
ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಆಯೋಜಿಸಿದ ಸಂವಿಧಾನ ದಿನ(Constitution Day)ಆಚರಣೆ ಕಾರ್ಯಕ್ರಮದಲ್ಲಿ ಅವರು, ಪ್ರಚೋದಿತ ಹಾಗೂ ಉದ್ದೇಶ ಪೂರ್ವಕ ದಾಳಿಯಿಂದ ನ್ಯಾಯಾಂಗವನ್ನು ರಕ್ಷಿಸಿ ಎಂದು ವಕೀಲರಿಗೆ ಹೇಳಿದರು. ಚರ್ಚೆಗೆ ಅವಕಾಶ ನೀಡಿರುವುದೇ ಭಾರತೀಯ ಸಂವಿಧಾನದ ಮುಖ್ಯ ವೈಶಿಷ್ಟ್ಯವಾಗಿದೆ. ವಕೀಲರು ಹಾಗೂ ನ್ಯಾಯಾಧೀಶರು ಒಂದು ದೊಡ್ಡ ಕುಟುಂಬದ ಭಾಗ ನೀವೆಲ್ಲರೂ ನ್ಯಾಯಾಂಗ ಉಳಿವಿಗೆ ಶ್ರಮಿಸಬೇಕು. ಸಂಸ್ಥೆಯನ್ನು ಉದ್ದೇಶಿತ ದಾಳಿಯಿಂದ ರಕ್ಷಿಸಬೇಕು ಎಂದರು. ನವೆಂಬರ್ 26ರನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. 1949 ಈ ದಿನ ಸಂವಿಧಾನವನ್ನು ಭಾರತವೂ ಸಂವಿಧಾನವನ್ನು ಔಪಾಚಾರಿಕವಾಗಿ ಅಂಗೀಕರಿಸಿತು. ನಂತರ 1950ರ ಜನವರಿ 26 ರಂದು ಕಾರ್ಯ ರೂಪಕ್ಕೆ ಬಂತು ಎಂದರು.
ಇನ್ನೊಂದೆಡೆ ಸಂಸತ್ತಿನಲ್ಲಿ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ವಂಶ ರಾಜಕಾರಣವೂ ಸಂವಿಧಾನಕ್ಕೆ ಮಾರಕವಾಗಿದೆ ಎಂದು ಹೇಳಿದರು. ಕಾಶ್ಮೀರ(kashmir)ದಿಂದ ಕನ್ಯಾಕುಮಾರಿ(Kanyakumari)ವರೆಗೆ ವಂಶ ರಾಜಕೀಯವಿರುವ ಪಕ್ಷಗಳನ್ನು ನೋಡಬಹುದು. ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಪಕ್ಷವೊಂದು ಕುಟುಂಬವೊಂದರಿಂದ ನಡೆಯುತ್ತಿದ್ದರೆ ಪಕ್ಷದ ಸಂಪೂರ್ಣ ವ್ಯವಸ್ಥೆ ಕುಟುಂಬದ ಹಿಡಿತದಲ್ಲಿರುತ್ತದೆ. ಇದು ಆರೋಗ್ಯಯುತವಾದ ಪ್ರಜಾಪ್ರಭುತ್ವ(democracy)ಕ್ಕೆ ಮಾರಕವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
Constitution Day: ಸಂವಿಧಾನದ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (Baba Saheb Ambedkar) ಅವರಿಂದ ರಚಿಸಲ್ಪಟ್ಟ ಸಂವಿಧಾನ (Constitution) ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ನರೇಂದ್ರ ಮೋದಿಯವರು (Narendra Modi) ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ 2015ರಿಂದ ನವೆಂಬರ್ 26ನ್ನು ಸಂವಿಧಾನ ದಿವಸವನ್ನಾಗಿ ಆಚರಿಸಲು ಕರೆ ನೀಡಿದ್ದರು.
ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ(democracy) ವ್ಯವಸ್ಥೆಯ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗುತ್ತದೆ. ವಿವಿಧ ಭಾಷೆ, ಆಚರಣೆ, ಸಂಸ್ಕೃತಿ ಮತ್ತು ಭೌಗೋಳಿಕ ವೈವಿಧ್ಯತೆಗಳನ್ನು ಹೊಂದಿರುವ, 130 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಸಂವಿಧಾನವು ಆಚರಣೆಗೆ ಬಂದು ಎಪ್ಪತ್ತು ವರ್ಷಗಳನ್ನು ಪೂರೈಸಿದ್ದರೂ ಯಾವುದೇ ಅರಾಜಕತೆ ಹಾಗೂ ನೆರೆ ರಾಷ್ಟ್ರಗಳಲ್ಲಿ ಕಂಡು ಬರುವ ಸೈನಿಕ ದಂಗೆಗಳಂತಹ ಘಟನೆಗಳು ಸಂಭವಿಸಿಲ್ಲವೆಂದರೆ ಭಾರತ ಸಂವಿಧಾನದ ಗಟ್ಟಿತನವನ್ನು ಅರ್ಥೈಸಿಕೊಳ್ಳಬಹುದಾಗಿದೆ.
Constitution Day: 70 ವರ್ಷ ಕಳೆದರೂ ನೆರೆ ದೇಶಗಳಂತೆ ನಮ್ಮಲ್ಲಿ ಅರಾಜಕತೆ, ಸೈನಿಕ ದಂಗೆಗಳು ನಡೆದಿಲ್ಲ
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ದಣಿವರಿಯದ ಪ್ರಯತ್ನದ ಫಲವಾಗಿ ದೇಶಕ್ಕೆ ದೀರ್ಘವಾದ ಸಂವಿಧಾನ ರೂಪುಗೊಂಡಿತು. ಹೀಗೆ ರೂಪಿತವಾದ ಸಂವಿಧಾನದ ಪ್ರತಿಯನ್ನು ಡಾ.ಬಾಬು ರಾಜೇಂದ್ರ ಪ್ರಸಾದ್ (Dr. Babu Rajendra Prasad)ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆಯು 26 ನವೆಂಬರ್ 1949ರಂದು ಅಂಗೀಕರಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi)ಯವರ ಆಶಯದಂತೆ ದೇಶಾದ್ಯಂತ ನವೆಂಬರ್ 26ನ್ನು ಸಂವಿಧಾನ ರಚನಾ ದಿನವೆಂದು ಆಚರಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