ಕಾಶಿ ವಿಶ್ವನಾಥನ ಶಿರದಲ್ಲಿ ಅರ್ಧಚಂದ್ರನ ದರ್ಶನ: ಅಪರೂಪದ ದೃಶ್ಯ ಭಾರಿ ವೈರಲ್

Published : Jan 27, 2026, 07:43 AM IST
A rare sight captured at Kashi Vishwanath Temple

ಸಾರಾಂಶ

ಕಾಶಿ ವಿಶ್ವನಾಥ ದೇವಾಲಯದ ಕಳಶದ ಮೇಲೆ ಅರ್ಧಚಂದ್ರ ನೇರವಾಗಿ ನೆಲೆನಿಂತಿರುವ ಅಪರೂಪದ ದೃಶ್ಯವೊಂದು ವೈರಲ್ ಆಗಿದೆ. ಶಿವನ ಜಡೆಯಲ್ಲಿ ಚಂದ್ರನಿರುವಂತೆಯೇ, ದೇಗುಲದ ಶಿಖರದ ಮೇಲೆ ಚಂದ್ರ ಕಾಣಿಸಿಕೊಂಡಿರುವುದು ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆಗೆ ಕಾರಣವಾಗಿದೆ.

ಕಾಶಿ ವಿಶ್ವನಾಥ ದೇಗುಲದಲ್ಲಿ ಅಪರೂಪದ ದೃಶ್ಯ:

ಕಾಶಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅಪರೂಪದ ದೃಶ್ಯವೊಂದು ಸೆರೆಯಾಗಿದ್ದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿವನಿಗೆ ಅರ್ಪಿತವಾದ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿರುವ ಈ ಶಿವ ದೇವಾಲಯವೂ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಇದು 7ನೇಯದಾಗಿದೆ. ಹಿಂದೂಗಳ ಭಕ್ತಿಕೇಂದ್ರವಾಗಿರುವ ಈ ದೇಗುಲದಲ್ಲೀಗ ಅಪರೂಪದ ದೃಶ್ಯವೊಂದು ಸೆರೆ ಆಗಿದೆ.

ಕಾಶಿ ವಿಶ್ವನಾಥ ದೇಗುಲದ ಕಳಶದ ಮೇಲೆ ನೇರವಾಗಿ ಅರ್ಧಚಂದ್ರ ನೆಲೆನಿಂತಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿವನ ತಲೆಯಲ್ಲಿ ಅರ್ಧಚಂದ್ರ ಇರುವುದನ್ನು ನೀವು ನೋಡಿರಬಹುದು. ಹಾಗೆಯೇ ಇಲ್ಲಿ ಶಿವನ ದೇಗುಲದ ಕಳಸದ ಮೇಲೆ ಚಂದ್ರ ನೆಲೆನಿಂತಿದ್ದು, ಅನೇಕರನ್ನು ಅಚ್ಚರಿಗೀಡು ಮಾಡಿದೆ. ಅನೇಕರು ಇದೊಂದು ಅಪರೂಪದ ಆಧ್ಮಾತ್ಮಿಕ ಸಂಕೇತ ಎಂದು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: IAS ಅಧಿಕಾರಿಗೆ ಹೇಗೆ ಸೆಲ್ಯೂಟ್ ಹೊಡಿಬೇಕು ಅನೋದೇ ಗೊತ್ತಿಲ್ವಾ: ಗಣರಾಜ್ಯೋತ್ಸವದ ವೇಳೆ ಮತ್ತೆ ಟ್ರೋಲ್ ಆದ ಟೀನಾ ದಾಬಿ

