ಲಡಾಖ್ ಗಡಿಯ ಡೆಮ್ಚೊಕ್ ನಲ್ಲಿ ಭಾರತೀಯ ಸೈನಿಕರ ಗಸ್ತು ಆರಂಭ

By Kannadaprabha News  |  First Published Nov 2, 2024, 11:08 AM IST

ಭಾರತ- ಚೀನಾ ನಡುವೆ ನಾಲ್ಕೂವರೆ ವರ್ಷಗಳ ಹಿಂದೆ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭವಾಗಿದೆ.


ನವದೆಹಲಿ (ನ.2): ಭಾರತ- ಚೀನಾ ನಡುವೆ ನಾಲ್ಕೂವರೆ ವರ್ಷಗಳ ಹಿಂದೆ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭವಾಗಿದೆ. ಶುಕ್ರವಾರದಿಂದ ಡೆಮ್ಚೊಕ್‌ನಲ್ಲಿ ಭಾರತೀಯ ಯೋಧರು ಗಸ್ತು ತಿರುಗಲು ಆರಂಭಿಸಿದ್ದು, ಡೆಪ್ಸಾಂಗ್‌ನಲ್ಲಿ ಶೀಘ್ರದಲ್ಲೇ ಆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

2020ರಲ್ಲಿ ಭಾರತ- ಚೀನಾ ನಡುವೆ ಪೂರ್ವ ಲಡಾಕ್‌ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿತ್ತು. ಉಭಯ ದೇಶಗಳು ಭಾರಿ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ಜಮಾವಣೆ ಮಾಡಿದ್ದವು. ನಾಲ್ಕೂವರೆ ವರ್ಷಗಳ ಸತತ ಮಾತುಕತೆಯ ಬಳಿಕ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದವು. ಅದರಂತೆ ಸೈನಿಕರ ವಾಪಸಾತಿ ಪೂರ್ಣಗೊಂಡಿದ್ದು, ಇದೀಗ 2020ರ ಪೂರ್ವದಲ್ಲಿದ್ದಂತೆ ಗಸ್ತು ಪ್ರಾರಂಭ ಪ್ರಕ್ರಿಯೆ ಪ್ರಾರಂಭವಾಗಿದೆ.

Latest Videos

undefined

ಇಸ್ರೋ ಮತ್ತೊಂದು ಮೈಲಿಗಲ್ಲು; ಭಾರತದ ಮೊದಲ ಅನಲಾಗ್‌ ಅಂತರಿಕ್ಷ ಮಿಷನ್‌ ಕಾರ್ಯಾಚರಣೆ ಶುರು!

ಎರಡೂ ದೇಶಗಳ ಸಂಬಂಧ ಸುಧಾರಣೆಯಾಗಿರುವ ದ್ಯೋತಕವಾಗಿ ದೀಪಾವಳಿ ಪ್ರಯುಕ್ತ ಗುರುವಾರ ಭಾರತ- ಚೀನಾ ಯೋಧರು ಗಡಿಯ ಹಲವು ಪ್ರದೇಶಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದರು.

8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ PSLV-C37 ನೌಕೆಯ ಭಾಗ ಭೂಮಿಗೆ ವಾಪಸ್‌!

2020ರ ಜೂನ್‌ನಲ್ಲಿ ಎರಡೂ ದೇಶಗಳ ಸಂಘರ್ಷ ತಾರಕಕ್ಕೇರಿ ಉಭಯ ಕಡೆಯ ಸೈನಿಕರು ಪರಸ್ಪರ ಹೊಡೆದಾಡಿಕೊಂಡಿದ್ದರು. ತನ್ಮೂಲಕ ಅದು ಎರಡು ದೇಶಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂಘರ್ಷವಾಗಿ, ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

click me!