2027ರಿಂದಲೇ ಪ್ಲಾಸ್ಟಿಕ್ ನೋಟುಗಳ ಬಳಕೆ ಆರಂಭ: ಹಳೆ 10, 20 ಮುಖಬೆಲೆ ನೋಟುಗಳು ಚಾಲ್ತಿಯಲ್ಲಿರುತ್ತವೆಯೇ?

Sathish Kumar KH   | Kannada Prabha
Published : Nov 02, 2026, 05:39 AM IST
India Plastic Notes

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 1ರಿಂದ ಪ್ರಾಯೋಗಿಕವಾಗಿ ₹10 ಮತ್ತು ₹20 ಮುಖಬೆಲೆಯ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಬಿಡುಗಡೆ ಮಾಡಲಿದೆ. ಒಟ್ಟು 200 ಕೋಟಿ ಹೊಸ ನೋಟುಗಳು ಮಾರುಕಟ್ಟೆಗೆ ಬರಲಿದ್ದು, ಹಳೆಯ ಕಾಗದದ ನೋಟುಗಳು ಕೂಡ ಚಲಾವಣೆಯಲ್ಲಿರುತ್ತವೆ. ಈ ಹೊಸ ನೋಟುಗಳು ಹೆಚ್ಚು ಕಾಲ ಬಾಳಿಕೆ ಬರಲಿದ್ದು, ನಕಲು ಮಾಡುವುದು ಕಷ್ಟಕರವಾಗಿದೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಮಾದರಿಯ ₹10 ಮತ್ತು ₹20 ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪ್ರಾಯೋಗಿಕವಾಗಿ ಏ.1ರಿಂದ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.

ಪ್ರಸ್ತುತ ಚಲಾವಣೆಯಲ್ಲಿರುವ ₹10 ಮತ್ತು ₹20 ಕಾಗದದ ನೋಟುಗಳ ಗಾತ್ರ ಮತ್ತು ಅಳತೆಯನ್ನೇ ಈ ಹೊಸ ಪ್ಲಾಸ್ಟಿಕ್ ನೋಟುಗಳಿಗೂ ಮುಂದುವರಿಸಲಾಗುತ್ತದೆ. ಇದನ್ನು ನೋಡಿಕೊಂಡು ಮುಂದೆ ಇತರ ಮೌಲ್ಯದ ನೋಟುಗಳನ್ನು ಈಗಿನ ನೋಟುಗಳ ಮಾದರಿಯಲ್ಲೇ ಜಾರಿ ಮಾಡಲಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ತಮ್ಮ ಎಟಿಎಂ (ಎಟಿಎಂ) ಯಂತ್ರಗಳನ್ನು ಮರುವಿನ್ಯಾಸಗೊಳಿಸುವ ಹೆಚ್ಚುವರಿ ವೆಚ್ಚ ತಪ್ಪುತ್ತದೆ.

ಹಳೇ ನೋಟು ಬ್ಯಾನ್ ಇಲ್ಲ:

ಇದು ಕೇವಲ ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಹೊಸ ಪಾಲಿಮರ್ ನೋಟುಗಳ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಕಾಗದದ ನೋಟುಗಳು ಕೂಡ ಎಂದಿನಂತೆ ಚಲಾವಣೆಯಲ್ಲಿರುತ್ತವೆ.

200 ಕೋಟಿ ನೋಟುಗಳ ಮುದ್ರಣ:

ಈ ಯೋಜನೆಯಡಿ ರಿಸರ್ವ್ ಬ್ಯಾಂಕ್ ₹10 ಮುಖಬೆಲೆಯ 100 ಕೋಟಿ ನೋಟುಗಳು ಹಾಗೂ ₹20 ಮುಖಬೆಲೆಯ 100 ಕೋಟಿ ನೋಟುಗಳು ಸೇರಿದಂತೆ ಒಟ್ಟು 200 ಕೋಟಿ ಪಾಲಿಮರ್ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಪಾಲಿಮರ್ ನೋಟುಗಳ ಉಪಯೋಗ:

ಇವು ಪ್ಲಾಸ್ಟಿಕ್ ಮಿಶ್ರಿತ ವಸ್ತುವಿನಿಂದ ತಯಾರಾಗುವುದರಿಂದ ನೀರು ನಿರೋಧಕವಾಗಿದ್ದು, ಸುಲಭವಾಗಿ ಹರಿದು ಹೋಗುವುದಿಲ್ಲ. ಸಾಮಾನ್ಯ ಕಾಗದದ ನೋಟುಗಳಿಗಿಂತ ಇವು 3 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಇವುಗಳನ್ನು ನಕಲು ಮಾಡುವುದು ತುಂಬಾ ಕಷ್ಟ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜ್ಞಾನೇಶ್ ಕುಮಾರ್ ಜೈಲಿಗಟ್ಟುತ್ತೇವೆ- ರಾಹುಲ್ ಗಾಂಧಿ: ವೋಟ್ ಚೋರಿ ಸರ್ಕಾರ ಕಿತ್ತೊಗೆಯುತ್ತೇವೆ- ಖರ್ಗೆ
India News Live: ಶೂರ್ಪನಖಿ ಕಥೆಯಿಂದ ನಾಸಿಕ್‌ಗೆ ಹೆಸರು ಬಂದಿದ್ದು ಹೇಗೆ? ರಾಮಾಯಣ ಕುರಿತ ರೋಚಕ ಸ್ಟೋರಿ