ಹೌದು ಕಾಶಿ ವಿಶ್ವನಾಥ ದೇವಾಲಯದ ಶಿಖರದ ಮೇಲೆ ನೇರವಾಗಿ ಕುಳಿತಿರುವ ಚಂದ್ರನ ಕಣ್ಮನ ಸೆಳೆಯುವ ಚಿತ್ರವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕಾಶಿ ವಿಶ್ವನಾಥ ದೇವಾಲಯದ ಮೇಲ್ಭಾಗದಲ್ಲಿ ಅರ್ಧಚಂದ್ರ ಕಾಣಿಸಿಕೊಂಡಿದ್ದು, ಇದು ಹಿಂದೆಂದು ಕಾಣದ ಅದ್ಭುತ ದೃಶ್ಯವಾಗಿ ಬದಲಾಗಿದೆ . ಈ ದೇವಾಲಯವು ಕಾಸ್ಮಿಕ್ ಸಂಕೇತಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಈ ದೃಶ್ಯ ಭಕ್ತರಿಗೆ ಅಪರೂಪದ ಆಕಾಶ ಜೋಡಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ. ಅರ್ಧಚಂದ್ರನನ್ನು ಹೆಚ್ಚಾಗಿ ಶಿವನೊಂದಿಗೆ ಕಾಣಬಹುದು. ಶಿವನು ಚಂದ್ರನನ್ನು ತನ್ನ ಜಡೆಯಲ್ಲಿ ಅಲಂಕರಿಸಿರುವುದನ್ನು ನೋಡಬಹುದು. ಹೀಗಾಗಿ ಕಾಶಿ ವಿಶ್ವನಾಥನ ದೇಗುಲದ ಕಳಶದ ಮೇಲೆ ನೆಲೆ ನಿಂತ ಚಂದ್ರನ ಅಪರೂಪದ ದೃಶ್ಯವು ಭಕ್ತರಲ್ಲಿ ಆಧ್ಮಾತ್ಮಿಕವಾದ ಚಿಂತನೆಗೆ ಕಾರಣವಾಗಿದೆ.

ಇದನ್ನೂ ಓದಿ:  ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ಬಣ್ಣಿಸಿದ್ದಾರೆ. ಹಲವರು ಇದನ್ನು ದೈವಿಕತೆಯ ಸಂಕೇತ ಎಂದು ಕರೆದರೆ ಇನ್ನೂ ಕೆಲವರು ಈ ದೃಶ್ಯವನ್ನು ಕಾಶಿಯ ಕಾಲಾತೀತ ಆಧ್ಯಾತ್ಮಿಕ ಪ್ರಭಾವಲಯದ ಜ್ಞಾಪನೆ ಎಂದು ಬಣ್ಣಿಸಿದರು.

ಕಾಶಿ ವಿಶ್ವನಾಥ ದೇವಾಲಯದ ಬಗ್ಗೆ

ಕಾಶಿ ವಿಶ್ವನಾಥ ದೇವಾಲಯವು ಪವಿತ್ರ ಗಂಗಾ ನದಿಯ ದಡದಲ್ಲಿದೆ, ಇದು ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಭಕ್ತರಿಗೆ ಆಧ್ಯಾತ್ಮಿಕ ಮಹತ್ವದ ಪ್ರಮುಖ ಕೇಂದ್ರವಾಗಿದೆ. ವಿಶ್ವದ ಅತ್ಯಂತ ಹಳೆಯ ನಗರ ಎಂದು ಕರೆಯಲ್ಪಡುವ ಕಾಶಿ, ಹಿಂದೂ ನಂಬಿಕೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ಕಾಶಿ ವಿಶ್ವನಾಥ ದೇವಾಲಯವು ಅದರ ಧಾರ್ಮಿಕ ಗುರುತಿನ ಹೃದಯಭಾಗದಲ್ಲಿದೆ. ಸಂಪ್ರದಾಯದ ಪ್ರಕಾರ, ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಗಂಗಾ ನದಿಯಲ್ಲಿ ಮುಳುಗುವುದು ಮೋಕ್ಷಕ್ಕೆ ಕಾರಣವಾಗುತ್ತದೆ ಅಥವಾ ಜನನ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಿ ನೀಡುತ್ತದೆ ಎಂದು ನಂಬಲಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಇಂದು ಭಾರತ-ಯುರೋಪ್‌ ನಡುವೆ ಮದರ್‌ ಆಫ್‌ ಆಲ್‌ ಡೀಲ್ಸ್?
IAS ಅಧಿಕಾರಿಗೆ ಹೇಗೆ ಸೆಲ್ಯೂಟ್ ಹೊಡಿಬೇಕು ಅನೋದೇ ಗೊತ್ತಿಲ್ವಾ: ಮತ್ತೆ ಟ್ರೋಲ್ ಆದ ಟೀನಾ ದಾಬಿ