
ನವದೆಹಲಿ(ಏ.28): ಭಾರತದಲ್ಲಿ ಕೊರೋನಾ ವೈರಸ್ ಅಪಾಯದ ಮಟ್ಟ ತಲುಪಿದೆ. ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಿದೆ. ಮೇ.01 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗಲಿದೆ. ಲಸಿಕಾ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿ ಲಸಿಕೆ ಹಾಕುವ ಅವಕಾಶವಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿ, ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು.
ಮುಟ್ಟಾಗಿದ್ದಾಗ ವ್ಯಾಕ್ಸೀನ್ ತಗೊಳ್ಬೋದಾ ?...
ಮೇ.01 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರ ಲಸಿಕೆ ಪಡೆಯಲು ಇಂದು(ಏ.28) ಸಂಜೆ 4 ಗಂಟೆಯಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಕುರಿತು ಕೇಂದ್ರ ಸರ್ಕಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಕೋವಿನ್ ವೆಬ್‌ಸೈಟ್, ಆರೋಗ್ಯ ಸೇತು, ಉಮಂಗ್ ಆ್ಯಪ್ ಮೂಲಕ ಲಸಿಕೆ ಪಡೆಯಲು ರಿಡಿಸ್ಟ್ರೇಶನ್ ಮಾಡಿಕೊಳ್ಳ ಬಹುದು. ಇನ್ನು ಲಸಿಕೆಯನ್ನು ಸರ್ಕಾರಿ ಹಾಗೂ ಖಾಸಗಿ ಕೇಂದ್ರಗಳಲ್ಲಿ ಹಾಕಿಸಿಕೊಳ್ಳಬಹುದು.
ಸರ್ಕಾರಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳವುದು ಹೇಗೆ?
1 ಸರ್ಕಾರಿ ಅಧೀಕೃತ https://www.cowin.gov.in/home ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ಅಥವಾ ಸೈನ್ ಇನ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
2 ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬಳಿಕ ಮೊಬೈಲ್‌ಗೆ ಬರುವ OTP ಜನರೇಟ್ ರಿಕ್ವೆಸ್ಟ್ ಕಳುಹಿಸಬೇಕು
3 ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಸಂಖ್ಯೆಯನ್ನು ನಮೂದಿಸಿ ವೆರಿಫೈ ಮಾಡಿಕೊಳ್ಳಬೇಕು.
4 ಹೆಸರು, ವಯಸ್ಸು, ಲಿಂಗ ಸೇರಿದಂತೆ ಕೆಲ ಮಾಹಿತಿಯನ್ನು ತುಂಬಬೇಕು
5 ವಿವರ ತುಂಬಿದ ಬಳಿಕ ರಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಬೇಕು. ಜೊತೆಗೆ ಶೆಡ್ಯೂಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು
6 ನಿಮ್ಮ ಏರಿಯಾದ ಪಿನ್‌ಕೋಡ್, ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು
7 ನೀವ ಪಡೆದುಕೊಳ್ಳಲು ಇಚ್ಚಿಸುವ ಅಥವಾ ನಿಮ್ಮ ಹತ್ತಿರದ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ನೀವು ಲಸಿಕೆ ಪಡೆಯಲು ಇಚ್ಚಿಸುವ ಸಮಯ ಹಾಗೂ ದಿನಾಂಕವನ್ನೂ ನಮೂದಿಸಿ ಕನ್ಫರ್ಮ್ ಬಟನ್ ಕ್ಲಿಕ್ ಮಾಡಬೇಕು
ಎರಡನೇ ಡೋಸ್ ವ್ಯಾಕ್ಸೀನ್ ಮಿಸ್ ಮಾಡಿದ್ರೆ ಏನಾಗುತ್ತೆ ?.
ಭಾರತದಲ್ಲಿ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಜನವರಿ 16ರಿಂದ ಭಾರತದಲ್ಲಿ ಲಸಿಕೆ ಅಭಿಯಾನ ಆರಂಭಗೊಂಡಿದೆ. ಈಗಾಗಲೇ 14 ಕೋಟಿ ಹೆಚ್ಚು ಡೋಸೇಜ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