'ಕಾಂಗ್ರೆಸ್ ಭಾರತದ ಸಂವಿಧಾನವನ್ನು ಒಂದು ಕುಟುಂಬದ ಖಾಸಗಿ ಆಸ್ತಿ' ಎಂದುಪರಿಗಣಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಲೋಕಸಭೆಯ ಅವಧಿ ಹೆಚ್ಚಿಸಿಕೊಂಡಿತು' ಎಂದು ಗೃಹ ಸಚಿವ ಅಮಿತ್ ಶಾ, ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಡಿ.18): 'ಕಾಂಗ್ರೆಸ್ ಭಾರತದ ಸಂವಿಧಾನವನ್ನು ಒಂದು ಕುಟುಂಬದ ಖಾಸಗಿ ಆಸ್ತಿ' ಎಂದುಪರಿಗಣಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಲೋಕಸಭೆಯ ಅವಧಿ ಹೆಚ್ಚಿಸಿಕೊಂಡಿತು' ಎಂದು ಗೃಹ ಸಚಿವ ಅಮಿತ್ ಶಾ, ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ಅಳವಡಿಸಿಕೊಂಡ 75 ವರ್ಷಗಳ ಕುರಿತ ಚರ್ಚೆಗೆ ಉತ್ತರಿಸಿದ ಅವರು, 'ಸಂವಿಧಾನವು ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸುತ್ತದೆ. ರಕ್ತಪಾತವಿಲ್ಲದೆ ಅಧಿಕಾರದ ಹಸ್ತಾಂತರಕ್ಕೆ ಸಹಕಾರಿಯಾಗಿದೆ. ಬಿಜೆಪಿ 16 ವರ್ಷದಲ್ಲಿ 22 ಸಾಂವಿಧಾನಿಕ ತಿದ್ದುಪಡಿ ಮಾಡಿತು. ಆದರೆ ಕಾಂಗ್ರೆಸ್ 55 ವರ್ಷದಲ್ಲಿ 77 ತಿದ್ದುಪಡಿ ಮಾಡಿತ್ತು' ಎಂದರು. 'ಕಾಂಗ್ರೆಸ್ ಸಂವಿಧಾನದ ಖಾಲಿ ಹಾಳೆಯ ನಕಲಿ ಪ್ರತಿಗಳನ್ನು ತೋರಿಸುತ್ತಿರುವುದು ಜನರಿಗೆ ತಿಳಿದಿದ್ದರಿಂದಲೇ ಅವರು (ಕಾಂಗ್ರೆಸ್) ಸೋತರು' ಎಂದು ಲೇವಡಿ ಮಾಡಿದರು.
ಕುಟುಂಬ ರಾಜಕೀಯ: ಈ ವೇಳೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಟೀಕಿಸಿದ ಶಾ, 'ಆ ಪಕ್ಷದ ವರು ನೆಹರು-ಗಾಂಧಿ ಕುಟುಂಬದ ಸುತ್ತ ಸುತ್ತುವುದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದ ವರ್ಗದ ಜನರಿಗಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ. ಮೋದಿ ಸರ್ಕಾರ ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದು, ದೇಶವನ್ನು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಗೊಳಿಸಿದೆ. ಇಂದು ಎಲ್ಲಾ ಮಕ್ಕಳಿಗೂ ತುರ್ತು ಸ್ಥಿತಿಯ ಬಗ್ಗೆ ತಿಳಿಸು ವುದು ಅವಶ್ಯಕ. ಆಗ ಯಾರೂ ಅದನ್ನು ಇನ್ನೊಮ್ಮೆ ಜಾರಿ ಮಾಡುವ ಧೈರ್ಯ ತೋರುವುದಿಲ್ಲ' ಎಂದರು. '370 ವಿಧಿಯನ್ನು ತೆಗೆದುಹಾಕಲು ಕಬ್ಬಿಣದಂತಹ ಹೃದಯ ಬೇಕು. ಅದು ರದ್ದಾದ ಬಳಿಕ ಕಳೆದ 5 ವರ್ಷ ಗಳಲ್ಲಿ ಜಮ್ಮು ಕಾಶ್ಮೀರ 1.19 ಲಕ್ಷ ಕೋಟಿರು. ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ' ಎಂದರು.
undefined
ಮೀಸಲು ವಿರೋಧಿ ಕಾಂಗ್ರೆಸ್: ಮೀಸಲಾತಿಯ ಬಗ್ಗೆ ಮಾತನಾಡಿದ ಶಾ, 'ಇಂದು ಶೇ.50ಕ್ಕಿಂತ ಹೆಚ್ಚು ಮೀಸಲು ಬಯಸುತ್ತಿರುವ ಕಾಂಗ್ರೆಸ್, 1955ರ ಒಬಿಸಿ ಸಮಿತಿ ವರದಿಯನ್ನೇ ನಾಪತ್ತೆ ಮಾಡಿತ್ತು. ಅದು ಹೇಳು ವುದಕ್ಕೂ ಮಾಡುವುದಕ್ಕೂ ಸಂಬಂಧವೇ ಇಲ್ಲ' ಎನ್ನುತ್ತಾ, ಬಿಜೆಪಿ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ತರುತ್ತದೆ ಎಂಬ ಭರವಸೆ ನೀಡಿದರು. ಮುಸ್ಲಿಂ ವೈಯಕ್ತಿಕ ಕಾನೂನನ್ನು ತರುವುದೇ ದೇಶ ದಲ್ಲಿ ತುಷ್ಟಿಕರಣ ರಾಜಕಾರಣದ ಆರಂಭವಾಗಿದೆಎಂದ ಶಾ, 'ಕಾಂಗ್ರೆಸ್ ಮುಸ್ಲಿಂ ವೈಯಕ್ತಿಕ ಕಾನೂನನ್ನು ಬೆಂಬಲಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು' ಎಂದು ಆಗ್ರಹಿಸಿದರು. ಜತೆಗೆ, ಬಿಜೆಪಿಯ ಬಳಿ ಕೇವಲ ಒಂದು ಸಂಸದ ಸ್ಥಾನವಿದ್ದರೂ ಅದು ಧರ್ಮಾಧಾರಿತ ಮೀಸಲಾತಿ ಕೊಡಲು ಬಿಡುವುದಿಲ್ಲ ಎಂದು ಸಾರಿದರು.
ಪ್ರಧಾನಿ ಮೋದಿ ಕೇವಲ 3 ತಾಸು ನಿದ್ದೆ ಮಾಡ್ತಾರೆ: ನಟ ಸೈಫ್ ಅಲಿ ಖಾನ್ ಪ್ರಶಂಸೆ
ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ: ಸಂವಿಧಾನ ಕುರಿತ ಚರ್ಚೆ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ಇತ್ತೀಚೆಗೆ ಅಂಬೇಡ್ಕರ್ ಜಪ ಮಾಡುವುದು ಫ್ಯಾಶನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಎಂದು ಜಪಿಸುತ್ತಾರೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು' ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. 'ಈ ಹೇಳಿಕೆ ಅಂಬೇಡ್ಕರ್‌ಗೆ ಮಾಡಿದ ಅವಮಾನ. ಶಾ ಕ್ಷಮೆ ಕೇಳಬೇಕು' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಇನ್ನು ರಾಹುಲ್ ಗಾಂಧಿ, 'ಮನುಸ್ಮೃತಿ ಪ್ರವರ್ತಕರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಸದಾ ತಕರಾರು ಇರುತ್ತದೆ' ಎಂದು ಕಿಡಿಕಾರಿದ್ದಾರೆ.