ಆತನ ಕನಸಿನಲ್ಲಿ ಬಂದಂತೆ 9ನೇ ಬಾರಿಯೂ ಹಾವು ಕಚ್ಚಲಿದೆ ಎಂಬ ಭಯ ಎಲ್ಲರಲ್ಲಿಯೂ ಹೆಚ್ಚಾಗಿದೆ. ಹೀಗೆ ಕೊನೆಗೆ ಹಾವು ಕಡಿತದಿಂದ ವಿಕಾಸ್ ಸಾವು ಆಗಬಹುದು ಎಂಬ ಭಯ ಕುಟುಂಬಸ್ಥರಲ್ಲಿ ಉಂಟಾಗಿದೆ.
ಲಕ್ನೋ: ಪದೇ ಪದೇ ಹಾವು ಕಡಿತಕ್ಕೆ ಒಳಗಾಗುತ್ತಿರುವ ಯುವಕನಿಗೆ ಮತ್ತೊಮ್ಮೆ ನಾಗರಾಜ ಕಚ್ಚಿದ್ದಾನೆ. ಭಯದಿಂದ 500 ಕಿ.ಮೀ. ದೂರ ಬಂದರೂ ಅಲ್ಲಿಯೂ ಹಾವು ಕಚ್ಚಿದೆ. ಹಾವಿನ ಭಯದಿಂದ ವಿಕಾಸ್ ಊರು ತೊರೆದು ರಾಜಸ್ಥಾನದ ದೌಸಾ ಜಿಲ್ಲೆಗೆ ಆಗಮಿಸಿದ್ದರು. ಇದೀಗ ಎಂಟನೇ ಬಾರಿ ಹಾವು ಕಡಿತಗೊಳಗಾಗಿರುವ ಬಾಲಾಜಿ ಇನ್ನೆಷ್ಟು ದೂರ ಹೋಗಲಿ ಎಂದು ಯುವಕ ಕಣ್ಣೀರು ಹಾಕಿದ್ದಾನೆ. 9ನೇ ಬಾರಿ ಹಾವು ಕಡಿತದ ಆತಂಕದಲ್ಲಿರೋ ಯುವಕನ ತಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಹಾವು ಕಡಿತಕ್ಕೊಳಗಾಗುತ್ತಿರುವ ವಿವೇಕ್ ದ್ವಿವೇದಿ ಉತ್ತರ ಪ್ರದೇಶದ ಫತೇಪುರದ ನಿವಾಸಿಯಾಗಿದ್ದು, ಇದೀಗ ದೇಶದ್ಯಾಂತ ಸುದ್ದಿಯಲ್ಲಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಉತ್ತರ ಪ್ರದೇಶದ ಹಲವು ನಗರಗಳಿಗೂ ಹೋದ್ರೂ ಹಾವು ಕಚ್ಚಿತ್ತು.
ಇದೀಗ ಹಾವಿನ ಕಡಿತದಿಂದ ಪಾರಾಗಲು ವಿಕಾಸ್, ಕಳೆದ 10 ದಿನಗಳಿಂದ ಮೆಹದಿಪುರದ ಬಾಲಾಜಿ ದೇವನ ಮೊರೆ ಹೋಗಿದ್ದು ಅಲ್ಲಿಯೂ ಹಾವು ಕಚ್ಚಿದೆ. ಮಗನ ದೇಹದ ಮೇಲೆ ಎಂಟು ಬಾರಿ ಹಾವು ಕಚ್ಚಿರುವ ಗುರುತುಗಳು ಮೂಡಿವೆ. ಒಂದು ವಾರದಿಂದ ಬಾಲಜಿ ಸನ್ನಿದಾನದಲ್ಲಿ ಸೇವೆ ಸಲ್ಲಿಸಿದರೂ ಮಗನಿಗೆ ದೇವರ ಕೃಪೆಗೆ ಪಾತ್ರನಾಗಲು ಸಾಧ್ಯವಾಗಲಿಲ್ಲ ಎಂದು ವಿಕಾಸ್ ತಂದೆ ಬೇಸರ ಹೊರ ಹಾಕುತ್ತಾರೆ. ಇದೀಗ ಕನಸಿನಲ್ಲಿ ಬಂದಿರುವ ಹಾವು 9ನೇ ಬಾರಿಯೂ ಕಚ್ಚುವದಾಗಿ ಹೇಳಿದೆ ಎಂಬ ವಿಷಯವನ್ನು ಸಹ ವಿಕಾಸ್ ತಂದೆ ಹೇಳಿಕೊಂಡಿದ್ದಾರೆ.
