'ಅರ್ನಬ್‌' ಬೆನ್ನಲ್ಲೇ ಕರಾವಳಿಗೆ ಮತ್ತೊಂದು ಗಂಡಾಂತರ: ಆಂಧ್ರಕ್ಕೆ ಅಪ್ಪಳಿಸಲಿದೆ ‘ಮುರಸು’ ಚಂಡಮಾರುತ

Sathish Kumar KH   | Kannada Prabha
Published : Nov 02, 2026, 05:43 AM IST
cyclone murasu

ಸಾರಾಂಶ

'ಅರ್ನಬ್' ಚಂಡಮಾರುತದ ಬೆನ್ನಲ್ಲೇ 'ಮುರಸು' ಎಂಬ ಹೊಸ ಚಂಡಮಾರುತ ಮಂಗಳವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದರ ವೇಗ ಗಂಟೆಗೆ 100-110 ಕಿ.ಮೀ. ಇರಲಿದ್ದು, ಒಡಿಶಾದ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ.

ಭುವನೇಶ್ವರ: ದೇಶದ ಕರಾವಳಿ ರಾಜ್ಯಗಳನ್ನು ವಿಧ್ವಂಸಕ್ಕೆ ದೂಡಿದ ‘ಅರ್ನಬ್’ ಚಂಡಮಾರುತದ ಪರಿಣಾಮ ಮಾಸುವ ಮುನ್ನವೇ, ಮಂಗಳವಾರ ‘ಮುರಸು’ (ನಗಾರಿ) ಎಂಬ ಮತ್ತೊಂದು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ತಗ್ಗು ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಸ್ಥಳಾಂತಕ್ಕೆ ಸರ್ಕಾರ ಆದೇಶ ನೀಡಿದೆ.

ಒಡಿಶಾದ ತಗ್ಗು ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಸ್ಥಳಾಂತರ

ಚಂಡಮಾರುತಕ್ಕೆ ಪೂರಕವಾದ ವಾತಾವರಣ ಬಂಗಾಳಕೊಲ್ಲಿಯಲ್ಲಿ ಭಾನುವಾರ ಬೆಳಿಗ್ಗೆಯೇ ನಿರ್ಮಾಣವಾಗಿದೆ. ಇದು ಸೋಮವಾರದ ವೇಳೆಗೆ ಬಂಗಾಳಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ನಂತರ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಸಾಗಲಿದ್ದು, ಮಂಗಳವಾರದ ಬೆಳಗಿನ ಹೊತ್ತಿಗೆ ನೆಲ್ಲೂರು ಮತ್ತು ನರಸಾಪುರಗಳ ನಡುವೆ ತೀವ್ರ ಚಂಡಮಾರುತವಾಗಿ ದಕ್ಷಿಣ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ. ಇದರ ವೇಗ ಗಂಟೆಗೆ 100-110 ಕಿ.ಮೀ. ತೀವ್ರವಾಗಿರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಹೀಗಾಗಿ ಒಡಿಶಾದ ಕರಾವಳಿ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜ್ಞಾನೇಶ್ ಕುಮಾರ್ ಜೈಲಿಗಟ್ಟುತ್ತೇವೆ- ರಾಹುಲ್ ಗಾಂಧಿ: ವೋಟ್ ಚೋರಿ ಸರ್ಕಾರ ಕಿತ್ತೊಗೆಯುತ್ತೇವೆ- ಖರ್ಗೆ
India News Live: ಶೂರ್ಪನಖಿ ಕಥೆಯಿಂದ ನಾಸಿಕ್‌ಗೆ ಹೆಸರು ಬಂದಿದ್ದು ಹೇಗೆ? ರಾಮಾಯಣ ಕುರಿತ ರೋಚಕ ಸ್ಟೋರಿ