‘ಹಗ್ ಡೇ’ಗೆ ಕಾಂಗ್ರೆಸ್ ವಿಡಿಯೋ: ಮೋದಿ ಸೈಲೆಂಟ್ ಆದ್ರು ನೋಡಿಯೋ ನೋಡದೆಯೋ!

By Suvarna NewsFirst Published Feb 12, 2020, 3:40 PM IST
Highlights

ಇಂದು ಅಂತಾರಾಷ್ಟ್ರೀಯ ಅಪ್ಪುಗೆ ದಿನ| ಬಿಜೆಪಿಗೆ ಅಂತಾರಾಷ್ಟ್ರೀಯ ಅಪ್ಪುಗೆ ದಿನದ ಸಂದೇಶ ಕಳುಹಿಸಿದ ಕಾಂಗ್ರೆಸ್| ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಪ್ಪಿದ್ದ ವಿಡಿಯೋ ಟ್ವೀಟ್ ಮಾಡಿದ ಕಾಂಗ್ರೆಸ್| ‘ಈ ಜಗತ್ತು ಪ್ರೀತಿಯಿಂದ ಮುನ್ನಡೆಯುತ್ತದೆಯೇ ಹೊರತು ದ್ವೇಷದಿಂದಲ್ಲ’| ‘ಪ್ರಧಾನಿ ಮೋದಿ, ಬಿಜೆಪಿ ಹಾಗೂ RSS ದ್ವೇಷದ ರಾಜನೀತಿಯನ್ನು ಮಾಡುತ್ತವೆ’| ದ್ವೇಷದಿಂದ ಇದುವರೆಗೂ ಯಾವುದನ್ನೂ ಸಾಧಿಸಲಾಗಿಲ್ಲ ಎಂದ ಕಾಂಗ್ರೆಸ್| 

ನವದೆಹಲಿ(ಫೆ.12): ಅಂತಾರಾಷ್ಟ್ರೀಯ ಅಪ್ಪುಗೆ ದಿನದ ಅಂಗವಾಗಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿದ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಅಪ್ಪುಗೆ ದಿನದಂದು ಬಿಜೆಪಿಗೆ ಪ್ರೀತಿಯ ಸಂದೇಶ ಕಳುಹಿಸಲು ನಾವು ಬಯಸುತ್ತೇವೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಈ ಜಗತ್ತು ಪ್ರೀತಿಯಿಂದ ಮುನ್ನಡೆಯುತ್ತದೆಯೇ ಹೊರತು ದ್ವೇಷದಿಂದಲ್ಲ ಎಂದು ಬಿಜೆಪಿಯನ್ನು ಚುಚ್ಚಿದೆ.

Same message to BJP every year. Hug don't Hate. pic.twitter.com/3yXCzOZzCn

— Congress (@INCIndia)

ಪ್ರಧಾನಿ ಮೋದಿ, ಬಿಜೆಪಿ ಹಾಗೂ RSS ದ್ವೇಷದ ರಾಜನೀತಿಯನ್ನು ಮಾಡುತ್ತವೆ. ಆದರೆ ಕಾಂಗ್ರೆಸ್ ಎಂದೆಂದಿಗೂ ಪ್ರೀತಿಯ ರಾಜಕಾರಣ ಮಾಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಲೋಕಸಭೆಯಲ್ಲಿ ಪ್ರಧಾನಿ ತಬ್ಬಿಕೊಂಡ ರಾಹುಲ್!

ಅಂತಾರಾಷ್ಟ್ರೀಯ ಅಪ್ಪುಗೆ ದಿನದಂದು ನಾವು ಬಿಜೆಪಿಗೆ ಮತ್ತೆ ಪ್ರೀತಿಯ ಸಂದೇಶ ಕಳುಹಿಸಲು ಬಯಸುತ್ತೇವೆ. ದ್ವೇಷದಿಂದ ಇದುವರೆಗೂ ಯಾವುದನ್ನೂ ಸಾಧಿಸಲಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

2018ರಲ್ಲಿ ನಡೆದ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಲೋಕಸಭೆಯಲ್ಲಿ ಅಪ್ಪಿ ಅಭಿನಂದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಬಲವಂತದ ಅಪ್ಪಿಕೊಳ್ಳುವಿಕೆ ಏನೆಂದು ಸದನಕ್ಕೆ ಬಂದು ಕಲಿತೆ’! 

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!