ಇಡೀ ದೇಶ ಮತ್ತೆ ಲಾಕ್‌ಡೌನ್‌ ಮಾಡಿ: ಸುಪ್ರೀಂಕೋರ್ಟ್‌!

By Kannadaprabha NewsFirst Published May 4, 2021, 7:17 AM IST
Highlights

ಇಡೀ ದೇಶ ಮತ್ತೆ ಲಾಕ್‌ಡೌನ್‌ ಮಾಡಿ: ಸುಪ್ರೀಂಕೋರ್ಟ್‌| ಕೋವಿಡ್‌ 2ನೇ ಅಲೆ ತಡೆಯಲು ಈ ಸಲಹೆ ಪರಿಗಣಿಸಿ| ಜನರ ಹಿತದೃಷ್ಟಿಯಿಂದ ಇದು ಅಗತ್ಯ| ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚನೆ

ನವದೆಹಲಿ(ಮೇ.04): ಕೊರೋನಾ ಸೋಂಕಿನ 2ನೇ ಅಲೆಯನ್ನು ತುಂಡರಿಸಲು ಕೆಲ ವಾರವಾದರೂ ಇಡೀ ಭಾರತವನ್ನು ಲಾಕ್‌ಡೌನ್‌ ಮಾಡಬೇಕು ಎಂದು ಅಮೆರಿಕ ಸಲಹೆ ಮಾಡಿದ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಕೂಡ ಅದೇ ರೀತಿಯ ಸಲಹೆ ನೀಡಿದೆ. ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಇಡೀ ದೇಶವನ್ನು ಲಾಕ್‌ಡೌನ್‌ ಮಾಡುವ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದೆ.

ಮೇ.12ರಿಂದ ಕರ್ನಾಟಕ ಲಾಕ್? : ಚರ್ಚಿಸಿ ಶೀಘ್ರ ನಿರ್ಧಾರವೆಂದ ಡಿಸಿಎಂ

ಕೋವಿಡ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ಭಾನುವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಹೆಚ್ಚು ಜನರು ಸೇರುವ ಸಮಾರಂಭ ಹಾಗೂ ಸೂಪರ್‌ ಸೆ್ೊ್ರಡರ್‌ ಕಾರ್ಯಕ್ರಮಗಳನ್ನು ನಿಷೇಧಿಸುವ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕೋರುತ್ತೇವೆ. ಇದೇ ವೇಳೆ ಸಾರ್ವಜನಿಕ ಕಲ್ಯಾಣದ ದೃಷ್ಟಿಯಿಂದ ಲಾಕ್‌ಡೌನ್‌ ಹೇರುವ ಕುರಿತು ಪರಿಶೀಲಿಸಬೇಕು. ಲಾಕ್‌ಡೌನ್‌ನಿಂದ ವಿಶೇಷವಾಗಿ ದುರ್ಬಲ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಪರಿಣಾಮವಾಗುತ್ತದೆ. ಹೀಗಾಗಿ ಲಾಕ್‌ಡೌನ್‌ ಹೇರುವ ಮುನ್ನ ಆ ಸಮುದಾಯಗಳ ಬಗ್ಗೆ ಕಾಳಜಿ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಮಾಡಿದೆ.

"

ಸೋಂಕು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ಇನ್ನು ಮುಂದೆ ಕೈಗೊಳ್ಳಲಿರುವ ಯೋಜನೆಗಳ ಕುರಿತು ವಿವರ ನೀಡಬೇಕು ಎಂದು ಇದೇ ವೇಳೆ ನ್ಯಾಯಪೀಠ ಸೂಚನೆ ನೀಡಿದೆ.

ಕೊರೋನಾ ಅಬ್ಬರ: ಮೇ. 8ರಿಂದ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್!

‘ಸುಪ್ರೀಂ’ ಹೇಳಿದ್ದೇನು?

ಹೆಚ್ಚು ಜನರು ಸೇರುವ ಸಮಾರಂಭ ಹಾಗೂ ಸೂಪರ್‌ ಸ್ಪ್ರೆಡರ್ ಕಾರ್ಯಕ್ರಮಗಳನ್ನು ನಿಷೇಧಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕ ಕಲ್ಯಾಣದ ದೃಷ್ಟಿಯಿಂದ ಲಾಕ್‌ಡೌನ್‌ ಜಾರಿಗೊಳಿಸುವ ಕುರಿತು ಪರಿಶೀಲಿಸಬೇಕು. ಲಾಕ್‌ಡೌನ್‌ನಿಂದ ಬಡವರಿಗೆ ಕಷ್ಟವಾಗುವುದರಿಂದ ಲಾಕ್‌ಡೌನ್‌ ಜಾರಿಗೂ ಮುನ್ನ ಆ ಸಮುದಾಯಗಳ ಬಗ್ಗೆ ಕಾಳಜಿ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!