ಕಾಶ್ಮೀರಕ್ಕೆ ಸ್ವಾತಂತ್ರ ನೀಡಿ, ಭಗವಾ ಧ್ವಜ ಉರಿಯಲಿದೆ : ಜೆಎನ್‌ಯುದಲ್ಲಿ ಮತ್ತೆ ದೇಶ ವಿರೋಧಿ ಬರಹ

By Kannadaprabha News  |  First Published Oct 3, 2023, 11:13 AM IST

ದೆಹಲಿಯ ಜೆಎನ್‌ಯು ವಿವಿಯ ಗೋಡೆಗಳ ಮೇಲೆ ಮತ್ತೆ ದೇಶ ವಿರೋಧಿ ಮತ್ತು ಕೋಮು ಭಾವನೆ ಕೆರಳಿಸುವ ಬರಹಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ.


ನವದೆಹಲಿ: ವಿದ್ಯಾರ್ಥಿಗಳ ಘರ್ಷಣೆ, ರಾಜಕೀಯ, ಧಾರ್ಮಿಕ ಸಂಘರ್ಷಗಳಿಂದ ಆಗಾಗ್ಗೆ ವಿವಾದಕ್ಕೀಡಾಗುವ ದೇಶದ ಅತ್ಯಂತ ಪ್ರತಿಷ್ಠಿತ ವಿವಿಗಳ ಪೈಕಿ ಒಂದಾದ ದೆಹಲಿಯ ಜೆಎನ್‌ಯು (ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ) ವಿವಿ ಮತ್ತೆ ಅಂಥದ್ದೇ ಕಾರಣಕ್ಕೆ ವಿವಾದದ ಕೇಂದ್ರಬಿಂದುವಾಗಿದೆ. ವಿವಿಯ ಗೋಡೆಗಳ ಮೇಲೆ ಮತ್ತೆ ದೇಶ ವಿರೋಧಿ ಮತ್ತು ಕೋಮು ಭಾವನೆ ಕೆರಳಿಸುವ ಬರಹ ಬರೆದಿರುವುದು ಬೆಳಕಿಗೆ ಬಂದಿದೆ.

ವಿವಿಯ ಗೋಡೆಗಳ ಮೇಲೆ ‘ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ’, ‘ಭಾರತ ಆಕ್ರಮಿತ ಕಾಶ್ಮೀರ’ ‘ನಿಮ್ಮ ಸಮಾಧಿ ಅಗೆಯುತ್ತೇವೆ’ (We will dig your grave) ಮತ್ತು ‘ಭಗವಾ ಉರಿಯುತ್ತದೆ’ (Bhagava will burn) ಎಂಬ ಕೋಮು ಪ್ರಚೋದನಕಾರಿ ಹಾಗೂ ದೇಶ ವಿರೋಧಿ ಬರಹಗಳನ್ನು ಗೀಚಿರುವುದು ಭಾನುವಾರ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 

Tap to resize

Latest Videos

ಜೆಎನ್‌ಯು ಗೋಡೆಗಳ ಇಂತಹ ಬರಹಗಳ ಗೀಚುವಿಕೆ ಇದೇ ಮೊದಲೇನಲ್ಲ ಕಳೆದ ವರ್ಷವೂ ಬ್ರಾಹ್ಮಣ ವಿರೋಧಿ ಬರಹಗಳನ್ನು ಗೀಚಲಾಗಿತ್ತು. ಇದಕ್ಕೂ ಮುನ್ನ 2016ರಲ್ಲಿ ಸಂಸತ್‌ ದಾಳಿಕೋರ ಅಫ್ಜಲ್‌ ಗುರುಗೆ ಗಲ್ಲು ಶಿಕ್ಷೆ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಇತ್ತೀಚೆಗೆ ಖಲಿಸ್ತಾನಿಗಳು ದೆಹಲಿಯ ಮೆಟ್ರೋ ಗೋಡೆ ಸೇರಿದಂತೆ ಹಲವೆಡೆ ದೇಶ ವಿರೋಧಿ ಬರಹಗಳನ್ನು ಗೀಚಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದರ ಬೆನ್ನಲ್ಲೇ ಜೆಎನ್‌ಯುದಲ್ಲಿ ಈ ಘಟನೆ ನಡೆದಿದೆ.

ದೇಶದ ಹಲವು ರಾಜ್ಯಗಳಲ್ಲಿದೆ ಜಗದೋದ್ಧಾರಕನಿಗೆ ಆಸ್ತಿ: ಪುರಿ ಜಗನ್ನಾಥ ಎಷ್ಟೊಂದು ಶ್ರೀಮಂತ

ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಜೆಎನ್‌ಯು ಆಡಳಿತ ಮಂಡಳಿ ಕಮಿಟಿಯೊಂದನ್ನು ರಚಿಸಲು ಮುಂದಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಾವು ನಮ್ಮ ಮುಖ್ಯ ಭದ್ರತಾ ಅಧಿಕಾರಿಯಿಂದ ವರದಿಗಾಗಿ ಕಾಯುತ್ತಿದ್ದೇವೆ ಮತ್ತು ಅವರ ಸಲಹೆಗಳ ಆಧಾರದ ಮೇಲೆ ಸಮಸ್ಯೆಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದುಎಂದು ಜೆಎನ್‌ಯು ರೆಕ್ಟರ್ ಸತೀಶ್ ಚಂದ್ರ ಗಾರ್ಕೋಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.  ಅಲ್ಲದೇ ವಿವಿಯೂ ತನ್ನ ಕ್ಯಾಂಪಸ್‌ನಲ್ಲಿ ಪದೇ ಪದೇ ಜರುಗುತ್ತಿರುವ  'ದೇಶವಿರೋಧಿ' ಘೋಷಣೆಗಳ ಘಟನೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲು ಯೋಜಿಸಿದೆ ಎಂದು ಗಾರ್ಕೋಟಿ ಹೇಳಿದ್ದಾರೆ.

ಹೆಸರಿಡುವ ವಿಚಾರಕ್ಕೆ ಅಪ್ಪ ಅಮ್ಮನ ನಡುವೆ ಜಗಳ: ಮಗುವಿಗೆ ಕೋರ್ಟ್‌ನಿಂದಲೇ ನಾಮಕರಣ...!

दिल्ली: जेएनयू के स्कूल ऑफ लैंग्वेज की दीवारों पर लिखे गए विवादित स्लोगन
दीवारों पर 'भगवा जलेगा', 'फ्री कश्मीर' जैसे विवादित नारे लिखे गए।
स्लोगन लिखने वालों की छानबीन शुरू। pic.twitter.com/kvJuvqpGAA

— Manish Mishra (@mmanishmishra)

 

click me!