ಮನುಷ್ಯರು ಮಾತ್ರವಲ್ಲ, ಪ್ರಾಣಿ ಪಕ್ಷಿಗಳಲ್ಲೂ ಕೂಡ ಬುದ್ಧಿವಂತಿಕೆ ಇದೆ. ಎಲ್ಲವೂ ಜೊತೆಗಿದ್ದರೇ ಪರಿಸರ ಸಮತೋಲನದಿಂದ ಕೂಡುವುದು. ಪ್ರಾಣಿ ಪಕ್ಷಿಗಳು ಒಂದಕ್ಕೊಂಡು ಸಹಕರಿಸುತ್ತಾ ಬಾಳುವ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ಈಗಾಗಲೇ ನೋಡಿರಬಹುದು. ಅದಾಗ್ಯೂ ಇಲ್ಲೊಂದು ಅಪರೂಪದ ಸುಂದರವಾದ ವಿಡಿಯೋವಿದೆ. ಮೆತ್ತನೆಯ ಗೂಡು ಕಟ್ಟಲು ಬಯಸುವ ಕಾಗೆಯೊಂದು ಜಿಂಕೆಯ ಬಾಲದಿಂದ ತುಪ್ಪಳವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ಮೊಟ್ಟೆ ಇಡಲು ಬಯಸುತ್ತಿರುವ ಕಾಗೆ ಅಥವಾ ಇನ್ನಿತರ ಎಲ್ಲಾ ಪಕ್ಷಿಗಳು ಅದರ ರಕ್ಷಣೆಗಾಗಿ ಬೆಚ್ಚನೆಯ ಮೆತ್ತನೆಯ ಗೂಡುಗಳನ್ನು ಕಟ್ಟುತ್ತವೆ. ಅದಕ್ಕಾಗಿ ಎಲ್ಲಿಂದ ಎಲ್ಲಿಗೋ ಸಂಚರಿಸುವ ಹಕ್ಕಿಗಳು ಮೃದುವಾದ ವಸ್ತುಗಳನ್ನು ಹೆಕ್ಕಿ ತಂದು ಮೆತ್ತನೆಯ ಸೊಗಸಾದ ಗೂಡೊಂದನ್ನು ನಿರ್ಮಿಸುತ್ತವೆ. ಹಾಗೆಯೇ ಇಲ್ಲಿ ಕಾಗೆ ತನ್ನ ಮೊಟ್ಟೆಗಳ ರಕ್ಷಣೆಗಾಗಿ ಗೂಡು ಮಾಡುವ ಸಲುವಾಗಿ ಜಿಂಕೆಯ ತುಪ್ಪಳವನ್ನು ಕೀಳುತ್ತಿದೆ.
ಬೀದಿಯಲ್ಲಿ ಬಿದ್ದ ಸಿಗರೇಟ್ ತುಂಡು ಹೆಕ್ಕಲು ಕಾಗೆಗಳಿಗೆ ತರಬೇತಿ
ಕಾಗೆಗಳು ಮರದ ತುಂಡುಗಳು ಅಥವಾ ತಂತಿ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಬಳಸಿಕೊಂಡು ಮರಗಳ ಮೇಲೆ ತಮ್ಮ ಗೂಡುಗಳನ್ನು ನಿರ್ಮಿಸುತ್ತವೆ. ತಮ್ಮ ಗೂಡುಗಳನ್ನು ನಿರ್ಮಿಸಲು ಸಾಮಾನ್ಯವಾಗಿ ಲಿಂಟ್, ಬಟ್ಟೆ, ಕೂದಲು ಅಥವಾ ಇತರ ಮೃದುವಾದ ವಸ್ತುಗಳನ್ನು ಬಳಸುತ್ತವೆ. ತಮ್ಮ ಗೂಡುಗಳನ್ನು ನಿರ್ಮಿಸಲು ಸುಮಾರು ಎರಡು ವಾರಗಳನ್ನು ತೆಗೆದುಕೊಳ್ಳುತ್ತವೆ, ಅವುಗಳು ತಮ್ಮ ಮರಿಗಳು ಹಾರಲು ಸಾಧ್ಯವಾದ ನಂತರ ಗೂಡನ್ನು ಬಿಟ್ಟು ಬಿಡುತ್ತವೆ.
