‘ಕೇಮ್‌ಛೋ ಟ್ರಂಪ್‌’ ಅಹಮದಾಬಾದ್‌ನಲ್ಲಿ: ಎಕ್ಸೈಟ್ ಆಗಿದ್ದೇನೆ ಎಂದ ಟ್ರಂಪ್!

By Suvarna NewsFirst Published Feb 12, 2020, 3:13 PM IST
Highlights

ಎರಡು ದಿನಗಳ ಭಾರತ ಪ್ರವಾಸಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ| ಫೆ.24ರಂದು ಭಾರತಕ್ಕೆ ಪತ್ನಿ ಸಮೇತರಾಗಿ ಬರಲಿರುವ ಡೋನಾಲ್ಡ್ ಟ್ರಂಪ್| ಅಹಮದಾಬಾದ್‌ನಲ್ಲಿ ‘ಕೇಮ್‌ಛೋ ಟ್ರಂಪ್‌’ ಸಮಾರಂಭ ಆಯೋಜನೆ| ಅಹಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ‘ಕೇಮ್‌ಛೋ ಟ್ರಂಪ್‌’ ಸಮಾರಂಭ| ಹೌಡಿ ಮೋದಿ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಅಹಮದಾಬಾದ್‌ನಲ್ಲಿ ‘ಕೇಮ್‌ಛೋ ಟ್ರಂಪ್‌’| 

ನವದೆಹಲಿ(ಫೆ.11): ಇದೇ ಫೆ.24ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ಸ್ವಾಗತಕ್ಕೆ ಗುಜರಾತ್ ರಾಜಧಾನಿ ಅಹಮದಾಬಾದ್ ಸಜ್ಜಾಗಿದೆ.

ತಮ್ಮ ಭಾರತ ಭೇಟಿಯಲ್ಲಿ ಟ್ರಂಪ್ ಗುಜರಾತ್’ಗೂ ಭೇಟಿ ನೀಡಲಿದ್ದು, ಈ ವೇಳೆ ‘ಕೇಮ್‌ಛೋ ಟ್ರಂಪ್‌’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಹಮ್ಮಿಕೊಳ್ಳಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಂತೆಯೇ ಈ ಕಾರ್ಯಕ್ರಮವೂ ಇರಲಿದೆ.

Extremely delighted that and will visit India on 24th and 25th February. India will accord a memorable welcome to our esteemed guests.

This visit is a very special one and it will go a long way in further cementing India-USA friendship.

— Narendra Modi (@narendramodi)

ಅಹಮಾದಾಬಾದ್’ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೇಮ್‌ಛೋ ಟ್ರಂಪ್‌ ಕಾರ್ಯಕ್ರಮ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

24, 25ರಂದು ಭಾರತಕ್ಕೆ ಟ್ರಂಪ್‌, ಪತ್ನಿ ಜೊತೆ ದಿಲ್ಲಿ, ಅಹಮದಾಬಾದ್‌ ಟೂರ್!

ವಿಶೇಷವೆಂದರೆ ಈ ಸ್ಟೇಡಿಯಂನ್ನು ಖುದ್ದು ಡೋನಾಲ್ಡ್ ಟ್ರಂಪ್ ಉದ್ಘಾಟಿಸಲಿದ್ದು, ಉದ್ಘಾಟನೆ ದಿನದಂದೇ ಅದ್ದೂರಿ ಸಮಾರಂಭಕ್ಕೆ ಸರ್ದಾರ್ ಪಟೇಲ್ ಸ್ಟೇಡಿಯಂ ಸಾಕ್ಷಿಯಾಗಲಿದೆ.

India and USA share a common commitment to democracy and pluralism. Our nations are cooperating extensively on a wide range of issues. Robust friendship between our nations augurs well not only for our citizens but also for the entire world.

— Narendra Modi (@narendramodi)

ಇನ್ನು ತಮ್ಮ ಭಾರತ ಪ್ರವಾಸದ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಭಾರತ ಭೇಟಿಗೆ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಟ್ರಂಪ್ ಅವರೊಂದಿಗೆ ಪತ್ನಿ ಮೆಲನಿಯಾ ಟ್ರಂಪ್ ಕೂಡ ಭಾರತಕ್ಕೆ ಬರಲಿದ್ದು, ಅಮೆರಿಕ ಅಧ್ಯಕ್ಷರ ಸ್ವಾಗತಕ್ಕೆ ಭಾರತ ಸಜ್ಜಾಗಿದೆ.

click me!