ಕೊರೋನಾ ಪತ್ತೆ ಹಚ್ಚಲು ದೇಶದಲ್ಲಿ ಮತ್ತಷ್ಟು ಕ್ರಮ: ಮಹತ್ವದ ಹೆಜ್ಜೆ ಇರಿಸಿದ ICMR!

By Suvarna News  |  First Published Apr 28, 2021, 1:18 PM IST

ಮಹತ್ವದ ಹೆಜ್ಜೆ ಇರಿಸಿದ ಐಸಿಎಂಆರ್‌| ಹೆಚ್ಚುವರಿ ಆರು ರೀತಿಯ ಟೆಸ್ಟಿಂಗ್‌ ಪ್ರಕ್ರಿಯೆಗೆ ಅನುಮತಿ| ಏರುತ್ತಿರುವ ಕೊರೋನಾ ಪ್ರಕರಣಗಳನ್ನು ಪತ್ತೆಹಚ್ಚುವ, ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ


ನವದೆಹಲಿ(ಏ,28): ಭಾರತದಲ್ಲಿ ಕೊರೋನಾ ಟೆಸ್ಟ್‌ ಸಂಬಂಧ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೆಚ್ಚುವರಿ ಆರು ರೀತಿಯ ಟೆಸ್ಟಿಂಗ್‌ ಪ್ರಕ್ರಿಯೆಗೆ ಅನುಮತಿ ನೀಡಿದೆ. ಸದ್ಯ ದೇಶದಲ್ಲಿ RT-PCR ಹಾಗೂ Rapid Antigen Test ಮೂಲಕ ಕೊರೋನಾ ಟೆಸ್ಟ್‌ ನಡೆಸಲಾಗುತ್ತಿದೆ. ಆದರೆ ಇನ್ಮುಂದೆ ಹೆಚ್ಚುವರಿ ಆರು ರೀತಿಯ ಕಿಟ್‌ ಮೂಲಕವೂ ಟೆಸ್ಟ್‌ ನಡೆಯಲಿದೆ. ವಿವಿಧ ದೇಶಗಳಲ್ಲಿ ಬಳಸಲಾಗುತ್ತಿರುವ ಕಿಟ್‌ಗಳನ್ನು ಇಲ್ಲೂ ಬಳಸಲಿದ್ದಾರೆ.

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ನಡುವೆಯೇ ಕೊರೋನಾ ಟೆಸ್ಟಿಂಗ್ ಕಿಟ್‌ ಲಭ್ಯತೆ ಹೆಚ್ಚಿಸುವ ಹಾಗೂ ಹೊಸ ಪರೀಕ್ಷಾ ಕಿಟ್‌ಗಳನ್ನು ಪರಿಚಯಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಸಿಎಂಆರ್‌ನ ಈ ಹೆಜ್ಜೆಯಿಂದ ಯೂರೋಪ್, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್‌ನ ಅನೇಕ ಅಂತಾರಾಷ್ಟ್ರೀಯ ಏಜೆನ್ಸಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಸೂಚಿಸಲಾದ ಏಜೆನ್ಸಿಗಳಿಗೆ ಲಾಭವಾಗಲಿದೆ.

Latest Videos

undefined

"

ಪ್ರಸ್ತುತ ಯುಎಸ್ ಫುಡ್ ಅಂಡ್ ಡ್ರಗ್ ರೆಗ್ಯುಲೇಟರ್ (ಯುಎಸ್ಎಫ್ಡಿಎ) ಅನುಮೋದಿಸಿದ ಕಿಟ್‌ಗಳನ್ನು  ಭಾರತದಲ್ಲಿ ವ್ಯಾಲಿಡೇಶನ್‌ನಿಂದ ಮುಕ್ತಗೊಳಿಸಲಾಗಿದೆ. ಈ ಮೂಲಕ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (ಡಿಸಿಜಿಐ) ನೇರ ಅನುಮತಿ ಪಡೆಯಲು ಅರ್ಹತೆ ಪಡೆದಿದೆ. 

ಇದೇ ಹಾದಿಯಲ್ಲಿ ಯುರೋಪಿಯನ್, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಡಬ್ಲ್ಯುಎಚ್‌ಒಗಳ ತುರ್ತು ಬಳಕೆಯ ಪಟ್ಟಿಯಲ್ಲಿರುವ ಏಜೆನ್ಸಿಗಳಳೂ ಇದೆ.  ಭಾರತದಲ್ಲಿ ಕಿಟ್‌ಗಳನ್ನು ಪರೀಕ್ಷಿಸಲು ಹಾಗೂ ಊರ್ಜಿತಗೊಳಿಸುವ ಅಗತ್ಯವಿರುವುದಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!