UP assembly election 2022: ಕಾಂಗ್ರೆಸ್‌ಗೆ ಸೊನ್ನೆ, ದೀದಿ ಮೈತ್ರಿಗೆ ಬಹಿರಂಗ ಆಹ್ವಾನವಿತ್ತ ಅಖಿಲೇಶ್

By Suvarna NewsFirst Published Dec 4, 2021, 6:14 PM IST
Highlights
  • ಮಮತಾ ಬ್ಯಾನರ್ಜಿ ಮೈತ್ರಿಗೆ ಬಹಿರಂಗ ಆಹ್ವಾನವಿತ್ತ ಅಖಿಲೇಶ್ ಯಾದವ್
  • ಕಾಂಗ್ರೆಸ್‌  ಪಕ್ಷ  ಶೂನ್ಯ ಸಂಪಾದನೆ ಮಾಡಲಿದೆ ಎಂದು  ಭವಿಷ್ಯ
  • ಕೇಂದ್ರದ ಆಡಳಿತ ಪಕ್ಷ ಬಿಜೆಪಿಯು ಉತ್ತರ ಪ್ರದೇಶದಲ್ಲೂ ಅಳಿಸಿ ಹೋಗಲಿದೆ ಎಂದು ಹೇಳಿಕೆ
     

ಝಾನ್ಸಿ(ಡಿ.4:) 2022ರ  ಮಾರ್ಚ್‌ ಬಳಿಕ ನಡೆಯಲಿರುವ  ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ  ಎಲ್ಲಾ ರಾಜಕೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ರಣತಂತ್ರ ಹೂಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ (Samajwadi party) ನಾಯಕ ಅಖಿಲೇಶ್‌ ಯಾದವ್‌ (Akhilesh Yadav) ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌  ಪಕ್ಷ (Congress) ಶೂನ್ಯ ಸಂಪಾದನೆ ಮಾಡಲಿದೆ ಎಂದು  ಭವಿಷ್ಯ ನುಡಿದಿದ್ದಾರೆ. 

ಪಶ್ಚಿಮ ಬಂಗಾಳದ ರೀತಿಯಲ್ಲೇ ಉತ್ತರ ಪ್ರದೇಶದಲ್ಲೂ ಕೇಂದ್ರದ ಆಡಳಿತ ಪಕ್ಷ ಬಿಜೆಪಿಯು ಅಳಿಸಿ ಹೋಗುತ್ತದೆ. ಮಾತ್ರವಲ್ಲ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರ್ಯಾಯ ರಾಜಕೀಯ ರಂಗಕ್ಕೆ ಸೇರಲು ಮುಕ್ತರಾಗಬಹುದು ಎಂದು ಶುಕ್ರವಾರ ಹೇಳಿಕೆ ನೀಡುವ ಮೂಲಕ ಮಮತಾಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

UP Elections 2022: ಬಿಜೆಪಿ ವಿರುದ್ಧ ಮಹಾಮೈತ್ರಿಕೂಟಕ್ಕೆ ಅಖಿಲೇಶ್‌ ಸಿದ್ಧತೆ!

ಯುಪಿಯ ಝಾನ್ಸಿಯಲ್ಲಿ ನಡೆದ ವಿಜಯ ಯಾತ್ರೆಯಲ್ಲಿ ಮಾತನಾಡಿದ ಅಖಿಲೇಶ್ "ನಾನು ಮಮತಾ ಬ್ಯಾನರ್ಜಿಯವರನ್ನು ಸ್ವಾಗತಿಸುತ್ತಿದ್ದೇನೆ. ಅವರು ಬಂಗಾಳದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡಿದ ರೀತಿಯಲ್ಲೇ, ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಅಳಿಸಿ ಹಾಕುವುದು ಖಂಡಿತ" ಎಂದಿದ್ದಾರೆ.

PM candidate from TMC: ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ

ಉಭಯ ಪಕ್ಷಗಳು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಯಾದವ್ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸ್ಥಾನ ಪಡೆಯಲಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ಬಾರಿ ಸ್ಪರ್ಧೆಯಲ್ಲಿಲ್ಲ. ಅವರು ಜಾಹೀರಾತಿಗಾಗಿ ಮಾತ್ರ ಇಲ್ಲಿದ್ದಾರೆ. 

