Helicopter Crash : ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್‌ ವರುಣ್‌ ಗಂಭೀರ

By Kannadaprabha NewsFirst Published Dec 15, 2021, 6:31 AM IST
Highlights
  • ಸಶಸ್ತ್ರ ಪಡೆಗಳ ಮುಖ್ಯಸ್ಥ ಜ . ಬಿಪಿನ್‌ ರಾವತ್‌ ಸೇರಿದಂತೆ 13 ಸೇನಾ ಸಿಬ್ಬಂದಿಯನ್ನು ಬಲಿಪಡೆದ ಘಟನೆ
  •  ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್‌ ವರುಣ್‌  ಗಂಭೀರ
     

ನವದೆಹಲಿ (ಡಿ.15) : ಸಶಸ್ತ್ರ ಪಡೆಗಳ ಮುಖ್ಯಸ್ಥ ಜ . ಬಿಪಿನ್‌ ರಾವತ್‌ (Bipin Rawat) ಸೇರಿದಂತೆ 13 ಸೇನಾ ಸಿಬ್ಬಂದಿಯನ್ನು ಬಲಿ ಪಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಐಎಎಫ್‌ (IAF) ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ (varun Singh) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದಾಗ್ಯೂ, ಅವರು ಚಿಕಿತ್ಸೆಗೆ (Treatment) ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಬೆಂಗಳೂರಿನ (Bengaluru) ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಸದ್ಯ ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಐಎಎಫ್‌ (IAF) ಅಧಿಕಾರಿಗಳು ತಿಳಿಸಿದ್ದಾರೆ.

 ನನ್ನ ಮಗ ಗೆದ್ದು ಬರುತ್ತಾನೆ: ಕ್ಯಾವರುಣ್‌ ತಂದೆ ವಿಶ್ವಾಸ

 ತಮಿಳುನಾಡಿನ (Tamilnadu) ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ಪತನದಲ್ಲಿ (Helicopter Crash) ತೀವ್ರಗಾಯಗೊಂಡು ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿರುವ ವಾಯುಸೇನೆಯ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಆರೋಗ್ಯದಲ್ಲಿ ಏರಿಳಿತವಿದೆ. ಆದರೆ ಈ ಜೀವನ್ಮರಣ ಹೋರಾಟದಲ್ಲಿ ವರುಣ್‌ ಗೆದ್ದೇ ಗೆಲ್ಲುತ್ತಾರೆ. ಏಕೆಂದರೆ ಅವನೊಬ್ಬ ವೀರ ಸೇನಾನಿ, ಹೋರಾಟಗಾರ ಎಂದು ಅವರ ತಂದೆ ಕರ್ನಲ್‌ (ನಿವೃತ್ತ) ಕೆ.ಪಿ.ಸಿಂಗ್‌ (KP Singh) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮೂಲಕ ಮಾತನಾಡಿದ ಅವರು, ‘ವರುಣ್‌ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿದೆ. ಏನನ್ನೂ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಪ್ರತಿ ಗಂಟೆಗೊಮ್ಮೆ ಆರೋಗ್ಯದ (Health) ಮೇಲೆ ನಿಗಾ ವಹಿಸಲಾಗುತ್ತಿದೆ. ಅತ್ಯುತ್ತಮ ವೈದ್ಯಕೀಯ (Medical) ಸೌಲಭ್ಯ ಮತ್ತು ಶ್ರೇಷ್ಠ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ವರುಣ್‌ ಈ ಜೀವನ್ಮರಣ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತಾರೆ’ ಎಂದು ತಿಳಿಸಿದ್ದಾರೆ.

‘ಇದೇ ವೇಳೆ, ವರುಣ್‌ ಚೇತರಿಕೆಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ವರುಣ್‌ ಪರಿಚಯವೇ ಇಲ್ಲದ ಸಾಕಷ್ಟು ಜನರು ಬಂದು ಭೇಟಿಯಾಗುತ್ತಿದ್ದಾರೆ. ಮಾತೆಯರು ವರುಣ್‌ (Varun) ಅವರನ್ನು ನೋಡಬೇಕೆಂದು ಮನವಿ ಮಾಡುತ್ತಿದ್ದಾರೆ. ಅಂಥ ಪ್ರೀತಿ ಮತ್ತು ವಾತ್ಸಲ್ಯವನ್ನು ವರುಣ್‌ ಗಳಿಸಿದ್ದಾರೆ. ಅವರು ಚೇತರಿಕೆಯಾಗಿ ವಾಪಸ್‌ ಬಂದೇ ಬರುತ್ತಾರೆ. ಅವರೊಬ್ಬ ಹೋರಾಟಗಾರ’ ಎಂದು ಹೆಮ್ಮೆಯಿಂದ ಹೇಳಿದರು.

ವರುಣ್‌ ಅವರಿಗೆ ಕಳೆದ ಆಗಸ್ಟ್‌ನಲ್ಲಿ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಸಂಭವಿಸಿದ ಎಂಐ-17ವಿ5 ಸೇನಾ ಕಾಪ್ಟರ್‌ ಪತನದಲ್ಲಿ ಸಶಸ್ತ್ರ ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಸೇರಿ 13 ಮಂದಿ ಸಾವಿಗೀಡಾಗಿದ್ದು, ವರುಣ್‌ ಒಬ್ಬರೇ ಉಳಿದುಕೊಂಡಿದ್ದರು.

