ನವದೆಹಲಿ(ಮೇ.21): ಸತತ 10 ವಾರಗಳಿಂದ ಏರುಗತಿಯಲ್ಲಿದ್ದ ಕೋವಿಡ್ ಸೋಂಕು ಪ್ರಮಾಣ ಕಳೆದ 2 ವಾರದಿಂದ ಇಳಿಮುಖವಾಗಿ ಸಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇದೇ ವೇಳೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಶೇ.25ಕ್ಕೂಹೆಚ್ಚು ಪಾಸಿಟಿವಿಟಿ ದಾಖಲಾಗುತ್ತಿವೆ. 22 ರಾಜ್ಯಗಳಲ್ಲಿ ಶೇ.15ರಷ್ಟುಪಾಸಿಟಿವಿಟಿ ಪತ್ತೆಯಾಗುತ್ತಿದೆ ಎಂದು ತಿಳಿಸಿದೆ.
ಏಪ್ರಿಲ್ 29ರಿಂದ ಮೇ 5ರ ಅವಧಿಯಲ್ಲಿ 210 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಇಳಿಯುತ್ತಿತ್ತು. ಈಗ ಮೇ 13ರಿಂದ 19ರ ಅವಧಿಯಲ್ಲಿ ಪಾಸಿಟಿವಿಟಿ ದರ ಇಳಿಯುತ್ತಿರುವ ಜಿಲ್ಲೆಗಳ ಸಂಖ್ಯೆ 303ಕ್ಕೆ ಏರಿಕೆಯಾಗಿದೆ ಎಂದು ಅದು ಹೇಳಿದೆ.
undefined
ಜೂನ್ ಅಂತ್ಯಕ್ಕೆ 2ನೇ ಅಲೆ ಅಂತ್ಯ? 3ನೇ ಅಲೆ ಯಾವಾಗ.? .
ಫೆಬ್ರವರಿ ಮಧ್ಯಭಾಗದಿಂದ ಕೊರೋನಾ ಪರೀಕ್ಷೆಯನ್ನೂ ಹೆಚ್ಚಿಸಲಾಗಿದೆ. ಕಳೆದ 12 ವಾರಗಳಿಂದ ನಿತ್ಯ ಸರಾಸರಿ ಶೇ.2.3ರಷ್ಟುಹೆಚ್ಚು ಕೊರೋನಾ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಜೂನ್ ಅಂತ್ಯದ ವೇಳೆ ದೈನಂದಿನ ಪರೀಕ್ಷೆ ಸಾಮರ್ಥ್ಯವನ್ನು ಸರಾಸರಿ 45 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದೆ.
ಇದೇ ವೇಳೆ ಸಮೀಕ್ಷೆ ಪ್ರಕಾರ ಶೇ.50ರಷ್ಟುಜನರು ಈಗಲೂ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಧರಿಸುವವರಲ್ಲಿ ಶೇ.64ರಷ್ಟುಜನರು ಕೇವಲ ಬಾಯಿಯನ್ನು ಮಾತ್ರ ಕವರ್ ಮಾಡಿರುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದೆ.