ಮಹಿಳೆ ಜೊತೆಗಿನ ಕಾಂಗ್ರೆಸ್ ನಾಯಕ ಯುನುಸ್ ಚೌಧರಿ ಆಕ್ಷೇಪಾರ್ಹ ವಿಡಿಯೋ ವೈರಲ್

By Mahmad Rafik  |  First Published Nov 2, 2024, 6:19 PM IST

ಕಾಂಗ್ರೆಸ್ ನಾಯಕ ಯುನುಸ್ ಚೌಧರಿಯವರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತನಿಖೆಗೆ ಆಗ್ರಹ ಕೇಳಿಬಂದಿದೆ. ಮಹಿಳೆಯೊಂದಿಗಿನ ಈ ವಿಡಿಯೋ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.


ನವದೆಹಲಿ: ಕಾಂಗ್ರೆಸ್‌ ನಾಯಕ ಯುನುಸ್ ಚೌಧರಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಯುನುಸ್ ಚೌಧರಿ, ಛಪ್ರೌಲಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಮಹಿಳೆ ಜೊತೆಗಿನ ವಿಡಿಯೋ ರಾಜಕೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಲಾಗುತ್ತಿದೆ. 

ಇದು ಭಾಗ್ಪತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯುನುಸ್ ಚೌಧರಿ. ಮೊದಲು ಮಹಿಳೆಗೆ ತನ್ನ ಮರ್ಮಾಂಗವನ್ನು ತೋರಿಸಿ, ನಂತರ ಆಕೆ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಬರೆದು ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪತ್ರಕರ್ತ ಸಚಿನ್ ಗುಪ್ತಾ ಎಂಬವರು ಹಂಚಿಕೊಂಡಿದ್ದಾರೆ. ಮಹಿಳೆ ತನ್ನನ್ನು ಹೋಗಲು ಬಿಡುವಂತೆ ಕೇಳಿದ್ರೂ ಯುನುಸ್ ಚೌಧರಿ ಆಕೆಯನ್ನು ತಡೆಯೋದನ್ನು ವಿಡಿಯೋದಲ್ಲಿ ಕಾಣಬಹುದು. 

Tap to resize

Latest Videos

undefined

ಇದು ಯಾವ ರೀತಿಯ ಫೈರ್? ಇದು ಯಾವ ರೀತಿಯ ಕಾಮ? 10 ನಿಮಿಷಗಳ ಆನಂದಕ್ಕಾಗಿ ಮನುಷ್ಯ ಎಲ್ಲ ಮಿತಿಗಳನ್ನು ಮರೆತು ತನ್ನ ಘನತೆ, ಗೌರವ, ಮನೆ, ಕುಟುಂಬ, ವೃತ್ತಿ, ಎಲ್ಲವನ್ನೂ ಪಣಕ್ಕಿಡುತ್ತಾನೆ. ಈ ವಿಷಯದಲ್ಲಿ ನೀವು ತುಂಬಾ ಉತ್ಸಾಹಿತರಾಗಿದ್ದರೆ ಲೈಂಗಿಕ ಕಾರ್ಯಕರ್ತೆಯ ಬಳಿಗೆ ಹೋಗಿ. ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಓರ್ವ ಬಳಕೆದಾರರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹರ್ಯಾಣ ಚುನಾವಣೆ 2024: ಕೇಂದ್ರ ಚುನಾವಣಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಗರಂ

ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇಂತಹ ಘಟನೆಗಳು ಸಾಮಾಜಿಕ ನೈತಿಕತೆಯನ್ನು ಉಲ್ಲಂಘಿಸುವುದಲ್ಲದೆ ನಮ್ಮ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ದೊಡ್ಡ ಬೆದರಿಕೆಯಾಗಿದೆ. ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಕಿರುಕುಳವನ್ನು ಸಹಿಸಬಾರದು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಜನರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ಕೂಡಲೇ ಇಂತಹವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಬೇಕು, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೆಲ ಬಳಕೆದಾರು ಒತ್ತಾಯಿಸಿದ್ದಾರೆ. ವಿವಾದಗಳು ಮುನ್ನಲೆಗೆ ಬರುತ್ತಿದ್ದಂತೆ ವೀಡಿಯೊದ ಮೂಲ ಮತ್ತು ಅದನ್ನು ಚಿತ್ರೀಕರಿಸಿದ ಸಂದರ್ಭದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂಬ ಆಗ್ರಹ ಸಹ ಕೇಳಿ ಬಂದಿದೆ.

ಇದನ್ನೂ ಓದಿ: ಬಿಜೆಪಿ ನಾಯಕಿ ಶೈನಾಗೆ ‘ಇಂಪೋರ್ಟೆಡ್ ಮಾಲು’ ಎಂದ ಮಹಾರಾಷ್ಟ್ರ ಸಂಸದ!

click me!