ, ನಿಂದಕ ಎಂದು ಟ್ರೋಲ್ ಮಾಡಿದ್ದಾರೆ ಎಂದು ನಖುವಾ ದೂರು ನೀಡಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ದೆಹಲಿ ನ್ಯಾಯಾಲಯ ಧ್ರುವ ರಾಠಿಗೆ ನೊಟೀಸ್ ಕಳುಹಿಸಿ ಬಳಿಕ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು. ಧ್ರುವ ರಾಠಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 'ಗೋದಿ ಯೂಟ್ಯೂಬರ್‌ಗಳಿಗೆ ನನ್ನ ಪ್ರತಿಕ್ರಿಯೆ/ಎಲ್ವೀಸ್ ಯಾದವ್/ ಧ್ರುವ ರಾಠಿ' (My Reply to Godi Youtubers | Elvish Yadav | Dhruv Rathee) ಎಂಬ ವೀಡಿಯೋವನ್ನು 2024ರ ಜುಲೈ 7 ರಂದು ಪೋಸ್ಟ್ ಮಾಡಿದ್ದರು. ಇದಾದ ನಂತರ ಬಿಜೆಪಿಯ ವಕ್ತಾರ ಈ ದೂರು ದಾಖಲಿಸಿದ್ದರು.
undefined
ಯುಟ್ಯೂಬರ್ ಧೃವ್ ರಾಠೀ ವಿರುದ್ಧ ಗುಡುಗಿದ ಸ್ವಾತಿ ಮಲಿವಾಲ
ಸುರೇಶ್ ಕರಿಮ್ಶಿ, ಅವರು ಬಿಜೆಪಿಯ ಮುಂಬೈ ಘಟಕದ ವಕ್ತಾರರಾಗಿದ್ದು, ಅವರು, ಧ್ರುವ ರಾಠಿ ತಮ್ಮ ವೀಡಿಯೋದಲ್ಲಿ ನನ್ನ ಬಗ್ಗೆ ಹಿಂಸೆ ಹಾಗೂ ದೌರ್ಜನ್ಯತ್ಮಕವಾಗಿ ಟ್ರೋಲ್ ಮಾಡಿದ್ದಾರೆ. ಅವರ ಆರೋಪಕ್ಕೆ ಯಾವುದೇ ಕಾರಣ ಇಲ್ಲ, ಅಲ್ಲದೇ ಈ ವೀಡಿಯೋದಿಂದ ನನ್ನ ಘನತೆಗೆ ಕುಂದುಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬಾರ್ ಎಂಡ್ ಬೆಂಚ್ ವರದಿ ಪ್ರಕಾರ, ನಖುವಾ ತುಂಬಾ ಪ್ರಚೋದನಕಾರಿಯಾಗಿದ್ದು, ಬೆಂಕಿ ಇಡುವಂತಹ ಅವರ ವೀಡಿಯೋಗಳು ಕಾಡ್ಗಿಚ್ಚಿನಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಹಬ್ಬುತ್ತಿವೆ, ಇವು ನನ್ನ ವಿರುದ್ಧ ಆಧಾರರಹಿತ ಆರೋಪಗಳಾಗಿವೆ ಎಂದು ಹೇಳಿದ್ದಾರೆ.
ಡಾಬರ್ & ಯೂಟ್ಯೂಬರ್ ನಡುವೆ ರಿಯಲ್ ಫ್ರೂಟ್ ವಿವಾದ: ವಿಡಿಯೋ ಪ್ರಸಾರ ನಿಷೇಧಕ್ಕೆ ಹೈಕೋರ್ಟ್ ಆದೇಶ
ಧ್ರುವ ರಾಠಿಯ ಈ ಆಧಾರವಿಲ್ಲದ ಸುಳ್ಳು ಆರೋಪಗಳಿಂದ ಸಾಮಾಜಿಕ ಜಾಲತಾಣವೂ ಸೇರಿದಂತೆ ನಿಜ ಜೀವನದಲ್ಲಿ ಭಾರಿ ನಿಂದನೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ನಖುವಾ ಪರ, ರಾಘವ್ ಅವಸ್ಥಿ ಹಾಗೂ ಮುಖೇಶ್ ಶರ್ಮಾ ವಾದ ಮಂಡಿಸಿದ್ದರು. ಕಳೆದ ಭಾನುವಾರ ಧ್ರುವ ರಥಿ ವೀಡಿಯೋವೊಂದನ್ನು ಬಿಡುಗಡೆ ಮಾಡಿ, ಹಿಂದಿ ಬಿಗ್ ಬಾಸ್ ಒಟಿಟಿ2ನ ವಿನ್ನರ್ ಎಲ್ವೀಸ್ ಯಾದವ್ ತಮ್ಮ ವಿರುದ್ಧ ಎರಡು ತಿಂಗಳ ಹಿಂದೆ ಮಾಡಿದ್ದ ಆರೋಪಕ್ಕೆ ಉತ್ತರ ನೀಡಿದ್ದರು, ಅಲ್ಲದೇ ತನ್ನ ವಿರುದ್ಧ ವೀಡಿಯೋ ಮಾಡಿದ್ದ ಎಲ್ವೀಸ್ ಯಾದವ್ ವಿರುದ್ಧ ತಮಾಷೆ ಮಾಡಿದ್ದರು.