ಉತ್ತಮ ನಾಳೆಯ ಭರವಸೆಯೊಂದಿಗೆ; ಕೋಕಾ ಕೋಲಾ ವಿಡಿಯೋ ಹಂಚಿಕೊಂಡ ಮಹೀಂದ್ರ!

Published : Apr 29, 2021, 05:06 PM IST
ಉತ್ತಮ ನಾಳೆಯ ಭರವಸೆಯೊಂದಿಗೆ; ಕೋಕಾ ಕೋಲಾ ವಿಡಿಯೋ ಹಂಚಿಕೊಂಡ ಮಹೀಂದ್ರ!

ಸಾರಾಂಶ

ಕೊರೋನಾ ವೈರಸ್ ಕಾರಣ ಇಡೀ ಜಗತ್ತೇ ಭರವಸೆ ಕಳೆದುಕೊಳ್ಳುತ್ತಿದೆ. ಭಯ ಆವರಿಸುತ್ತಿದೆ. ಆತಂಕ ಎದುರಾಗುತ್ತಿದೆ. ಸಮಸ್ಯೆಗಳು ಬೆಟ್ಟದಂತೆ ಕಾಣುತ್ತಿದೆ. ಮಾನಸಿಕ ನೆಮ್ಮದಿ ಇಲ್ಲದಾಗುತ್ತಿದೆ. ಇದರ ನಡುವೆ ಕೋಕಾ ಕೋಲಾ ಜಾಹೀರಾತು ಒಂದನ್ನು ಬಿಡುಗಡೆ ಮಾಡಿದೆ. ಭರವಸೆ ಹಾಗೂ ಆಶಾವಾದ ಸಂದೇಶ ನೀಡಿದ ಈ ವಿಡಿಯೋವನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಮುಂಬೈ(ಏ.29):  ಕೊರೋನಾ ವೈರಸ್ ವಕ್ಕರಿಸಿದ ಬಳಿಕ ವಿಶ್ವ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಈ ಕಠಿಣ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕೊರೋನಾ ನಿಯಮ ಪಾಲನೆ ಮಾಡುತ್ತಾ, ಸಾಂಕ್ರಾಮಿಕ ರೋಗದ ವಿರುದ್ಧ ಜನರು ಹೋರಾಡುತ್ತಿದ್ದಾರೆ. ಉತ್ತಮ ನಾಳೆಯ ಭರವಸೆಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇದೀಗ ಇದೇ ಸಂದೇಶ ಸಾರುವ ಕೋಕಾ ಕೋಲಾ ಜಾಹೀರಾತು ಭಾರಿ ಮೆಚ್ಚುಗೆ ಪಡೆದಿದೆ.

ಕೊಟ್ಟ ಮಾತಿನಂತೆ 1 ರೂ ಇಡ್ಲಿ ಅಜ್ಜಿಗೆ ಮನೆ; ಆನಂದ್ ಮಹೀಂದ್ರ ಕಾರ್ಯಕ್ಕೆ ದೇಶವೇ ಸಲಾಂ!.

ಕೊರೋನಾ ಸವಾಲನ್ನು ಜಗತ್ತು ಹೇಗೆ ಎದುರಿಸುತ್ತಿದೆ ಹಾಗೂ ಮಾನವೀಯ ಮೌಲ್ಯಗಳು, ಆಶಾವಾದಗಳು ಜನರಲ್ಲಿ ಹೇಗೆ ಮಿಳಿತವಾಗಿದೆ ಎಂಬುದನ್ನು ತೋರಿಸುವ ಈ ಜಾಹೀರಾತನ್ನು ಇದೀಗ ಭಾರತದ ಉದ್ಯಮಿ, ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋಕಾ ಕೋಲಾ ಜಾಹೀರಾತು ಭರವಸೆ ಹಾಗೂ ಆಶಾವಾದ ತುಂಬುವ ಜಾಹೀರಾತು ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ. ಟ್ವಿಟರ್ ಮೂಲಕ ಜಾಹೀರಾತನ್ನು ಮಹೀಂದ್ರ ಪೋಸ್ಟ್ ಮಾಡಿದ್ದಾರೆ.

 

ಕಳೆದ ವರ್ಷ ಬಿಡುಗಡೆ ಮಾಡಿದ ಈ ಜಾಹೀರಾತು ಈಗಲೂ ಪ್ರಸ್ತುತವಾಗಿದೆ. ಕೊರೋನಾ ಕಾರಣ ದಿಢೀರ್ ಬದಲಾದ ಬದುಕು, ಸಂಬಂಧಗಳ ನಡುವೆ ಮೂಡಿದ ಅಂತರ ನಿಯಮ, ಸಂಕಷ್ಟದಲ್ಲಿ ಹೆಗಲು ಕೊಟ್ಟ ಮಾನವೀಯ ಹೃದಯಗಳ ಸಮ್ಮಿಲನವನ್ನು ಈ ಜಾಹೀರಾತಿನಲ್ಲಿ ಚಿತ್ರಿಸಲಾಗಿದೆ.

2 ನಿಮಿಷ 14 ಸೆಕೆಂಡ್ ವೀಡಿಯೊ "ಮಾನವೀಯತೆ ಮೆರೆದ ಹೀರೋ" ಸಂದೇಶವನ್ನು ಹೊತ್ತು, ದಯೆ ಮತ್ತು ಭರವಸೆ ತುಂಬಿದ್ದಕ್ಕಾಗಿ ಧನ್ಯವಾದಗಳು ಎಂಬ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?