
ಜಮ್ಮು(ಜೂ.28): ಜಮ್ಮುವಿನ ಐಎಎಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿ ಬೆನ್ನಲ್ಲೇ ಮತ್ತೆರಡು ಡ್ರೋನ್‌ಗಳು ಈ ಪ್ರದೇಶದಲ್ಲಿ ಕಂಡು ಬಂದಿದ್ದು, ಭಾರೀ ಆತಂಕ ಸೃಷ್ಟಿಸಿವೆ. ಡ್ರೋನ್‌ಗಳು ಪತ್ತೆಯಾದ ಬೆನ್ನಲ್ಲೇ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಡ್ರೋನ್‌ಗಳನ್ನು ಹೊಡೆದಟ್ಟಿಸಿವೆ.
ಪುಲ್ವಾಮಾ ಉಗ್ರರ ದಾಳಿ: ಮನೆಯೊಳಗೆ ನುಗ್ಗಿ ಪೊಲೀಸ್ ಅಧಿಕಾರಿ ಹಾಗೂ ಪತ್ನಿ ಹತ್ಯೆ!
ಜೂನ್ 27ರ ತಡರಾತ್ರಿ ಕಲುಚಕ್ ಮಿಲಿಟರಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳನ್ನು ಭಾರತೀಯ ಸೇನೆ ಗಮನಿಸಿದೆ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೈಅಲರ್ಟ್ ನೀಡಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ತಂಡಗಳು ಗುಂಡಿನ ದಾಳಿ ನಡೆಸಿವೆ. ಸೇನೆ ಸುಮಾರು 25 ಸುತ್ತಿನ ಗುಂಡಿನ ದಾಳಿ ನಡೆಸಿ ಡ್ರೋನ್‌ಗಳನ್ನು ಹಿಮ್ಮೆಟ್ಟಿಸಿವೆ.
ಸೇನೆ ನಡೆಸಿದ ಗುಂಡಿನ ದಾಳಿ ಬೆನ್ನಲ್ಲೇ ಎರಡೂ ಡ್ರೋನ್‌ಗಳು ಕಣ್ಮರೆಯಾಗಿವೆ. ಸೈನ್ಯದ ಜಾಗರೂಕತೆ ಮತ್ತು ಕ್ರಿಯಾಶೀಲ ಕಾರ್ಯಾಚರಣೆಯಿಂದ ಒಂದು ದೊಡ್ಡ ಆಪತ್ತು ದೂರವಾಗಿದೆ. ಸದ್ಯ ಡ್ರೋನ್‌ಗಳ ಮೂಲವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿದ್ದು, ವಾಯುಪಡೆಯ ನಿಲ್ದಾಣದ ನಂತರ, ಮಿಲಿಟರಿ ಕೇಂದ್ರದ ಮೇಲೆ ದಾಳಿ ನಡೆಸುವ ಪಿತೂರಿಯ ಭಾಗವಾಗಿ ಈ ಡ್ರೋನ್‌ಗಳನ್ನು ಹಾರಿಸಲಾಗಿತ್ತು ಎನ್ನಲಾಗಿದೆ.
ಪುಲ್ವಾಮಾ ಉಗ್ರರ ದಾಳಿ: ಮನೆಯೊಳಗೆ ನುಗ್ಗಿ ಪೊಲೀಸ್ ಅಧಿಕಾರಿ ಹಾಗೂ ಪತ್ನಿ ಹತ್ಯೆ!
ಹೈಅಲರ್ಟ್ ನಲ್ಲಿ ಮಿಲಿಟರಿ ಕೇಂದ್ರಗಳು :
ಡ್ರೋನ್ ದಾಳಿಯ ಆತಂಕದ ಹಿನ್ನೆಲೆಯಲ್ಲಿ ಮಿಲಿಟರಿ ನೆಲೆಗಳನ್ನು ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು ಹೊರತುಪಡಿಸಿ, ಪಠಾಣ್‌ಕೋಟ್‌ನ ಪ್ರಮುಖ ಮಿಲಿಟರಿ ನೆಲೆಗಳ ಸುತ್ತ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ. ಐದು ವರ್ಷಗಳ ಹಿಂದೆ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