ಕೊರೋನಾ ನಿಯಂತ್ರಣಕ್ಕೆ ನೌಕಾಪಡೆ ಕಾರ್ಯಾಚರಣೆ ಪರಿಶೀಲಿಸಿದ ಪ್ರಧಾನಿ ಮೋದಿ!

By Suvarna News  |  First Published May 3, 2021, 9:24 PM IST

ಕೊರೋನಾ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕೇಂದ್ರ ಸರ್ಕಾರ ಭದ್ರತಾ ಪಡೆ ಸೇರಿದಂತೆ ಹಲವು ಸಂಸ್ಥೆಗಳ ನೆರವು ಪಡೆದಿದೆ. ಪ್ರಮುಖವಾಗಿ ಭಾರತೀಯ ಸೇನಾ ಪಡೆ, ನೌಕಾಪಡೆ ಹಾಗೂ ವಾಯುಸೇನೆ ಅವಿರತ ಶ್ರಮ ವಹಿಸುತ್ತಿದೆ. ಇದೀಗ ಪ್ರದಾನಿ ಮೋದಿ ನೌಕಾಪಡೆ ಕಾರ್ಯಾಚರಣೆಯನ್ನು ಪರಿಶೀಸಿದ್ದಾರೆ. 


ನವದೆಹಲಿ(ಮೇ.03): ದೇಶದಲ್ಲಿ ಕೊರೋನಾ 2ನೇ ಅಲೆ ಆತಂಕದ ವಾತಾವರಣ ಸೃಷ್ಟಿಸಿದೆ. ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮದ ಜೊತೆಗೆ ದೇಶ ಎದುರಿಸುತ್ತಿರುವ ವೈದ್ಯಕೀಯ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಇದಕ್ಕೆ ಭಾರತೀಯ ಭದ್ರತಾ ಪಡೆಗಳ ನೆರವು ಪಡೆದುಕೊಂಡಿದೆ. ಮೂರು ಪಡೆಗಳು ಶ್ರಮದಿಂದ ಭಾರತದ ಕೊರತೆಗಳು ನೀಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕಾರ್ಯಚರಣೆ ಕುರಿತು ನೌಕಾಪಡೆ ಅಡ್ಮಿರಲ್ ಕರಂಬೀರ್ ಸಿಂಗ್ ಜೊತೆ ಮಹತ್ವದ ಚರ್ಚೆ ನಡೆಸಿದರು.

ಯೂರೋಪಿಯನ್ ಅಧ್ಯಕ್ಷರ ಜೊತೆ ಮಾತುಕತೆ; ಬೆಂಬಲಕ್ಕೆ ಧನ್ಯವಾದ ಹೇಳಿದ ಮೋದಿ !

Latest Videos

undefined

ಕೊರೋನಾ ಮಾಹಾಮಾರಿ ಎದುರಿಸಲು ಭಾರತೀಯ ನೌಕಾಪಡೆ ಕಠಿಣ ಪ್ರಯತ್ನ ಪಡುತ್ತಿದೆ. ಇದಕ್ಕಾಗಿ ನೌಕಾಪಡೆ ಕೈಗೊಂಡಿರುವ ಕಾರ್ಯಗಳು ಕುರಿತು ಕರಂಬೀರ್ ಸಿಂಗ್, ಮೋದಿಗೆ ವಿವರಿಸಿದರು. ಭಾರತೀಯ ನೌಕಾಪಡೆ ಈಗಾಗಲೇ  ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ದ್ವೀಪ ರಾಷ್ಟ್ರದಲ್ಲಿ ಆಕ್ಸಿಜನ್ ಪೂರೈಕೆ ಮಾಡಿದೆ. ಇನ್ನು ವಿದೇಶಗಳಿಂದ ಆಕ್ಸಿಜನ್ ಕಂಟೈನರ್ಸ್ ಭಾರತಕ್ಕೆ ತಂದು ಪೂರೈಕೆ ಮಾಡಲಾಗಿದೆ ಎಂದು ಕರಂಬೀರ್ ಸಿಂಗ್ ವಿವರಿಸಿದ್ದಾರೆ.

ನೈಟ್ರೋಜನ್ ಘಟಕ ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ; ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ!

ಕೋವಿಡ್ ಕರ್ತವ್ಯಗಳನ್ನು ನಿರ್ವಹಿಸಲು ನೌಕಾಪಡೆಯ ವೈದ್ಯಕೀಯ ಸಿಬ್ಬಂದಿಯನ್ನು ದೇಶದ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.  ನೌಕಾ ಸಿಬ್ಬಂದಿಗೆ ಕೋವಿಡ್ ಕರ್ತವ್ಯದಲ್ಲಿ ನಿಯೋಜಿಸಲು ಬ್ಯಾಟಲ್ ಫೀಲ್ಡ್ ನರ್ಸಿಂಗ್ ಸಹಾಯಕ ತರಬೇತಿ ನೀಡಲಾಗುತ್ತಿದೆ ಎಂದು ಕರಂಬೀರ್ ಸಿಂಗ್ ಹೇಳಿದ್ದಾರೆ.

click me!