Cyclone Jawad: ಒಡಿಶಾದ ಮೇಲೆ ಕಣ್ಣಿಟ್ಟ ಜೋವಾದ್ ಚಂಡಮಾರುತ

Published : Dec 02, 2021, 07:23 PM ISTUpdated : Dec 02, 2021, 07:32 PM IST
Cyclone Jawad: ಒಡಿಶಾದ ಮೇಲೆ ಕಣ್ಣಿಟ್ಟ ಜೋವಾದ್ ಚಂಡಮಾರುತ

ಸಾರಾಂಶ

ಭಾರತಕ್ಕೆ ಅಪ್ಪಳಿಸಲಿದೆ ಜೋವಾದ್ ಚಂಡಮಾರುತ ಒಡಿಶಾದಲ್ಲಿ ಹೆಚ್ಚಿದ ಭೀತಿ, ಹೈಅಲರ್ಟ್ ಘೋಷಣೆ ಉನ್ನತ ಅಧಿಕಾರಿಗಳ ಜತೆ ಮೋದಿ ಸಭೆ  

ಭುವನೇಶ್ವರ (ಡಿ.2): ದೇಶಕ್ಕೆ ಶೀಘ್ರವೇ ಜೋವಾದ್ (cyclone jawad) ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)  ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ  ಪ್ರಕಾರ ಜೋವಾದ್​ ಚಂಡಮಾರುತವು (Cyclone Jawad) 24 ಗಂಟೆಗಳಲ್ಲಿ ಬಲಗೊಳ್ಳುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಅಂದರೆ ಡಿಸೆಂಬರ್ 4ರ ಮುಂಜಾನೆ ಆಂಧ್ರಪ್ರದೇಶ (Andhra Pradesh), ಪಶ್ಚಿಮ  ಬಂಗಾಳ (west Bengal) ಮತ್ತು ಒಡಿಶಾ(Odisha) ಕರಾವಳಿ ತೀರಕ್ಕೆ ಅಪ್ಪಳಿಸಲಿದೆ.

ಪರಿಣಾಮವಾಗಿ  ಡಿಸೆಂಬರ್ 4 ಮತ್ತು 5ರಂದು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ. ಉಳಿದಂತೆ ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಾದ ಕೋಲ್ಕತ್ತ, ದಕ್ಷಿಣ ಮತ್ತು ಉತ್ತರದ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್​ಗ್ರಾಮ್​​ಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 Cyclone Jawad: ಆಂಧ್ರ, ಒಡಿಶಾಗೆ ಆತಂಕ, ಎಚ್ಚೆತ್ತ ಸರ್ಕಾರ: ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ

ಭಾರೀ ಮಳೆ (rain), ಅಪಾರ ಹಾನಿ: 
ದಕ್ಷಿಣ ಥೈಲ್ಯಾಂಡ್​​ನ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿ ಬಿರುಗಾಳಿ ಬೀಸಲಿದ್ದು, ಅದು ಚಂಡಮಾರುತ ಸ್ವರೂಪ ಪಡೆದುಕೊಳ್ಳಲಿದೆ.  ಬಳಿಕ ಅಂಡಮಾನ್​ ಸಾಗರದ ದಕ್ಷಿಣ ಕರಾವಳಿ ಮೂಲಕ ಡಿಸೆಂಬರ್​ 4ರಂದು ಭಾರತಕ್ಕೆ ಪ್ರವೇಶ ಪಡೆಯಲಿದೆ. ಪರಿಣಾಮವಾಗಿ ಬೀಳುವ ಭಯಂಕರ ಮಳೆಯಿಂದಾಗಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭೂಕುಸಿತದ ಜತೆಗೆ ಅಪಾರ ಹಾನಿಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದಲ್ಲದೆ, ಮುಂಬೈ ಗುಜರಾತ್ ಮತ್ತು ಉತ್ತರ ಮಧ್ಯ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಪ್ರಧಾನಿಯಿಂದ ಸಭೆ:
ಡಿಸೆಂಬರ್ 3 ರಿಂದ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (nadrendra modi) ಅವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ದೇಶದಲ್ಲಿನ ಚಂಡಮಾರುತ (cyclone) ಪರಿಸ್ಥಿತಿಯ ಅವಲೋಕನದ ಹಿನ್ನೆಲೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೋದಿಯವರಿಗೆ ಸಭೆಯಲ್ಲಿ ವಿವರಿಸಿದ್ದಾರೆ  ಎಂದು ತಿಳಿದುಬಂದಿದೆ. ಈಗಾಗಲೇ ಅಕಾಲಿಕ ಮಳೆಗೆ (Heavy rainfall) ದೇಶದ ಹಲವು ರಾಜ್ಯಗಳು ನಲುಗಿದ್ದು ವಿಪರೀತ ನಷ್ಟವಾಗಿದೆ. ಹೀಗಾಗಿ ಪ್ರಧಾನಿಯವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಭೆ ನಡೆಸಿದ್ದಾರೆ.

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

ಅಕ್ಟೋಬರ್ ಅಂತ್ಯದಲ್ಲೇ ಭಾರೀ ಮಳೆಯ ಸೂಚನೆ ನೀಡಿದ್ದ ಅಧಿಕಾರಿಗಳು: 
ಡಿಸೆಂಬರ್ ಮೊದಲ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ(Bay of Bengal) ಚಂಡಮಾರುತ (cyclone) ಏಳುವ ಸಾಧ್ಯತೆ  ಹೆಚ್ಚಿದ್ದು, ಒಡಿಶಾದಲ್ಲಿ ಡಿಸೆಂಬರ್​ 2ರಿಂದ 5ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರಾ ಅವರು ಅಕ್ಟೋಬರ್ ತಿಂಗಳಾಂತ್ಯದಲ್ಲೇ ಮಾಹಿತಿ ನೀಡಿದ್ದರು.  ಜತೆಗೆ ರಾಜಸ್ತಾನ (rajastan), ದೆಹಲಿ (delhi), ಹರಿಯಾಣ, ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ, ಉತ್ತರಾಖಂಡ್​ಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದ್ದು,  ಹವಾಮಾನದಲ್ಲಿ (weather) ಸಂಪೂರ್ಣ ಬದಲಾವಣೆ ಆಗಬಹುದು ಎಂದು ಐಎಂಸಿ ಸೈಂಟಿಸ್ಟ್ ಆರ್​.ಕೆ.ಜೆನಮಣಿ ಎಚ್ಚರಿಕೆ ನೀಡಿದ್ದರು.

Karnataka Rain Alert : ಮತ್ತೆ ರಾಜ್ಯಕ್ಕೆ 5 ದಿನ ಭಾರೀ ಮಳೆ ಎಚ್ಚರಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana