ಕಾಂಗ್ರೆಸ್‌ನವರು ರೈತರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರು ರೈತರಿಗಾಗಿ ಏನೂ ಮಾಡಿಲ್ಲ. ಅಲ್ಲದೇ ಇತರರು ಮಾಡುವುದಕ್ಕೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೈಪುರ (ಡಿ.18): ‘ಕಾಂಗ್ರೆಸ್‌ನವರು ರೈತರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರು ರೈತರಿಗಾಗಿ ಏನೂ ಮಾಡಿಲ್ಲ. ಅಲ್ಲದೇ ಇತರರು ಮಾಡುವುದಕ್ಕೂ ಬಿಟ್ಟಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಸ್ಥಾನ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ‘ಕಾಂಗ್ರೆಸ್ ಪಕ್ಷ ರಾಜ್ಯಗಳ ನಡುವೆ ನೀರು ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸುವ ಬದಲು, ಆ ವಿವಾದಗಳಿಗೆ ಬೆಂಬಲ ನೀಡಿದ್ದೇ ಜಾಸ್ತಿ. ಬಿಜೆಪಿ ನೀತಿಯು ಮಾತುಕತೆಯೇ ಹೊರತು ಸಂಘರ್ಷವಲ್ಲ. ನಾವು ಸಹಕಾರವನ್ನು ನಂಬುತ್ತೇವೆ. ವಿರೋಧವಲ್ಲ. ನಾವು ಪರಿಹಾರಗಳನ್ನು ನಂಬುತ್ತೇವೆ. ಅದಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದರು.
ನಾಯಕರ ರಕ್ಷಣೆಗೆ ಕಾಂಗ್ರೆಸ್ಸಿಂದ ಸಂವಿಧಾನ ತಿದ್ದುಪಡಿ: ಪ್ರಧಾನಿ ನರೇಂದ್ರ ಮೋದಿ ಬೆನ್ನಲ್ಲೇ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂವಿಧಾನ ತಿದ್ದುಪಡಿ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ನಾಯಕರನ್ನು ರಕ್ಷಿಸಲು ಸಂವಿಧಾನ ತಿದ್ದುಪಡಿ ಮಾಡಿತೇ ಹೊರತು ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಲ್ಲ ಎಂದು ಕಿಡಿಕಾರಿದ್ದಾರೆ. ದೇಶದ ಸಂವಿಧಾನದ 75 ವರ್ಷಗಳ ಹಾದಿ ಕುರಿತು ರಾಜ್ಯಸಭೆಯಲ್ಲಿ ಸೋಮವಾರ ಚರ್ಚೆ ಆರಂಭಿಸಿದರು.
undefined
ಸಂವಿಧಾನ ತಿದ್ದುಪಡಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಮತ್ತು ವಂಶಾಡಳಿತಕ್ಕೆ ಅನುಕೂಲವಾಗುವಂತೆ ಮಾತ್ರ ಪ್ರತಿಬಾರಿ ನಿರ್ಲಜ್ಜವಾಗಿ ಸಂವಿಧಾನ ತಿದ್ದುಪಡಿ ಮಾಡಿದೆ ಎಂದರು.ಮಿತ್ರಪಕ್ಷಗಳ ಒತ್ತಡದಿಂದ ಮಹಿಳಾ ಮೀಸಲು ಮಸೂದೆಯನ್ನೂ ಕಾಂಗ್ರೆಸ್ ಬೆಂಬಲಿಸಲಿಲ್ಲ. ಇದು ಕಾಂಗ್ರೆಸ್‌ನ ಮಹಿಳಾ ವಿರೋಧಿ ನಡೆ ಎಂದು ನಿರ್ಮಲಾ ಅರೋಪಿಸಿದರು. ಶಾಬಾನೋ ಪ್ರಕರಣಕ್ಕೆ ಸಂಬಂಧಿಸಿದ 42 ತಿದ್ದುಪಡಿ ಸೇರಿ ವಿವಿಧ ತಿದ್ದುಪಡಿಗಳನ್ನು ಈ ವೇಳೆ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಅವಧಿಯಲ್ಲಾದ ತಿದ್ದುಪಡಿಗಳು ಪ್ರಜಾಪ್ರಭುತ್ವವನ್ನು ಬಲವಡಿಸಲಿಲ್ಲ,
ಶಾಂತಿಯುತ ಮೀಸಲಾತಿ ಹೋರಾಟ ರಣರಂಗವಾಗಿಸಿದ ಕಾಂಗ್ರೆಸ್ ಸರ್ಕಾರ: ಶಾಸಕ ಅರವಿಂದ ಬೆಲ್ಲದ
ಬದಲಾಗಿ ಅಧಿಕಾರದಲ್ಲಿದ್ದವರ ರಕ್ಷಣೆ ಮತ್ತು ಕುಟುಂಬದ ಬಲವರ್ಧನೆಯ ಉದ್ದೇಶವನ್ನಷ್ಟೇ ಹೊಂದಿತ್ತು ಎಂದರು. ದೇಶವು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಈಗಲೂ ಹೆಮ್ಮೆಪಟ್ಟುಕೊಳ್ಳುತ್ತದೆ. ಆದರೂ ಸಂವಿಧಾನವನ್ನು ಒಪ್ಪಿಕೊಂಡ ಒಂದೇ ವರ್ಷದಲ್ಲಿ ಅಧಿಕಾರಕ್ಕೆ ಬಂದ ದೇಶದ ಮೊದಲ ಮಧ್ಯಂತರ ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಸಂವಿಧಾನ ತಿದ್ದುಪಡಿ ತಂದಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಕೆಲಸ 1949ರ ಮೊದಲು ಮತ್ತು ನಂತರದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿತ್ತು ಎಂದರು.