ಪುಲ್ವಾಮಾ ಉಗ್ರರ ದಾಳಿ: ಮನೆಯೊಳಗೆ ನುಗ್ಗಿ ಪೊಲೀಸ್‌ ಅಧಿಕಾರಿ ಹಾಗೂ ಪತ್ನಿ ಹತ್ಯೆ!

By Kannadaprabha News  |  First Published Jun 28, 2021, 11:26 AM IST

* ಜಮ್ಮುವಿನ ವಾಯುನೆಲೆ ಮೇಲಿನ ದಾಳಿ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸ

* ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ದಾಳಿ ನಡೆಸಿದ ಉಗ್ರರು

* ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿಯ ಹತ್ಯೆ, ಮಗಳಿಗೆ ಗಂಭೀರ ಗಾಯ


ಪುಲ್ವಾಮಾ(ಜೂ.28): ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್‌ ಮೂಲಕ ನಡೆದಿದ್ದ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದ ಉಗ್ರರು, ಭಾನುವಾರ ರಾತ್ರಿ ಪುಲ್ವಾಮಾದಲ್ಲಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ನುಗ್ಗಿಅಧಿಕಾರಿ ಮತ್ತು ಅವರ ಪತ್ನಿಯನ್ನು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಪೊಲೀಸ್‌ ಅಧಿಕಾರಿ ಮಗಳು ಗಾಯಗೊಂಡಿದ್ದಾರೆ.

ಆವಂತಿಪೋರಾದ ಹರಿಪರಿಗಂ ನಿವಾಸಿಯಾದ ಫಯಾಜ್ ಅಹಮದ್ ಮನೆಗೆ ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ನುಗ್ಗಿದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಫಯಾಜ್ ಅಹಮದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ರಜಾ ಬೇಗಮ್ ಹಾಗೂ ಮಗಳು ರಫಿಯಾರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದರೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಫಯಾಜ್ ಅವರ ಪುತ್ರಿ ರಫಿಯಾಗೆ ಚಿಕಿತ್ಸೆ ಮುಂದುವರೆಸಲಾಗಿದೆ. 

Woke up to the sad news of terrorists barging into the house of SPO of Awantipora & killing him , his wife & daughter .
The killings of security personnel’s continues & we discuss peace with the perpetrators of these crime.

🙏 pic.twitter.com/MoXTYmu37g

— Ashoke Pandit (@ashokepandit)

Latest Videos

ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ದಾಳಿ ಈ ಜಮ್ಮುವಿನ ವಾಯಪಡೆ ನಿಲ್ದಾಣದ ಮೇಲಾದ ಡ್ರೋನ್‌ ಅಟ್ಯಾಕ್‌ ದಿನವೇ ನಡೆದಿದೆ ಎಂಬುವುದು ಉಲ್ಲೇಖನೀಯ. ಭಾನುವಾರ ಬೆಳಗ್ಗೆ ಜಮ್ಮುವಿನ ಏರ್‌ಪೋರ್ಟ್‌ ಬಳಿ ಅವಳಿ ಬಾಂಬ್‌ ಸ್ಪೋಟ ಸಂಭವಿಸಿತ್ತು. ಡ್ರೋನ್‌ ಮೂಲಕ ಸ್ಪೋಟ ನಡೆಸಲಾಗಿತ್ತು. ಈ ಘಟನೆ ಬಳಿಕ ಸುಮಾರು 6 ಕೆಜಿ ತೂಕದ ಐಇಡಿ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಪೊಲೀಸರು ವಶಪಡಿಸಿಕೊಂಡಿದ್ದರು.
 

click me!