ಪಿಂಚಣಿ ಕೊಡ್ತಿನಿ ಅಂತ ಕರೆದು ಯುವಕರಿಗೆ ಮಕ್ಕಳಾಗದಂತೆ ಅಪರೇಷನ್ ಮಾಡಿದ ವೈದ್ಯ

By Mahmad Rafik  |  First Published Jul 24, 2024, 3:02 PM IST

ಸರ್ಕಾರಿ ಪಿಂಚಣಿ ಆಮಿಷ ತೋರಿಸಿ ಅವಿವಾಹಿತ ಯುವಕರು, ವಿಧುರ ಮತ್ತು ಮಾನಸಿಕ ಅಸ್ವಸ್ತರನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.


ಮಹಾರಾಜಗಂಜ್: ಉತ್ತರ ಪ್ರದೇಶದ ಮಹಾರಾಜಗಂಜ್‌ ಜಿಲ್ಲೆಯ ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ವೈದ್ಯರು, ಅವಿವಾಹಿತ ಯುವಕರಿಗೆ ಸಂತಾನಹರಣ ಚಿಕಿತ್ಸೆ ನಡೆಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಹಾರಾಜಗಂಜ್ ವ್ಯಾಪ್ತಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾದವರಲ್ಲಿ ಆತಂಕ ಮನೆ ಮಾಡಿದೆ. ಇದೀಗ ಎಲ್ಲರೂ ಮಗದೊಮ್ಮೆ ತಮ್ಮ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಸರ್ಕಾರಿ ಪಿಂಚಣಿ ಆಮಿಷ ತೋರಿಸಿ ಅವಿವಾಹಿತ ಯುವಕರು, ವಿಧುರ ಮತ್ತು ಮಾನಸಿಕ ಅಸ್ವಸ್ತರನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ನನಗೆ ಇನ್ನೂ ಮದುವೆಯಾಗಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ನನಗೆ ಯಾವುದೇ ಮಾಹಿತಿ ನೀಡದೇ ಸಂತಾನಹರಣ ಚಿಕಿತ್ಸೆ ನಡೆಸಿದ್ದಾರೆ. ಈ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು. ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ಸಂತಾನಹರಣ ಚಿಕಿತ್ಸೆಗೆ ಮತ್ತೆ ಸರಿ ಮಾಡಲು ಸಾಧ್ಯವಾಗುತ್ತಾ ಎಂಬುದರ ಬಗ್ಗೆ ವೈದ್ಯರ ಸಲಹೆ ಕೇಳಲಾಗುತ್ತಿದ್ದು, ಈ ಚಿಕಿತ್ಸೆ ತಗಲುವ ವೆಚ್ಚವನ್ನು ಸರ್ಕಾರವೇ ನೀಡಬೇಕು. ಇದರ ಜೊತೆ ನಮಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಸಂತ್ರಸ್ತ ಯುವಕ ಆಗ್ರಹಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ರೀತಿ ಎಷ್ಟು ಮಂದಿಗೆ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ಪುರುಷರಿಗೆ ಸರ್ಕಾರದ ಪಿಂಚಣಿಯ ಆಮಿಷವನ್ನು ಒಡ್ಡಲಾಗಿತ್ತು ಎಂದು ವರದಿಯಾಗಿದೆ.

Tap to resize

Latest Videos

ಏನಿದು ಪುರುಷ ಸಂತಾನಹರಣ ಚಿಕಿತ್ಸೆ? 

ಸಂತಾನಹರಣ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ವಾಸ್ ಡಿಫರೆನ್ಸ್ (vas deferens)  ಹೆಸರಿನ ನರ ಕತ್ತರಿಸುತ್ತಾರೆ ಮತ್ತು ತುದಿಗಳನ್ನು ಕಟ್ಟುತ್ತಾರೆ ಅಥವಾ ಮುಚ್ಚುತ್ತಾರೆ. ವಾಟ್ ಡಿಫರೆನ್ಸ್ ಕಡಿತದಿಂದಾಗಿ ವೀರ್ಯವು ವೃಷಣಗಳಿಂದ ಹೊರಬರಲು ಸಾಧ್ಯವಿಲ್ಲ. ಸಂತಾನ ಬಯಸದ ಪುರುಷರು ಈ ಚಿಕಿತ್ಸೆಗೆ ಒಳಗಾಗುತ್ತಾರೆ. ಇಂದು ಹಚ್ಚಾಗಿ ಮಹಿಳೆಯರೇ ಸಂತಾನಹರಣ ಶಸ್ತ್ರಚಿಕಿತ್ಸೆಗೆ (Birth Control Surgery) ಒಳಗಾಗುತ್ತಾರೆ.

ರಾಜ್ಯದ ಕಡಲತೀರದಲ್ಲಿ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್‌ಗಳು ಪತ್ತೆ

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತಾ?

ಇದು ಶಾಶ್ವತ ಜನನ ನಿಯಂತ್ರಣ ವಿಧಾನವಾಗಿದೆ. ಒಮ್ಮೆ ಸಂತಾನಹರಣ ಚಿಕಿತ್ಸೆಗೆ ಒಳಗಾದ್ರೆ ಪುರುಷನು ಮಗುವನ್ನು ಹೊಂದುವ ಸ್ಥಿತಿಯಲ್ಲಿರುವುದಿಲ್ಲ. ಈ ವಿಧಾನವನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಿಂದ ಯಾವುದೇ ಅಪಾಯ ಮತ್ತು ಅಡ್ಡಪರಿಣಾಮಗಳು ಇರಲ್ಲ ಎಂದು ವೈದ್ಯರು ಹೇಳುತ್ತಾರೆ. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪುರುಷನ ಲೈಂಗಿಕ ಜೀವನದಲ್ಲಿ ಯಾವುದೇ ಅಡ್ಡಪರಿಣಾಮ ಬೀರಲ್ಲ ಹಾಗೂ ದೈಹಿಕ ಶಕ್ತಿಯ ಮೇಲೆಯೂ ಯಾವುದೇ ಪರಿಣಾಮ ಬೀರಲ್ಲ. ಈ ಶಸ್ತ್ರಚಿಕಿತ್ಸೆ ಒಳಗಾಗಿರುವ ವ್ಯಕ್ತಿ ಜೊತೆ ಲೈಂಗಿಕ ಸಂಪರ್ಕ (Sexual Relationship) ಹೊಂದುವ ಮಹಿಳೆ (Women) ಗರ್ಭ ಧರಿಸಲು ಸಾಧ್ಯವಾಗುವದಿಲ್ಲ. ವೀರ್ಯ (Sperm) ಹೊರ ಬಂದರೂ ಅದರಲ್ಲಿ ಯಾವುದೇ ಫಲವತ್ತತೆ ಇರಲ್ಲ.

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

click me!