ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 1 ವರ್ಷ 11 ತಿಂಗಳ ಪುಟಾಣಿ

By Anusha Kb  |  First Published Apr 21, 2022, 3:21 PM IST

ಕಿರಿಯ ವಯಸ್ಸಿನಲ್ಲೇ ಹುಬ್ಬೇರುವ ಸಾಧನೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 1ವರ್ಷ 11ತಿಂಗಳ ಪುಟಾಣಿ
ಮಗುವಿನ ಸಾಧನೆ ಕಂಡು ಹೆತ್ತವರೇ ಶಾಕ್


ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ 21). ಕೆಲ ಮಕ್ಕಳು ಹುಟ್ಟುತ್ತಲೆ ಅಗಾಧವಾದ ನೆನಪಿನ ಶಕ್ತಿಯನ್ನ ಪಡೆದಿರುತ್ವೆ. ನೋಡಿದ್ದನ್ನೆಲ್ಲ ನೆನಪಿಟ್ಟುಕೊಂಡು ವಾಪಾಸ್ ಹೇಳುವ ಮೂಲಕ ಹೆತ್ತವರನ್ನೆ ಅಚ್ಚರಿಗೀಡು ಮಾಡುತ್ವೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲು ಪುಟಾಣಿ ಮಗುವೊಂದು ತನ್ನ ನೆನಪಿನ ಶಕ್ತಿಯ ಮೂಲಕವೇ ದಾಖಲೆ ನಿರ್ಮಿಸಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Latest Videos

undefined

1 ವರ್ಷ 11 ತಿಂಗಳ ಮಗುವಿನ ಅಗಾಧ ಬುದ್ಧಿಶಕ್ತಿ..!

ಒಂದು ವರ್ಷ ಹನ್ನೊಂದು ತಿಂಗಳ ಮಗುವೊಂದು ತನ್ನಲ್ಲಿರುವ ಅಸಾಮಾನ್ಯ ಬುದ್ಧಿಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸಾಧಕರ ಪಟ್ಟಿಯಲ್ಲಿ ತನ್ನ ಹೆಸರು ದಾಖಲಿಸುವ ಮೂಲಕ ವಿಜಯಪುರ (Vijayapura) ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಮೂಲತಃ ನಿಡಗುಂದಿ ತಾಲೂಕಿನ ಇಟಗಿ (Itagi) ಗ್ರಾಮದವರಾದ ಚಂದ್ರು (Chandru) ಹಾಗೂ ಶಿಲ್ಪಾ ಗಣಾಚಾರಿ ದಂಪತಿಯ ಪುತ್ರ ಗಗನದೀಪ್ ಗಣಾಚಾರಿ ಈ ಸಾಧನೆಗೆ ಭಾಜನವಾಗಿರುವ ಅತೀ ಕಿರಿಯ ಬಾಲಕ. ತಂದೆ ಮುದ್ದೇಬಿಹಾಳ (Muddebihala) ಪಟ್ಟಣದ ಅಹಲ್ಯಾದೇವಿ ಹೋಳ್ಕರ (Ahalya Devi holkar ) ಪತ್ತಿನ ಸಹಕಾರಿ ಸಂಘದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. 

ಮೈಸೂರಿನ ಪುಟಾಣಿಯ ಸ್ಪ್ಯಾನಿಶ್‌ ದಾಖಲೆ!

ಸಾಧನೆಗೆ ವೇದಿಕೆಯಾದ ಇಂಡಿಯಾ ಬುಕ್ ಆಫ್ ರೆಕಾರ್ಡ್..!

ಗಗನ್‍ದೀಪ್‍ಗೆ ಹಲವು ಕಲೆಗಳು ಕರಗತವಾಗಿವೆ. ಆತನ ಜ್ಞಾನಶಕ್ತಿಯನ್ನು ಕಂಡು ಸ್ವತಃ ತಾಯಿಯೇ ಬೆರಗಾಗಿದ್ದು ಅದನ್ನು ವಿಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಗೆ ಕಳಿಸಿದಾಗ ಅಲ್ಲಿಂದ ಬಾಲಕನ ಅಸಾಮಾನ್ಯ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯ ಡಾ.ಬಿಷಪ್‍ರಾಯ್ ಚೌಧರಿ (Bishap Roy) ಪ್ರಶಂಸನಾಪತ್ರ ಕಳುಹಿಸಿದ್ದಾರೆ.