ಬಜೆಟ್ ಡೇ ಎಂದು ಫೋಟೋ ಹಂಚಿಕೊಂಡ ನಿಖಿಲ್ ಕಾಮತ್, ಜನ ನೋಡಿದ್ದೇ ಬೇರೆ!
ಹಾವಿನ ಫೋಬಿಯಾ?
ನನ್ನ ಮಗನಿಗೆ ಯಾಕೆ ಹಾವು ಪದೇ ಪದೇ ಕಚ್ಚುತ್ತಿದೆ ಎಂಬುದರ ಹಿಂದಿನ ರಹಸ್ಯವೇ ನಮಗೆ ಗೊತ್ತಾಗುತ್ತಿಲ್ಲ. ಒಂದೆರಡು ಬಾರಿ ಹಾವು ಕಚ್ಚಿದ್ದಕ್ಕೆ ಭಯಗೊಂಡಿರುವ ಮಗನಿಗೆ ಏನೇ ಬಂದರೂ ಹಾವು ಬಂದಂತೆ ಆಗುತ್ತಿರಬಹುದು. ನಿಮ್ಮ ಮಗನಿಗೆ ಹಾವಿನ ಫೋಬಿಯಾ ಇದ್ದು, ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗುವಂತೆ ಕೆಲವರು ಸಲಹೆ ನೀಡುತ್ತಾರೆ ಎಂದು ವಿಕಾಸ್ ತಂದೆ ಹೇಳುತ್ತಾರೆ.
ಮಗನಿಗೆ ಪದೇ ಪದೇ ಹಾವು ಕಚ್ಚಿದೆ ಎಂಬುವುದು ನಮ್ಮ ಗಮನಕ್ಕೂ ಬಂದಿದೆ. ಮಗ ಮತ್ತು ಸರ್ಪಕ್ಕೂ ಏನಾದ್ರೂ ಸಂಬಂಧ ಇದೆಯಾ ಅನ್ನೋ ಅನುಮಾನ ಸಹ ಮೂಡುತ್ತಿದೆ. ಕೆಲವರು ದೇವರ ಮೊರೆ ಹೋಗುವಂತೆ ಪುಣ್ಯಕ್ಷೇತ್ರಗಳ ಹೆಸರು ಹೇಳುತ್ತಾರೆ. ಒಂದಿಷ್ಟು ಮಂದಿ ಪ್ರಕಾರ, ಮಗನಿಗೆ ಸರ್ಪದೋಷವಿದೆ. ಹೀಗಾಗಿ ಪೂಜೆಯ ಅವಶ್ಯಕತೆ ಇದೆ ಅಂತಾರೆ. ಆದ್ರೆ ನಮಗೆ ಏನು ಮಾಡಬೇಕು ಅನ್ನೋದು ತೋಚುತ್ತಿಲ್ಲನ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಹಾವು ಬಂದಿದ್ದು ಗೊತ್ತೇ ಆಗಲಿಲ್ಲ
