ಪ್ರತಿದಿನ 45 ಲಕ್ಷ ಕೋವಿಡ್‌ ಟೆಸ್ಟ್‌ : ಹೆಚ್ಚಿಸಿ ಸೋಂಕಿನ ಓಟಕ್ಕೆ ಬ್ರೇಕ್‌

Kannadaprabha News   | Asianet News
Published : May 21, 2021, 09:13 AM ISTUpdated : May 21, 2021, 09:33 AM IST
ಪ್ರತಿದಿನ 45 ಲಕ್ಷ ಕೋವಿಡ್‌ ಟೆಸ್ಟ್‌ :  ಹೆಚ್ಚಿಸಿ ಸೋಂಕಿನ ಓಟಕ್ಕೆ ಬ್ರೇಕ್‌

ಸಾರಾಂಶ

ಪರೀಕ್ಷಾ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಣಯ ಹೆಚ್ಚು ಪರೀಕ್ಷೆ ಮಾಡಿದಷ್ಟೂಸೋಂಕು ನಿಯಂತ್ರಣ ಸಾಧ್ಯ  ಟೆಸ್ಟಿಂಗ್‌ ಕಿಟ್‌ಗಳಿಗೆ ರಾಜ್ಯಗಳಿಂದ ಭಾರಿ ಬೇಡಿಕೆ

ನವದೆಹಲಿ (ಮೇ.21):  ಗುರುವಾರ ದಾಖಲೆಯ 20.55 ಲಕ್ಷ ಕೊರೋನಾ ಟೆಸ್ಟ್‌ ನಡೆಸಿದ್ದ ಕೇಂದ್ರ ಸರ್ಕಾರ, ಈಗ ನಿತ್ಯದ ಪರೀಕ್ಷಾ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಹೆಚ್ಚು ಪರೀಕ್ಷೆ ಮಾಡಿದಷ್ಟೂಸೋಂಕು ನಿಯಂತ್ರಣ ಸಾಧ್ಯ ಧ್ಯೇಯದೊಂದಿಗೆ ಈ ಕ್ರಮಕ್ಕೆ ಮುಂದಾಗಿದೆ.

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್‌ ನಿರ್ದೇಶಕ ಬಲರಾಂ ಭಾರ್ಗವ, ‘ಈಗ ನಿತ್ಯ 16ರಿಂದ 20 ಲಕ್ಷ ಟೆಸ್ಟ್‌ ನಡೆಸುತ್ತಿದ್ದೇವೆ. ಈ ಮಾಸಾಂತ್ಯಕ್ಕೆ ನಿತ್ಯ 20 ಲಕ್ಷ ಟೆಸ್ಟ್‌ ನಡೆಸಲಿದ್ದೇವೆ. ಮುಂದಿನ ತಿಂಗಳು ಈ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸಲಿದ್ದೇವೆ’ ಎಂದರು.

ಕೊರೋನಾ ಅಟ್ಟಹಾಸ : ಒಂದೇ ತಿಂಗಳಲ್ಲಿ ವರ್ಷದಷ್ಟು ಕೇಸ್‌! ..

ಈ 45 ಲಕ್ಷ ಟೆಸ್ಟ್‌ಗಳಲ್ಲಿ 18 ಲಕ್ಷ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗಳಾಗಲಿದ್ದು, ಇನ್ನುಳಿದ 27 ಲಕ್ಷ ಟೆಸ್ಟ್‌ಗಳು ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ಗಳಾಗಲಿವೆ ಎಂದರು.

ಟೆಸ್ಟಿಂಗ್‌ ಕಿಟ್‌ಗಳಿಗೆ ರಾಜ್ಯಗಳಿಂದ ಭಾರಿ ಬೇಡಿಕೆ ಇದೆ. 105 ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ ಉತ್ಪಾದಕ ಕಂಪನಿಗಳು ಅರ್ಜಿ ಸಲ್ಲಿಸಿದ್ದು, 41ಕ್ಕೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 31 ಸ್ವದೇಶೀ ನಿರ್ಮಿತ ಕಿಟ್‌ಗಳಾಗಲಿವೆ ಎಂದು ಹೇಳಿದರು. ಈಗಾಗಲೇ ಕೇವಲ 15 ನಿಮಿಷದಲ್ಲಿ ಫಲಿತಾಂಶ ನೀಡುವ ಆ್ಯಂಟಿಜೆನ್‌ ಕಿಟ್‌ಗೆ ಅನುಮತಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