ಶೌರ್ಯ ಪ್ರಶಸ್ತಿ ವಿಜೇತ :   ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಈ ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ. 

ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ. ಟ್ವಿಟರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದು  ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. 

 

 

ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯಚಕ್ರ ಪ್ರಶಸ್ತಿ ವಿಜೇತ!

ಬದುಕುಳಿದ  ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ (Aerial Emergency) ಸಂದರ್ಭದಲ್ಲಿ ಎಲ್‌ಸಿಎ ತೇಜಸ್ (LCA Tejas) ಯುದ್ಧ ವಿಮಾನವನ್ನು ಉಳಿಸಿದ್ದಕ್ಕಾಗಿ ಶೌರ್ಯ ಚಕ್ರವನ್ನು (Shaurya Chakra awardee) ನೀಡಲಾಗಿತ್ತು. ಈ ವರ್ಷದ ಆಗಸ್ಟ್ 15 ರಂದು, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (LCA) ಸ್ಕ್ವಾಡ್ರನ್‌ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.

CDS Bipin Rawat Death: ತಂದೆ ಇದ್ದ ಬೆಟಾಲಿಯನ್‌ನಲ್ಲೇ ಬಿಪಿನ್ ರಾವತ್ ಮೊದಲ ಪೋಸ್ಟಿಂಗ್!

ರಕ್ಷಣಾ ಸಚಿವಾಲಯ ಹೇಳಿಕೆಯ ಪ್ರಕಾರ, ವಿಂಗ್ ಕಮಾಂಡರ್ ವರುಣ್ ಸಿಂಗ್ ಅವರು ಅಕ್ಟೋಬರ್ 12, 2020 ರಂದು, ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCA) ಮತ್ತು ಪ್ರೆಶರೈಜೇಶನ್‌ ಸಿಸ್ಟಮ್‌  (Pressurisation system) ಸರಿಪಡಿಸಿದ ನಂತರ, ಪ್ರಮುಖ ಸೇನಾ ನೆಲೆಯಿಂದ ದೂರವಿರುವ ಎಲ್‌ಸಿಎಯಲ್ಲಿ ಸರಿಪಡಿಸಿದ ಸಿಸ್ಟಮ್ ಚೆಕ್ ಮಾಡಲು ಸೋರ್ಟಿಯನ್ನು (sortie) ಹಾರಿಸುತ್ತಿದ್ದರು. ಈ ಸಮಯದಲ್ಲಿ ಕಾಕ್‌ಪಿಟ್ (Cockpit) ಪ್ರೆಶರೈಜೇಶನ್‌ ಸಿಸ್ಟಮ್‌  ವಿಫಲವಾಗಿತ್ತು.

 

 

ಜೀವನ ಅಪಾಯದಲ್ಲಿದ್ದರೂ, ಅವರು LCA ಯಶಸ್ವಿಯಾಗಿ ಲ್ಯಾಂಡ್‌!

"ಅವರು ವೈಫಲ್ಯವನ್ನು ಸರಿಯಾಗಿ ಗುರುತಿಸಿ  ವಿಮಾನವನ್ನು ಲ್ಯಾಂಡ್‌ ಮಾಡಿದ್ದರು. ಲ್ಯಾಂಡಿಂಗ್‌ ಮಾಡುವಾಗ, ಫ್ಲೈಟ್ ಕಂಟ್ರೋಲ್ ಸಿಸ್ಟಮ್ ವಿಫಲವಾಯಿತು ಮತ್ತು ವಿಮಾನದ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳಲು ಇದು ಕಾರಣವಾಯಿತು. ಇದು ಎಂದಿಗೂ ಸಂಭವಿಸದ ದುರಂತ ವೈಫಲ್ಯವಾಗಿತ್ತು," ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತ್ತು.

CDS Bipin Rawat ಮಾಡಿದ ಆ ಒಂದು ಕೆಲಸ: ನಮ್ಮ ಸೇನೆಯ ಶಕ್ತಿ ಡಬಲ್, ಬೆಚ್ಚಿ ಬಿದ್ದ ಪಾಕ್, ಚೀನಾ!

"ಅವರ ಉನ್ನತ ಮಟ್ಟದ ವೃತ್ತಿಪರತೆ, ಸಂಯಮ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ, ಅವರ ಜೀವ ಅಪಾಯದಲ್ಲಿದ್ದರೂ, ಅವರು LCA Tejas ಅನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡಿದರು. ಜತೆಗೆ ವಿಮಾನ ನೆಲೆಯಲ್ಲಿದ್ದ ಸಾರ್ವಜನಿಕ ಆಸ್ತಿ ಮತ್ತು ಜನರನ್ನು ಕೂಡ ಸಂರಕ್ಷಿಸಿದರು" ಎಂದು ರಕ್ಷಣಾ ಸಚಿವಾಲಯ  ಹೇಳಿತ್ತು

click me!