ಐಶ್ವರ್ಯಾ-ಹೃತಿಕ್‌ ಸ್ಟೈಲ್‌ ರೀತಿ ರಾಜಧಾನಿಯ ರಸ್ತೆಯಲ್ಲಿ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್!

Published : Sep 17, 2024, 08:10 PM IST
ಐಶ್ವರ್ಯಾ-ಹೃತಿಕ್‌ ಸ್ಟೈಲ್‌ ರೀತಿ ರಾಜಧಾನಿಯ ರಸ್ತೆಯಲ್ಲಿ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್!

ಸಾರಾಂಶ

ಯುವಜೋಡಿಯೊಂದು ಬೈಕ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಜೋಡಿಯ ನಡವಳಿಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನವದೆಹಲಿ: ನೀವು ಧೂಮ್-2 ಸಿನಿಮಾ ನೋಡಿದ್ದರೆ ಕೊನೆಯ ದೃಶ್ಯದಲ್ಲಿ ಹೃತಿಕ್ ರೋಷನ್ ಬೈಕ್ ಓಡಿಸುತ್ತಿದ್ದರೆ, ಐಶ್ವರ್ಯಾ ರೈ ಆಯಿಲ್ ಟ್ಯಾಂಕ್ ಮೇಲೆ ಕುಳಿತು ಹಿಂದೆ ಬರುವ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ. ಆದ್ರೆ ಇಂದು ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಜೋಡಿ, ಜನಸಂದಣಿಯ ರಸ್ತೆಯಲ್ಲಿ ಹೃತಿಕ್-ಐಶ್ವರ್ಯಾ ರೀತಿ ಕುಳಿತು ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಜೋಡಿಯ ರೊಮ್ಯಾನ್ಸ್   ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಇಂದಿನ ಯುವ ಪೀಳಿಗೆಯವರಿಗೆ ಎಲ್ಲಿ ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಸ್ವಲ್ಪವೂ ಅರಿವಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೈಕ್ ಹಿಂದೆಯೇ ಕಾರ್‌ನಲ್ಲಿದ್ದ ವ್ಯಕ್ತಿಯೋರ್ವ ಜೋಡಿಯ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿರೋದು ಸ್ಪಷ್ಟವಾಗಿ ಕಾಣುತ್ತದೆ. ಯುವಕ ಮತ್ತು ಯುವತಿ ಹೆಲ್ಮೆಟ್ ಸಹ ಹಾಕಿಲ್ಲ. ಪಕ್ಕದಲ್ಲಿಯೇ ಹೆವಿ ವೆಹಿಕಲ್ ವಾಹನಗಳು ಹೋಗುತ್ತಿದ್ದರೂ ಅಪಾಯವನ್ನು ಲೆಕ್ಕಿಸದೇ ಜೋಡಿ ಅಪಾಯಕಾರಿ ರೀತಿ ಸ್ಟಂಟ್ ಮಾಡುವ ಮೂಲಕ ರಸ್ತೆಯಲ್ಲಿ ಹೋಗುತ್ತಿದ್ದ ಬೇರೆ ಪ್ರಯಾಣಿಕರಿಗೂ ಭಯ ಹುಟ್ಟಿಸಿದ್ದಾರೆ. ನೆಟ್ಟಿಗರು ಇಬ್ಬರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ನಂಬರ್ ಕಾಣಿಸುತ್ತಿದೆ. ಹಾಗಾಗಿ ಇಬ್ಬರ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಅನಿಲ್ ಅಂಬಾನಿಗೆ ಹೊಡಿತು ಜಾಕ್‌ಪಾಟ್, ತೆರೆಯಿತು ಭಾಗ್ಯದ ಬಾಗಿಲು;  ₹1 ಲಕ್ಷ ಈಗ 27 ಲಕ್ಷ ಆಯ್ತು!

ವೈರಲ್ ಆಗಿರುವ ವಿಡಿಯೋವನ್ನು ದೆಹಲಿಯ ವಿಕಾಸಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಎಂದು ವರದಿಯಾಗಿದೆ. ಈ ವಿಡಿಯೋವನ್ನ ಎಕ್ಸ್ ಖಾತೆಯಲ್ಲಿ ವ್ಲಾಗರ್ ಒಬ್ಬರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್‌ ಮುಂಭಾಗದಲ್ಲಿರುವ ಇಂಧನ ಟ್ಯಾಂಕ್ ಮೇಲೆ ಕುಳಿತಿರೋದನ್ನು ನೋಡಬಹುದು. ಯುವಕ ಬೈಕ್ ಓಡಿಸುತ್ತಿದ್ದರೂ ಯುವತಿ ಮಾತ್ರ ಪದೇ ಪದೇ ಆತನನ್ನು ತಬ್ಬಿಕೊಳ್ಳುತ್ತಿರುತ್ತಾಳೆ. ಈ ಬೈಕ್ ಹಿಂದೆಯೇ ಬರುತ್ತಿದ್ದ ಕಾರ್‌ನಲ್ಲಿ ಕುಳಿತಿದ್ದ ವ್ಯಕ್ತಿ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರದಲ್ಲಿ ಸಿಎಂ ನಿವಾಸದ ಮುಖ್ಯರಸ್ತೆಯಲ್ಲಿ ಜೋಡಿ ಕಿಸ್ ಮಾಡಿತ್ತು. ತೆರೆದ ಕಾರ್‌ನಲ್ಲಿ ಜೋಡಿ ಹೊರ ಬಂದು ತುಟಿಗೆ ತುಟಿ ಸೇರಿಸಿದ್ದರು. ಇವರಿಬ್ಬರ ಚುಂಬನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿತ್ತು. ಚೆನ್ನೈನ ರಸ್ತೆಯಲ್ಲಿಯೂ ಇಂತಹುವುದೇ ಒಂದು ಘಟನೆ ನಡೆದಿದ್ದು, ಕಾನೂನು ವಿದ್ಯಾರ್ಥಿ ತನ್ನ ಸಂಗಾತಿ ಜೊತೆ ಕಾರ್‌ನ ಸನ್ ರೂಫ್ ತೆರೆದು ಕೈಯಲ್ಲೊಂದು ಮದ್ಯದ ಬಾಟೆಲ್ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದರು. ವಿಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಪತಿ -ಪತ್ನಿ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಅಧ್ಯಯನ ಏನು ಹೇಳುತ್ತೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!