
ಹೌದು, ರಾಜಸ್ತಾನದ ಬರ್ಮೇರ್(Barmer)ಮೂಲದ ವಧುವೊಬ್ಬಳು, ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ತನಗೆ ನೀಡುವ ವರದಕ್ಷಿಣೆ ಹಣದಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸುವಂತೆ ತನ್ನ ತಂದೆಯ ಬಳಿ ಕೇಳಿಕೊಂಡಿದ್ದಾಳೆ. ಅಂಜಲಿ ಕನ್ವರ್(Anjali Kanwar)ಹೆಸರಿನ ವಧು ತನ್ನ ತಂದೆ ಕಿಶೋರ್ ಸಿಂಗ್ ಕನೋದ್(Kishore Singh Kanod)ಬಳಿ ಹೀಗೆ ಮನವಿ ಮಾಡಿದ್ದಾಳೆ. ಇವರು ರಾಜಸ್ಥಾನದ ಬರ್ಮೇರ್ ಜಿಲ್ಲೆಯವರು. ತನ್ನ ಮದುವೆಯ ವೇಳೆ ವರದಕ್ಷಿಣೆ ನೀಡಲು ಇಟ್ಟಿರುವ ಹಣದಲ್ಲಿ ಹಾಸ್ಟೆಲ್ ನಿರ್ಮಿಸುವಂತೆ ಆಕೆ ಕೇಳಿದ್ದಾಳೆ.
ಶಿಕ್ಷಣ ಪಡೆಯುತ್ತಿರುವಾಗಲೇ ಅಂಜಲಿ ತಾನು ಮದುವೆಯ ವೇಳೆ ವರದಕ್ಷಿಣೆ ಪಡೆಯಬಾರದು ಅದರ ಬದಲಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಏನಾದರೂ ಮಾಡಬೇಕು ಎಂದು ಬಯಸಿದ್ದರಂತೆ. ಇನ್ನು ಅಂಜಲಿ ಸಿಂಗ್ ವಿವಾಹವೂ ಪ್ರವೀಣ್ ಸಿಂಗ್(Praveen Singh) ಎಂಬವರ ಜೊತೆ ನವಂಬರ್ 21 ರಂದು ನಡೆದಿದೆ. ಮದುವೆಗೂ ಮೊದಲು ಆಕೆ ವರದಕ್ಷಿಣೆಯ ಹಣದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತೆ ಕೇಳಿದ್ದಾಳೆ. ಮದುವೆಯ ಎಲ್ಲಾ ಸಂಪ್ರದಾಯ ಮುಗಿದ ಮೇಲೆ ಆಕೆ ತರತರ ಮಠ(Taratara math)ದ ಮುಖ್ಯಸ್ಥ ಮಹಂತ್ ಪ್ರತಾಪ್ ಪುರಿ(Mahant Pratap Puri) ಅವರನ್ನು ಭೇಟಿಯಾಗಿದ್ದಾಳೆ.
Viral video: ಲೆಹೆಂಗಾ ಹಿಡಿಯಲು ಸಹಕರಿಸಿದ ಪತಿ, ಇಂಥವನು ನಮಗೂ ಸಿಗಬಾರದಾ ಎಂದ ಯುವತಿಯರು
ಬಳಿಕ ಪತ್ರದ ಮೂಲಕ ಅವರಿಗೆ ತನ್ನ ಮನದ ಬಯಕೆಯನ್ನು ತಿಳಿಸಿದ್ದಾಳೆ. ಈ ವೇಳೆ ಆಕೆಯ ಪತ್ರವನ್ನು ಮದುವೆಯಲ್ಲಿ ನರೆದಿದ್ದ ಅತಿಥಿಗಳ ಮುಂದೆ ಗಟ್ಟಿಯಾಗಿ ಓದಲಾಯಿತು. ಆಕೆಯ ಈ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಅಂಜಲಿಯ ತಂದೆ ಆಕೆಗೆ ಖಾಲಿ ಚೆಕ್ ನೀಡಿ ನಿನಗೆ ಬೇಕಾದಷ್ಟು ಹಣವನ್ನು ಬರೆದುಕೋ ಎಂದು ಹೇಳಿದರು. ಈ ವೇಳೆ ಮಾತನಾಡಿದ ತರತರ ಮಠ(Taratara math)ದ ಮುಖ್ಯಸ್ಥ ಮಹಂತ್ ಪ್ರತಾಪ್ ಪುರಿ, ಅಂಜಲಿ ತಂದೆ ಕಿಶೋರ್ ಸಿಂಗ್ ಕನೋದ್ ರಾಷ್ಟ್ರೀಯ ಹೆದ್ದಾರಿ 68(NH68)ರ ಸಮೀಪ ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಿಸಲು ಈಗಾಗಲೇ 1 ಕೋಟಿಯ ನೆರವನ್ನು ಘೋಷಿಸಿದ್ದಾರೆ. ಆದರೆ ಇದನ್ನು ಸಂಪೂರ್ಣಗೊಳಿಸಲು 50ರಿಂದ 75 ಲಕ್ಷ ಹಣ ಬೇಕು ಎಂದರು.
Exam First| ಶಿಕ್ಷಣವೇ ಮೊದಲು, ಮದುವೆ ಏನಿದ್ರೂ ಆಮೇಲೆ, ವಧುವಿನ ಆದ್ಯತೆಗೆ ನೆಟ್ಟಿಗರು ಫಿದಾ!
ಈ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅಂಜಲಿ, ಸಮಾಜದ ಟೀಕೆಗಳಿಗೆ ಯಾವುದೇ ತಲೆಕೆಡಿಸಿಕೊಳ್ಳದೇ ತನ್ನ ಕುಟುಂಬವೂ ತನಗೆ ಉತ್ತಮ ಶಿಕ್ಷಣ ನೀಡಿದೆ. ಆದರೆ ನನ್ನಂತೆ ಇತರ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು ಎಂಬುದು ನನ್ನ ಆಶಯ ಎಂದಿದ್ದಾರೆ. ಇನ್ನು ಮಗಳ ಆಸೆಯಂತೆ ತಂದೆ ಕನೋದ್ 75 ಲಕ್ಷವನ್ನೂ ಹಾಸ್ಟೆಲ್ ನಿರ್ಮಾಣಕ್ಕಾಗಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