ಸುಂದರ ಮಹಿಳೆಯನ್ನು ಕಂಡು ದಂಡ ಹಾಕೋದು ಮರೆತ ಪೊಲೀಸ್: ವಿಡಿಯೋ ವೈರಲ್ 

By Mahmad Rafik  |  First Published Dec 17, 2024, 10:16 PM IST

ಸುಂದರ ಮಹಿಳೆಯೊಂದಿಗೆ ಬೈಕ್ ಸವಾರನನ್ನು ತಡೆದ ಪೊಲೀಸ್ ಅಧಿಕಾರಿಯೊಬ್ಬರು ದಂಡ ವಿಧಿಸದೆ ಕಳುಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪೊಲೀಸರ ಕ್ರಮವನ್ನು ಪ್ರಶ್ನಿಸುತ್ತಿದ್ದು, ಮಹಿಳೆ ಸುಂದರಿಯಾಗಿದ್ದರಿಂದಲೇ ದಂಡ ಹಾಕಿಲ್ಲ ಎಂದು ಆರೋಪಿಸಿದ್ದಾರೆ.


ನವದೆಹಲಿ: ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ  ವೈರಲ್ ಆಗಿದ್ದು, ಸುಂದರ ಮಹಿಳೆಯನ್ನು ಕಂಡು ದಂಡ ಹಾಕೋದನ್ನು ಮರೆತರಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಲ್ ಮೀಮ್‌ಗಳು ಬರುತ್ತಿವೆ. ಹಲವು ಬಾರಿ ಇಂತಹ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. 

ಬೈಕ್ ಸವಾರರು, ಚಾಲಕರು ಟ್ರಾಫಿಕ್ ನಿಯಮಗಳನ್ನು ಅನುಸರಿಸುತ್ತಿದ್ದೀರಾ  ಇಲ್ಲವಾ ಎಂಬುದನ್ನು ಪರಿಶೀಲನೆ ಮಾಡಲು ರಸ್ತೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿರುತ್ತದೆ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಅದರಲ್ಲಿಯೂ ಮಹಾನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಾಗಿರುತ್ತದೆ. ಒಮ್ಮೆ ಪೊಲೀಸರು ವಾಹನ ತಡೆದು ನಿಲ್ಲಿಸಿದ್ರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಾರೆ.  ಸವಾರರು ಸಾಫ್ಟ್ ಕಾಪಿಗಳನ್ನು ತೋರಿಸಬೇಕಾಗುತ್ತದೆ. ಆದ್ರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಯಾವುದೇ ದಂಡ ವಿಧಿಸದೇ  ಹಾಗೆ ಕಳುಹಿಸಿರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. 

Tap to resize

Latest Videos

undefined

ಈ ವಿಡಿಯೋವನ್ನು  Arey BC ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ  ಶೇರ್ ಮಾಡಿಕೊಳ್ಳಲಾಗಿದೆ. ಎರಡು ದಿನದ ಹಿಂದೆ ಈ ವಿಡಿಯೋ  ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್  ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸವಾರ ಒಬ್ಬನೇ ಬಂದಿದ್ದರೆ ಪೊಲೀಸರು ಇಷ್ಟು  ಮೃದುವಾಗಿ ಮಾತನಾಡುತ್ತಿರಲಿಲ್ಲ. ಸವಾರನ ಹೆಂಡತಿ ಸುಂದರವಾಗಿದ್ದರಿಂದಲೇ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಅದೇ ನಾವು ಆಗಿದ್ರೆ ಖಂಡಿತ  ಸಾವಿರಾರರು ರೂಪಾಯಿ ದಂಡದ ಬಿಲ್ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಬೈಕ್ ಮೇಲೆ ಹಿಂದೂ ಸ್ಟಿಕ್ಕರ್ ನೋಡಿ ಕೋಪಗೊಂಡ ಮಹಿಳೆ; ಮುಂದೇನಾಗಿದ್ದು? ವಿಡಿಯೋ ನೋಡಿ

ವೈರಲ್ ವಿಡಿಯೋ
ಪೊಲೀಸರು ಬೈಕ್ ಸವಾರನನ್ನು ತಡೆಯುತ್ತಾರೆ. ಆಗ  ಏನಪ್ಪ ಹೇಗೆ ನುಗುತ್ತಿದ್ದೀಯಾ? ಎರಡನೇ ಮದುವೆ ಆಗಬೇಕೆಂದು ಅಂದುಕೊಂಡಿದ್ದೀಯಾ? ಎದುರು ಟ್ರಕ್ ಬರುತ್ತಿದ್ರೂ ಹೀಗೆ ನುಗುತ್ತಿದ್ದೀಯಾ? ಹುಷಾರು, ನಿಧಾನವಾಗಿ ಬೈಕ್ ಚಲಾಯಿಸಬೇಕು ಎಂದು ಪೊಲೀಸರು ಹೇಳುತ್ತಾರೆ. ಇದಕ್ಕೆ ಸವಾರ  ಸಹ ಇನ್ಮುಂದೆ ಹೀಗೆ ಮಾಡಲ್ಲ ಎಂದು ಹೇಳುತ್ತಾನೆ. ನಂತರ ಪೊಲೀಸರು ಯಾವುದೇ ದಂಡ ಹಾಕದೇ ಕಳುಹಿಸುತ್ತಾರೆ. ಇದೇ ವಿಡಿಯೋದಲ್ಲಿ ಮತ್ತೊಂದು ಬೈಕ್‌ನಲ್ಲಿ ಯುವಕ ಮತ್ತು  ಯುವತಿ  ಹೆಲ್ಮೇಟ್ ಇಲ್ಲದೇ ವೇಗವಾಗಿ ಹೋಗುತ್ತಿರೋದನ್ನು ಗಮನಿಸಬಹುದು.

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಘಟನೆ ಎಲ್ಲಿಯದ್ದು ಎಂಬ ಮಾಹಿತಿ ತಿಳಿದು ಬಂದಿಲ್ಲ. ಟ್ರಾಫಿಕ್ ಪೊಲೀಸರಿಂದ ದಂಡ ಹಾಕಿಸಿಕೊಳ್ಳಬಾರದು ಅಂದ್ರೆ  ಸುಂದರ ಯುವತಿಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಸರ್ಕಾರಿ ನೌಕರಿ ಸಿಕ್ಕಿದ್ದೇ ದೊಡ್ಡ ತಪ್ಪಾಯ್ತು; ,ಮದುವೆಯಾಗಿ ಗಳಗಳನೇ ಕಣ್ಣೀರಿಟ್ಟ ವರ 

 
 
 
 
 
 
 
 
 
 
 
 
 
 
 

A post shared by Arey BC (@areybc)

click me!