ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿ ಪಾತ್ರೆ ತೊಳೆದ ರಾಹುಲ್‌ ಗಾಂಧಿ

By Kannadaprabha News  |  First Published Oct 3, 2023, 11:46 AM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಅಮೃತಸರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿಖ್ಖರ ಅತ್ಯುನ್ನತ ಪವಿತ್ರ ಸ್ಥಳವಾದ ಅಕಾಲ್‌ ತಖ್ತ್‌ಗೆ ಭೇಟಿ ನೀಡಿದ ರಾಹುಲ್‌, ಅಲ್ಲಿ ಭಕ್ತರು ಬಳಸಿದ ನೀರಿನ ಬಟ್ಟಲುಗಳನ್ನು ತೊಳೆಯುವ ಮೂಲಕ ಸೇವೆ ಸಲ್ಲಿಸಿದರು. ಇಲ್ಲಿ ಇಂದು ನಡೆಯಲಿರುವ ಪಾಲ್ಕಿ ಸೇವೆಯಲ್ಲೂ ರಾಹುಲ್‌ ಭಾಗಿಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಂಜಾಬ್‌ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ರಾರಾ ರಾಹುಲ್‌ ಗಾಂಧಿ ಅವರು ಪಂಜಾಬ್‌ಗೆ ಆಗಮಿಸಿರುವುದು ತಮ್ಮ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಭೇಟಿಯಾಗಿದೆ. ಅವರ ಖಾಸಗಿತನವನ್ನು ಗೌರವಿಸೋಣ ಎಂದಿದ್ದಾರೆ.

ರಾಹುಲ್ ಗಾಂಧಿ ತಟ್ಟೆ ತೊಳೆಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Shri ji is coming to Amritsar Sahib to pay obeisance at Sachkhand Shri Harmandir Sahib. This is his personal, spiritual visit, let’s respect his privacy. Request all party workers to not be physically present for this visit. You all can show your support in spirit &…

— Amarinder Singh Raja Warring (@RajaBrar_INC)

অমৃতসৰৰ স্বৰ্ণ মন্দিৰত কংগ্ৰেছ সাংসদ ৰাহুল গান্ধী

(Source Congress) pic.twitter.com/uazXDaCYnE

— DY365 (@DY365)

ದೇಶದ ಹಲವು ರಾಜ್ಯಗಳಲ್ಲಿದೆ ಜಗದೋದ್ಧಾರಕನಿಗೆ ಆಸ್ತಿ: ಪುರಿ ಜಗನ್ನಾಥ ಎಷ್ಟೊಂದು ಶ್ರೀಮಂತ

Tap to resize

Latest Videos

ಮಾನಸಿಕ ಅಸ್ವಸ್ಥನಿಂದ ವಿಮಾನದಲ್ಲಿ ಕಿರಿಕ್‌
ಪಟನಾ: ಅಹಮದಾಬಾದ್‌ನಿಂದ ಪಟನಾಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವ್ಯಕ್ತಿಯನ್ನು ರಿಯಾಜ಼್ ಎಂದು ಗುರುತಿಸಲಾಗಿದ್ದು ತಮ್ಮ ಸಹೋದರನೊಂದಿಗೆ ವಿಮಾನದಲ್ಲಿ ಚಿಕಿತ್ಸೆಗಾಗಿ ಪ್ರಯಾಣಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಹಾಗಾಗಿ ಪಟನಾದಲ್ಲಿ ವಿಮಾನ ಲ್ಯಾಂಡ್‌ ಆದ ತಕ್ಷಣ ಆತನನ್ನು ವಶಕ್ಕೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.

ಹೆಸರಿಡುವ ವಿಚಾರಕ್ಕೆ ಅಪ್ಪ ಅಮ್ಮನ ನಡುವೆ ಜಗಳ: ಮಗುವಿಗೆ ಕೋರ್ಟ್‌ನಿಂದಲೇ ನಾಮಕರಣ...!

click me!