ಸೋಮವಾರ ಬಾಲಜಿ ದೇವಸ್ಥಾನಕ್ಕೆ ವಿಕಾಸ್ ಜೊತೆ ಹೋಗಿದ್ದೆ. ದರ್ಶನ ಮುಗಿಸಿ ಹಿಂದಿರುಗಿ ಬರುವಾಗ ವಿಕಾಸ್ ದೃಷ್ಟಿ ಆತನ ಕಾಲುಗಳ ಮೇಲೆ ಹೋಯ್ತು. ಆಗ ಕೆಲ ಸಮಯದ ಹಿಂದೆಯಷ್ಟೇ ಹಾವು ಕಚ್ಚಿದ ಗುರುತು ಕಾಣಿಸಿತು ಎಂದು ವಿಕಾಸ್ ಅತ್ತೆ ರೇಣು ಹೇಳುತ್ತಾರೆ. ದೇವಸ್ಥಾನದ ಆವರಣದಲ್ಲಿ ಹಾವು ಕಚ್ಚಿರಬಹುದು. ಆದ್ರೆ ಹಾವು ಯಾವಾಗ ಕಚ್ಚಿತು ಎಂಬುದೇ ಗೊತ್ತಾಗಲಿಲ್ಲ ಎಂದು ರೇಣು ಆಶ್ಚರ್ಯವ್ಯಕ್ತಪಡಿಸಿದರು. ಈ ಘಟನೆ ಬಳಿಕ ಆತನ ಕನಸಿನಲ್ಲಿ ಬಂದಂತೆ 9ನೇ ಬಾರಿಯೂ ಹಾವು ಕಚ್ಚಲಿದೆ ಎಂಬ ಭಯ ಎಲ್ಲರಲ್ಲಿಯೂ ಹೆಚ್ಚಾಗಿದೆ. ಹೀಗೆ ಕೊನೆಗೆ ಹಾವು ಕಡಿತದಿಂದ ವಿಕಾಸ್ ಸಾವು ಆಗಬಹುದು ಎಂಬ ಭಯ ಕುಟುಂಬಸ್ಥರಲ್ಲಿ ಉಂಟಾಗಿದೆ.
ಟೇಕಾಫ್ ವೇಳೆ ಪತನಗೊಂಡು ಧಗಧಗನೇ ಹೊತ್ತಿ ಉರಿದ 19 ಜನರಿದ್ದ ಶೌರ್ಯ ಏರ್‌ಲೈನ್ಸ್ ವಿಮಾನ
ಹಾವು ಕಚ್ಚುವ ಮುನ್ನವೇ ಸಿಗುತ್ತೆ ಸುಳಿವು
ಹಾವು ಕಚ್ಚುವ ಮುನ್ನ ಕಣ್ಣು ಪಟಪಟ ಅಂತ ಬಡೆದಿಕೊಳ್ಳಲು ಶುರುವಾಗುತ್ತೆ. ಈ ರೀತಿಯಾದ್ರೆ ಹಾವು ಕಚ್ಚಲಿದೆ ಎಂಬ ಭಯ ನನ್ನಲ್ಲಿ ಶುರುವಾಗುತ್ತದೆ ಎಂದು ವಿಕಾಸ್ ಹೇಳುತ್ತಾನೆ. ಬಾಲಾಜಿ ದೇವಸ್ಥಾನದ ಆಡಳಿತ ಮಂಡಳಿ ವಿಕಾಸ್ ಹಾಗೂ ಆತನ ಕುಟುಂಬಸ್ಥರಿಗೆ ಉಳಿದುಕೊಳ್ಳಲು ವಿಶೇಷ ವ್ಯವಸ್ಥೆಯನ್ನು ಕಲ್ಲಿಸಿದೆ. ಇಷ್ಟು ಮಾತ್ರವಲ್ಲದೇ ಗರ್ಭಗುಡಿಯೊಳಗೆ ಬಾಲಾಜಿ ವಿಗ್ರಹದ ಮುಂದೆಯೇ ಕುಳಿತು ಪೂಜೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇಷ್ಟೆಲ್ಲಾ ಆದರೂ ವಿಕಾಸ್ ಹಾಗೂ ಆತನ ಕುಟುಂಬಸ್ಥರಿಗೆ ಹಾವಿನ ಭಯ ಮಾತ್ರ ಕಡಿಮೆಯಾಗಿಲ್ಲ.