ಮೈಲ್ಡ್ ಕೊರೋನಾಗೆ X-ray ಉತ್ತಮ; CT ಸ್ಕ್ಯಾನ್‌ನಿಂದ ಕ್ಯಾನ್ಸರ್ ಅಪಾಯ!

By Suvarna NewsFirst Published May 3, 2021, 7:26 PM IST
Highlights

ರೋಗ ಲಕ್ಷಣಗಳು ಇಲ್ಲದೆ ಕೊರೋನಾ ಪಾಸಿಟೀವ್ ಪ್ರಕರಣಗಳು ಹೆಚ್ಚು ಆತಂಕ ಹೆಚ್ಚಿಸಿದೆ. ಹೀಗಾಗಿ ಹಲವರು ಸಿಟಿ ಸ್ಕಾನ್ ಮೊರೆ ಹೋಗುತ್ತಿದ್ದಾರೆ. ಆದರೆ ಸಿಟಿ ಸ್ಕಾನ್ ತಂದೊಡ್ಡುವ ಅಪಾಯದ ಕುರಿತು ಏಮ್ಸ್ ನಿರ್ದೇಶಕ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ(ಮೇ.03): ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಜೊತೆಗೆ ಜನರಲ್ಲಿ ಆತಂಕದ ವಾತಾವರಣ ಕೂಡ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನರು ಕೊರೋನಾ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಆದರೆ ಮೈಲ್ಡ್ ರೋಗಲಕ್ಷಗಳು ಇದ್ದರೆ ನೇರವಾಗಿ ಸಿಟಿ ಸ್ಕಾನ್ ಮಾಡಿಸುವ ಬದಲು X-ray ಮಾಡಿಸಿಕೊಳ್ಳುವುದು ಉತ್ತಮ ಎಂದು ಎಮ್ಸ್ ನಿರ್ದೇಶ ಡಾ. ರಂದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.

ಡಬಲ್ ಮಾಸ್ಕ್ ಅವಶ್ಯಕವೇ? ಮನೆಯಲ್ಲೂ ಧರಿಸಬೇಕಾ? ಕೊರೋನಾ ಆತಂಕಕ್ಕೆ AIIMS ಉತ್ತರ!

"

ಅಧ್ಯನಯ ವರದಿಗಳ ಪ್ರಕಾರ ಶೇಕಡಾ 30-40 ರಷ್ಟು ಮಂದಿಗೆ ಕೊರೋನಾ ರೋಗಲಕ್ಷಣಗಳು ಕಂಡಬರುತ್ತಿಲ್ಲ. ಹೀಗಾಗಿ ಸಿಟಿ ಸ್ಕಾನ್ ಮಾಡಿಸಿ ಕೊರೋನಾ ಪತ್ತೆ ಹಚ್ಚಲಾಗುತ್ತಿದೆ. ಕೊರೋನಾ ಪರೀಕ್ಷಾ ಕೇಂದ್ರಗಳು ಕೂಡ ಸಿಟಿ ಸ್ಕಾನ್‌ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಸಿಟಿ ಸ್ಕಾನ್ ಮಾಡುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಿದೆ ಎಂದು ವೈದ್ಯ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ರೆಮ್‌ಡೆಸಿವಿರ್ ಮ್ಯಾಜಿಕ್‌ ಬುಲೆಟ್‌ ಅಲ್ಲ: ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ!

ಒಂದು ಸಿಟಿ ಸ್ಕಾನ್ 300 ರಿಂದ 400 ಎದೆ X-rayಗೆ ಸಮಾನವಾಗಿದೆ. ಅಷ್ಟು ಪ್ರಬಲವಾದ ವಿಕಿರಣಗಳು ದೇಹದಲ್ಲಿ ಅಪಾಯವನ್ನೇ ಸೃಷ್ಟಿಸುತ್ತದೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಿದೆ. X-ray ಮಾಡಿಸಿ ಕೊರೋನಾ ಕುರಿತು ಸ್ಪಷ್ಟ ವರದಿ ಬರದಿದ್ದರೆ, ವೈದ್ಯರು ಸಲಹೆ ಪಡೆದು ಸಿಟಿ ಸ್ಕಾನ್ ಮಾಡುವುದು ಉತ್ತಮ ಎಂದು ಗುಲೇರಿಯಾ ಹೇಳಿದ್ದಾರೆ.

ಪ್ರತಿ ಹಂತದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ಹೀಗಾಗಿ ಎಲ್ಲರೂ ಅತೀ ಎಚ್ಚರ ವಹಿಸಬೇಕು. ಜನರ ಸಂಪರ್ಕ ಕಡಿತಗೊಳಿಸಲು ಸುರಕ್ಷಿತವಾಗಿರಲು ಗುಲೇರಿಯಾ ಮನವಿ ಮಾಡಿದ್ದಾರೆ.
 

click me!