Swara Bhasker to Join Politics ? TMC ಸೇರಲು ನಟಿಗೆ ಅಹ್ವಾನ ಕೊಟ್ಟ ದೀದಿ

ಮುಂಬರುವ ಚುನಾವಣೆಗಳು 2024ರ ಸಾರ್ವತ್ರಿಕ ಚುನಾವಣೆಯನ್ನು ಸೂಚಿಸುತ್ತವೆ ಎಂದು ಸುಳಿವು ನೀಡಿದ ಅವರು, ಈ ರಾಜ್ಯವು ಪ್ರಧಾನಿ, ರಾಷ್ಟ್ರಪತಿ ಮತ್ತು ರಕ್ಷಣಾ ಸಚಿವರನ್ನು ದೇಶಕ್ಕೆ ನೀಡಿದೆ. ಗರಿಷ್ಠ ಸಂಖ್ಯೆಯ ಬಿಜೆಪಿ ಸಂಸದರು ಇಲ್ಲಿದ್ದಾರೆ. ಯುಪಿ ಫಲಿತಾಂಶಗಳು ದೇಶದ ರಾಜಕೀಯಕ್ಕೆ ಮಹತ್ವದ್ದಾಗಿದೆ. ಉತ್ತರ ಪ್ರದೇಶ (Uttar Pradesh) ಅತಿದೊಡ್ಡ ರಾಜ್ಯವಾಗಿರುವುದರಿಂದ ಇದೆಲ್ಲ ಸಹಜ ಎಂದಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi vadra) ಅವರು ಯಾದವ್ ವಿರುದ್ಧ ನೀಡಿದ್ದ ಹೇಳಿಕೆಯ ಒಂದು ದಿನದ ನಂತರ ಅಖಿಲೇಶ್ ಈ ಹೇಳಿಕೆ ನೀಡಿರುವುದು ಕುತೂಹಲ ಹೆಚ್ಚಿಸಿದೆ.

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದೇನು?: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಪರ ಪ್ರತಿಜ್ಞಾ ರ್ಯಾಲಿ ನಡೆಸಿದ 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಸೇರಿದಂತೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕಾರಣವನ್ನು ನಡೆಸುತ್ತಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ಸಮಯದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.  ಮಾತ್ರವಲ್ಲ ಯಾದವ್ ಅವರು 'ಜಾತಿವಾದ' (ಜಾತಿವಾದಿ) ಮತ್ತು 'ಗುಂಡಾಯಿ' (ಅಪರಾಧ) ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

FIR against Mark Zuckerberg: ಅಖಿಲೇಶ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಫೇಸ್‌ಬುಕ್‌ ಸಿಇಓ ವಿರುದ್ಧವೇ ದೂರು ದಾಖಲು!

ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಮಮತಾ: ಬಿಜೆಪಿ ವಿರುದ್ಧ ತೃತೀಯ ರಂಗದ (Third Front)ಹುಟ್ಟಿಗೆ ತೊಡಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee),ಡಿ.೧ ರಂದು ಕಾಂಗ್ರೆಸ್ ಗೆ ಭರ್ಜರಿ ಶಾಕ್‌ ಕೊಟ್ಟರು. ಕಾಂಗ್ರೆಸ್ ಅನ್ನು ತೃತೀಯ ರಂಗದ ಮೈತ್ರಿಯಿಂದ ದೂರವಿಟ್ಟಿರುವುದು  ಮಾತ್ರವಲ್ಲ ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಮೈತ್ರಿ ಬಗ್ಗೆ ದೇಶದಲ್ಲಿ ಇದೀಗ ಯುಪಿಎ ಅನ್ನೋದೇ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ನೇತೃತ್ವವನ್ನೇ ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ನೇತೃತ್ವವನ್ನು ವಹಿಸಿಕೊಳ್ಳುವ ಇರಾದೆಯಲ್ಲಿ ಮಮತಾ ಇದ್ದು, ಇದಕ್ಕೆ ಪೂರಕವೆಂಬಂತೆ ಹಲವು ರಾಜ್ಯಗಳ ಟಿಎಂಸಿಯನ್ನು ಸ್ಥಾಪಿಸುವ ಯತ್ನ ಆರಂಭಿಸಿದ್ದಾರೆ. ಬಂಗಾಳದಲ್ಲಿ ಪಕ್ಷವನ್ನು ಬಲಪಡಿಸಿದ ಬಳಿಕ ಅವರು ಇದೀಗ ಮೇಘಾಲಯ, ಗೋವಾ, ಹರ್ಯಾಣ, ಬಿಹಾರ, ತ್ರಿಪುರದಲ್ಲಿ ಪಕ್ಷವನ್ನು ಬಲಗೊಳಿಸುವ ಯತ್ನ ನಡೆಸಿದ್ದಾರೆ.

click me!