ಖಾಸಗಿ ಆಸ್ಪತ್ರೆ ಈಗ ಕೋವಿಡ್‌ ಸೆಂಟರ್: ರೋಗಿಗಳಿಗೆ ಉಚಿತ ಚಿಕಿತ್ಸೆ!

By Suvarna NewsFirst Published Apr 29, 2021, 4:47 PM IST
Highlights

ಕೊರೋನಾ ಕಾಲದಲ್ಲಿ ಕೊರೋನಾ ಸೆಂಟರ್‌ ಆಗಿ ಪರಿವರ್ತನೆಯಾದ ಖಾಸಗಿ ಆಸ್ಪತ್ರೆ| ಅವಕಾಶದ ಲಾಭ ಪಡೆಯುವವರೇ ಹೆಚ್ಚಿರುವಾಗ, ಮಾನವೀಯತೆ ಇನ್ನೂ ಬದುಕಿದೆ ಎಂದು ತೋರಿಸಿಕೊಟ್ಟ ಸಮಾಜಸೇವಕ

ರಾಯ್ಪುರ(ಏ.29): ಆಪತ್ತಿನ ಈ ಪರಿಸ್ಥಿತಿಯಲ್ಲಿ ಕೆಲವರು ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತಮ್ಮ ಬಳಿ ಇರುವುದೆಲ್ಲವನ್ನೂ ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಸದ್ಯ ಕೊರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ಛತ್ತೀಸ್‌ಗಢದ ಖಾಸಗಿ ಆಸ್ಪತ್ರೆಯೊಂದು ಇನ್ನೂರು ಬೆಡ್‌ಗಳ ಕೋವಿಡ್‌ ಸೆಂಟರ್‌ ಆಗಿ ಪರಿವರ್ತನೆಯಾಗಿದ್ದು, ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾರಂಭಿಸಿದೆ.

ಕೊರೋನಾ ರೋಗಿಗಳಿಗೆ ಶುಲ್ಕರಹಿತ ಚಿಕಿತ್ಸೆ

ಛತ್ತೀಸ್‌ಗಢದ ಕೃತಿ ಕೋವಿಡ್‌ ಕೇರ್‌ ಸೆಂಟರ್ ಕೊರೋನಾ ರೋಗಿಗಳಿಗೆ ಭರವಸೆಯ ಬೆಳಕಾಗಿದೆ. ಇಲ್ಲಿ ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂರು ಬೆಡ್‌ಗಳ ಈ ಆಸ್ಪತ್ರೆಯಲ್ಲಿ ಐವತ್ತು ಆಕ್ಸಿಜನ್ ಬೆಡ್‌ಗಳಿವೆ. 

"

ಹತ್ತು ಆಕ್ಸಿಜನ್ ಕಾನ್ಸಂಟ್ರೇಟರ್‌

ಈ ಆಸ್ಪತ್ರೆಯಲ್ಲಿ ಹತ್ತು ಆಕ್ಸಿಜನ್ ಕಾನ್ಸಂಟ್ರೇಟರ್‌ ಕೂಡಾ ಅಳವಡಿಸಲಾಗಿದೆ. ಇದನ್ನು ಹೊರತುಪಡಿಸಿ ಇಪ್ಪತ್ತೈದು ದಾದಿಯರು. ಐವರು ವೈದ್ಯರು ಹಾಗೂ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ಹಾಗೂ ವಾರ್ಡ್‌ ಬಾಯ್‌ ಕೂಡಾ ಇದ್ದಾರೆ. 

ಹೊಣೆ ಹೊತ್ತುಕೊಂಡ ಸಮಾಜಸೇವಕ

ಕೊರೋನಾದಿಂದಾಗಿ ಜನರ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಈ ಪರಿಸ್ಥಿತಿಯನ್ನು ಕಂಡ ಸಮಾಜ ಸೇವಕ ಬೃಜ್‌ಮೋಹನ್‌ ಅಗರ್ವಾಲ್ ಈ ಕೃತಿ ಖಾಸಗಿ ಆಸ್ಪತ್ರೆಯನ್ನು ಕೋವಿಡ್‌ ಸೆಂಟರ್‌ ಆಗಿ ಪರಿವರ್ತಿಸಿದ್ದಾರೆ. ಈ ಮೂಲಕ ಈ ಆಸ್ಪತ್ರೆ ಉಚಿತ ಸೇವೆ ನೀಡುತ್ತಿರುವ ಮೊದಲ ಕೋವಿಡ್ ಸೆಂಟರ್‌ ಎಂಬ ಹೆಗ್ಗಳಿಕೆ ಗಳಿಸಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!