'ಇಂಥ ವಿಷಮ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ'

By Suvarna NewsFirst Published Apr 29, 2021, 4:21 PM IST
Highlights

ಕೊರೋನಾ ವಿಷಮ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ/ ಮಹಾರಾಷ್ಟ್ರ ಸರ್ಕಾರದ ಆಗ್ರಹ/ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ/ ಮಹಾರಾಷ್ಟ್ರ ಮಾದರಿಯನ್ನು ಅನುಸರಿಸಿ

ಮುಂಬೈ(ಏ. 29) ಇಡೀ ದೇಶವೇ ಕೊರೋನಾ ಎರಡನೇ ಅಲೆ ಆತಂಕವನ್ನು ಎದುರಿಸುತ್ತಿದ್ದು ಕೇಂದ್ರ ಸರ್ಕಾರ ಈ  ವಿಷಮ  ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒತ್ತಾಯ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಕೊರೋನಾ ನಿರ್ವಹಣೆಗೆ ದೇಶದ ಅನೇಕ ಭಾಗಗಳು ಮಹಾರಾಷ್ಟ್ರ ಮಾದರಿ ಅನುಸರಿಸಬೇಕು ಎಂದರು. 

ಕೊರೋನಾದಿಂದ ಗುಣಮುಖರಾಗಿದ್ದೀರಾ.. ಯಾವಾಗ ಲಸಿಕೆ ತೆಗೆದುಕೊಳ್ಳಬೇಕು?

ಸುಪ್ರೀಂ ಕೋರ್ಟ್ ಸಹ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿದೆ.  ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳಬಾರದು ಎಂದು ರಾವತ್ ಹೇಳಿದರು.

ಒಂದು  ತಿಂಗಳಿನಿಂದ ಉದ್ಧವ್ ಠಾಕ್ರೆ ಒತ್ತಾಯ ಮಾಡುತ್ತಲೆ ಬಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಧಾನಿಗೆ ಠಾಕ್ರೆ ಪತ್ರ ಬರೆದಿದ್ದಾರೆ ಎಂಬ ವಿಚಾರವನ್ನು ತಿಳಿಸಿದರು. ದೇಶದಲ್ಲಿ ಕೊರೋನಾ ಸ್ಥಿತಿ ಗಂಭೀರ ಮಟ್ಟವನ್ನು ತಲುಪಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಟಫ್ ರೂಲ್ಸ್ ಮೊರೆ ಹೋಗಿವೆ.  ಮಾಹಾರಾಷ್ಟ್ರದಲ್ಲಿ ಒಂದೇ ದಿನ 63,309 ಹೊಸ ಕೇಸ್ ದಾಖಲಾಗಿದೆ. ಆದರೆ ಮುಂಬೈನಲ್ಲಿ ಸೋಂಕಿನ ಪ್ರಮಾಣ ತಗ್ಗಿದೆ. 

click me!