ಕೆಲವು ಪಕ್ಷಿಗಳು ಕೆಲವೊಮ್ಮೆ ತಮ್ಮ ಗೂಡುಗಳನ್ನು ನಿರ್ಮಿಸಲು ಪ್ರಾಣಿಗಳ ಉಣ್ಣೆ ಅಥವಾ ಕೂದಲನ್ನು ಬಳಸುತ್ತವೆ. ಕಾಗೆಯೊಂದು ತನ್ನ ಗೂಡಿಗಾಗಿ ಜಿಂಕೆಯ ಬಾಲದಿಂದ ತುಪ್ಪಳವನ್ನು ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ನೇಚರ್' ಎಂಬ ಪುಟದಿಂದ ಪೋಸ್ಟ್ ಮಾಡಲಾಗಿದೆ. ನನ್ನ ಗೂಡಿಗೆ ಇದು ಬೇಕು, ಧನ್ಯವಾದಗಳು ಸರ್ ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋವನ್ನು ಇದು 157 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ.
ಕಣ್ಣ ಮುಂದೆ ಜಿಂಕೆಗಳ ಹಿಂಡೆ ಇದ್ದರೂ ಕ್ಯಾರೇ ಅನ್ನದ ಹುಲಿ... ವಿಡಿಯೋ ವೈರಲ್
ವಿಡಿಯೋದಲ್ಲಿ ಕಾಣಿಸುವಂತೆ ಜಿಂಕೆಯೊಂದು ಪಾರ್ಕೊಂದರಲ್ಲಿ ಮಲಗಿದೆ. ಅಲ್ಲಿಗೆ ಬರುವ ಕಾಗೆ ಅದರ ಬಾಲದಿಂದ ತನ್ನ ಕೊಕ್ಕಿನಲ್ಲಿ ಎಷ್ಟು ತುಂಬಿಸಿಕೊಳ್ಳಲು ಸಾಧ್ಯವೋ ಅಷ್ಟೊಂದು ತುಪ್ಪಳವನ್ನು ಕೀಳುತ್ತದೆ. ಇದು ಜಿಂಕೆಯ(deer) ಗಮನಕ್ಕೆ ಬಂದರೂ ಅದೂ ಕೂಡ ಸುಮ್ಮನೆ ಕ್ಯಾರೇ ಮಾಡದೇ ಮಲಗಿಕೊಂಡೆ ಇದೆ. ಬಹುಶಃ ಜಿಂಕೆಯೂ ಕೂಡ ಇದನ್ನು ಆನಂದಿಸುತ್ತಿರುವಂತೆ ಕಾಣುತ್ತಿದೆ.
ನೀವು ಸಾಮಾನ್ಯವಾಗಿ ಕಾಡಿಗೆ ಮೇಯಲು ಬಿಟ್ಟ ಹಸುಗಳನ್ನು ನೋಡಿರಬಹುದು. ಅವುಗಳೊಂದಿಗೆ ಬಿಳಿ ಬಣ್ಣದ ಕೊಕ್ಕರೆಗಳು ಜೊತೆ ಜೊತೆಯಲ್ಲೇ ಸುತ್ತುವುದನ್ನು ನೀವು ಕಾಣಬಹುದು. ಅವುಗಳು ಹಸುಗಳ ದೇಹದಲ್ಲಿರುವ ಸಣ್ಣ ಕೀಟಗಳನ್ನು ತೆಗೆಯುವ ಮೂಲಕ ಅವುಗಳಿಗೆ ನಿರಾಳತೆ ನೀಡುತ್ತವೆ. ಜೊತೆಗೆ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ಇವುಗಳನ್ನು ಹಸುಗಳು ಕೂಡ ತಮ್ಮ ಬೆನ್ನ ಮೇಲೆ ಕೂರಿಸಿಕೊಂಡು ಸಾಗುತ್ತವೆ ಅಥವಾ ಅವುಗಳೇ ಹಸುಗಳ ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತವೆ. ನಿನಗಾಗಿ ನಾನು ನನಗಾಗಿ ನೀನು ಎಂಬ ಪ್ರಾಣಿಗಳ ಸಹಕಾರ ತತ್ವ ಇದಾಗಿದೆ.
ಒಟ್ಟಿನಲ್ಲಿ ಪ್ರಾಣಿಗಳಿಂದ ಮನುಷ್ಯರು ಕಲಿಯಬೇಕಿದ್ದು ತುಂಬಾ ಇದೆ.