
ಮುಂಬೈ(ಆ.17): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಅನೇಕರ ನೌಕರಿ ನಷ್ಟವಾಯಿತು. ವೇತನ ಕಡಿತಗೊಂಡಿತು. ಸ್ವಂತ ಉದ್ಯೋಗ ಮಾಡುವವರ ಬದುಕು ಬೀದಿಗೆ ಬಂದಿದ್ದಾಯ್ತು. ಈಗ ಲಾಕ್‌ಡೌನ್ ಕರಿನೆರಳು ವಕೀಲ ಸಮುದಾಯದ ಮೇಲೂ ಬಿದ್ದಿದ್ದು ಸ್ಪಷ್ಟವಾಗಿದೆ. ಕೆಲವು ವಕೀಲರು ಮುಂಬೈನಲ್ಲಿ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ. ಕೆಲವರು ಆಹಾರ ಹಾಗೂ ವಸ್ತುಗಳ ಡೆಲಿವರಿ ಬಾಯ್ ಆಗಿ, ಕೆಲವರು ಆಟೋ ಚಾಲಕರಾಗಿ ಕೆಲಸ ಆರಂಭಿಸಿದ್ದಾರೆ.
ವಕೀಲರ ಕಾಯ್ದೆ ಪ್ರಕಾರ, ವಕೀಲರಾಗಿ ನೋಂದಾಯಿತರಾದವರು ಅನ್ಯ ವೃತ್ತಿ ಕೈಗೊಳ್ಳುವಂತಿಲ್ಲ. ಆದರೆ ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಆಯ್ದ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ. ಹೀಗಾಗಿ ವಕೀಲರಿಗೆ ಕೆಲಸ ಇಲ್ಲದೆ ಆದಾಯ ನಿಂತುಹೋಗಿದೆ. ಇದರಿಂದಾಗಿ ಅನಿವಾರ್ಯವಾಗಿ ಕೆಲವು ವಕೀಲರು ಹೊಟ್ಟೆಹೊರೆದುಕೊಳ್ಳಲು ತರಕಾರಿ, ಆಹಾರ, ವಸ್ತುಗಳ ಮಾರಾಟದಂತಹ ಅನ್ಯ ವೃತ್ತಿಗೆ ಇಳಿದಿದ್ದಾರೆ.
‘ನನ್ನ ಮನೆಯಲ್ಲಿ 6 ಮಂದಿ ಇದ್ದಾರೆ. ನನ್ನ ಬದುಕು ವಕೀಲಿಕೆ ಮೇಲೆಯೇ ನಡೆಯುತ್ತಿತ್ತು. ಕೆಲವೊಮ್ಮೆ ಅರ್ಧ ತಾಸು ವಾದ ಮಂಡಿಸಿ 1000 ರು. ಗಳಿಸುತ್ತಿದ್ದೆ. ಆದರೆ ಲಾಕ್‌ಡೌನ್ ಕಾರಣ ಕೋರ್ಟಿನ ಕೆಲಸ ಕಡಿಮೆ ಆಗಿದೆ. ಲಾಕ್‌ಡೌನ್ ಕಾರಣ ಪೊಲೀಸರು ಹೆಚ್ಚು ಬಂಧನಗಳನ್ನು ನಡೆಸುತ್ತಿಲ್ಲ. ಹೀಗಾಗಿ ಕೋರ್ಟಿಗೆ ಬರುವ ಅರ್ಜಿಗಳೂ ಕಡಿಮೆ ಆಗಿವೆ. ಹಿಂದಿನ ಉಳಿತಾಯ ಹಣದಲ್ಲೇ 2 ತಿಂಗಳು ಬದುಕಿದೆವು. ನಂತರ ಸ್ನೇಹಿತರ ಹತ್ತಿರ ಸಾಲ ಮಾಡಿದೆ. ನನ್ನ ಮಡದಿ ಆಭರಣ ಮಾರಿದಳು. ಆದರೆ, ಮಕ್ಕಳ ಶಾಲಾ ಫೀ ಕಟ್ಟಬೇಕು. ಬಾಡಿಗೆ ಕಟ್ಟಬೇಕು. ಪರಿಸ್ಥಿತಿ ಕೈಮೀರಿತು. ಹೀಗಾಗಿ ತರಕಾರಿ ಮಾರುತ್ತಿದ್ದೇನೆ’ ಎಂದು ಆದಿತ್ಯ ಕಶ್ಯಪ್ ಎಂಬ ವಕೀಲ ಹೇಳಿದರು.
ಇನ್ನು ಕಿರಿಯ ವಕೀಲರೊಬ್ಬರು, ‘ಲಾಕ್‌ಡೌನ್‌ನಿಂದ ಲೋಕಲ್ ರೈಲು ಸಂಚಾರ ಇಲ್ಲ. ಹಾಗಾಗಿ ಕೋರ್ಟಿಗೆ ಹೋಗಲು ಆಗುತ್ತಿಲ್ಲ. ಬದುಕಲು ಡೆಲಿವರಿ ಬಾಯ್ ಆಗಿದ್ದೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