ರೆಕಾರ್ಡ್ ಮಾಡಿದ್ದು ಹೇಗೆ.?!

ಗಗನದೀಪ್ ಆಂಗ್ಲಭಾಷೆಯ ವರ್ಣಮಾಲೆ ಹೇಳುವುದು, ದೇಹದ 22 ಅಂಗಗಳನ್ನು ಗುರುತಿಸುವುದು, ಒಂಭತ್ತು ಬಗೆಯ ಒಳಾಂಗಣ,10 ಬಗೆಯ ಹೊರಾಂಗಣ ಕ್ರೀಡೆಗಳನ್ನು ಗುರುತಿಸುವುದು, ಐದು ಆಕಾರಗಳನ್ನು ಗುರುತಿಸುವಿಕೆ,10 ಉದ್ಯೋಗಗಳನ್ನು ಗುರುತಿಸುವಿಕೆ, ಐದು ಆರ್ಗನ್ಸ್ , 35 ಸಾಮಾನ್ಯ ಸಂಗತಿಗಳು, 35 ಪ್ರಾಣಿಗಳು, ಐದು ಪಕ್ಷಿಗಳು, ಏಳು ಕೀಟಗಳು,11 ವಿವಿಧ ಬಗೆಯ ವಾಹನಗಳು,ಎಂಟು ಹಣ್ಣುಗಳು, ಆರು ವಿವಿಧ ತರಕಾರಿಗಳು,13 ಆಹಾರದ ಹೆಸರುಗಳು, ಸಸಿಯ ನಾಲ್ಕು ಭಾಗಗಳು, 11 ವಿವಿಧ ಪ್ರಾಣಿಗಳ ಶಬ್ದಗಳನ್ನು ಗುರುತಿಸುವುದಲ್ಲದೇ ಅವುಗಳ ಹೆಸರು ಹೇಳುತ್ತಾನೆ. ಇದು ಕೇವಲ ಒಂದು ವರ್ಷ 11 ತಿಂಗಳಿಗೆ ಈ ಸಾಧನೆ ಮಾಡಿರುವ ಗಗನ್‍ದೀಪ್ (Gagandip) ಬಗ್ಗೆ ತಾಯಿ ಶಿಲ್ಪಾ ಗಣಾಚಾರಿ (Shilpa Ganachari) ಹಾಗೂ ತಂದೆ ಚಂದ್ರು ಗಣಾಚಾರಿ (Chandru Ganachari) ಸಂತಸವನ್ನ ಏಷ್ಯಾನೆಟ್ ಸುವರ್ಣ ನ್ಯೂಸ್‌.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.

Vijayapura: ಪುಟಾಣಿಗಳ ಸಾಧನೆಗೆ ಹುಬ್ಬೇರಿಸಿದ ಗುಮ್ಮಟನಗರಿ ಜನತೆ..!

ಹೆತ್ತವರಲ್ಲಿ ಆನಂದ..!

ಗಗನದೀಪ್ ಸಾಧನೆ, ನೆನಪಿನ ಶಕ್ತಿಯನ್ನ‌ ಕಂಡು ಸ್ವತಃ ಹೆತ್ತವರೇ ಅಚ್ಚರಿಗೊಂಡಿದ್ದಾರೆ. ಪುಟಾಣಿ ಚಿಕ್ಕವಯಸ್ಸಿನಲ್ಲಿ ಇಷ್ಟೆಲ್ಲ ವಸ್ತುಗಳು, ಪ್ರಾಣಿ ಸೇರಿ ಇತ್ಯಾದಿಗಳನ್ನ ಗುರುತಿಸೋದು ಅಚ್ಚರಿ ಪಡುವ ವಿಚಾರವೇ ಸರಿ. ಪೋಷಕರು ಹೇಳುವಂತೆ ಆತನಲ್ಲಿ ಪ್ರಶ್ನಿಸುವ ಸ್ವಭಾವ ಅಧಿಕವಾಗಿದ್ದು ಮನೆಯ ಮುಂದೆ ಏನೇ ಬಂದರೂ ಅದೇನು ಎಂದು ಕೇಳುತ್ತಾನೆ. ಅವನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೇ ಸಾಕುಬೇಕಾಗುತ್ತದೆ. ಈಗ ನಮ್ಮ ಪುತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ (India Book of Record) ಹೆಸರು ದಾಖಲಿಸಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ‌.

click me!