Flight Emergency Landing : ರೋಜಾ ಪ್ರಯಾಣಿಸುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡ್‌

By Kannadaprabha NewsFirst Published Dec 15, 2021, 6:17 AM IST
Highlights
  •  ರೋಜಾ ಪ್ರಯಾಣಿಸುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡ್‌
  • -ರಾಜಮಂಡ್ರಿಯಿಂದ ತಿರುಪತಿಗೆ ಹೊರಟಿದ್ದ ಇಂಡಿಗೋ ವಿಮಾನ

  ಬೆಂಗಳೂರು (ಡಿ.15):  ನಟಿ, ಆಂಧ್ರ ಪ್ರದೇಶ (Andhra pradesh) ಶಾಸಕಿ ರೋಜಾ (Roja) ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯಾ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದಿದೆ. ಶಾಸಕಿ ರೋಜಾ, ಟಿಡಿಪಿ (TDP) ಶಾಸಕ ವೇಗುಳ್ಳ ಜೋಗೇಶ್ವರ ರಾವ್‌, ಮಾಜಿ ಸಚಿವ ಯನಮ ರಾಮ ಕೃಷ್ಣುಡು ಸೇರಿದಂತೆ 70 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ (Indigo) ವಿಮಾನವು ಮಂಗಳವಾರ ಬೆಳಿಗ್ಗೆ ರಾಜಮಂಡ್ರಿಯಿಂದ ಹೊರಟಿದೆ. 10.30ಕ್ಕೆ ತಿರುಪತಿ ತಲುಪಬೇಕಿತ್ತು.

ತಾಂತ್ರಿಕ ದೋಷ ಕಾಣಿಸಿಕೊಂಡು ಹಿನ್ನೆಲೆ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ. ನಾಲ್ಕು ಗಂಟೆಗಳಾದರೂ ಪ್ರಯಾಣಿರನ್ನು ವಿಮಾನದಲ್ಲಿಯೇ (Flight) ಕಾಯಿಸಲಾಗಿದ್ದು, ಸೂಕ್ತ ಮಾಹಿತಿ ನೀಡದೇ ಗೊಂದಲ ಸೃಷ್ಟಿಮಾಡಲಾಗಿದೆ. ಬಳಿಕ ರಸ್ತೆ ಮಾರ್ಗವಾಗಿ ಕೆಲ ಪ್ರಯಾಣಿಕರು ತಿರುಪತಿಗೆ ತೆರಳಿದ್ದಾರೆ.

Latest Videos

ಈ ಕುರಿತು ಸಾಮಾಜಿಕ ತಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಶಾಸಕಿ ರೋಜಾ, ‘ನಾಲ್ಕು ಗಂಟೆಗಳಾದರೂ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮೊದಲಿಗೆ ರಾಜಮಂಡ್ರಿಯಲ್ಲಿ ಹವಾಮಾನ ವೈಪರಿತ್ಯ ಎಂದರು, ಆ ಬಳಿಕ ತಾಂತ್ರಿಕ ದೋಷ ಎಂದರು. ಯಾವ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿಲ್ಲ. ನಾನು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಐದು ಗಂಟೆ ಒಂದೇ ಕಡೆ ಕುಳಿತು ಆಯಾಸವಾಗಿದೆ. ವಿಮಾನ ಕಂಪನಿ ಪ್ರಯಾಣಿಕರ ಕಾಳಜಿ ವಹಿಸಿಲ್ಲ’ ಎಂದು ಕಿಡಿಕಾರಿದ್ದಾರೆ.

ಪೋಸ್ ಕೊಟ್ಟ ಶಾಸಕಿ : ದಕ್ಷಿಣ ಕನ್ನಡ ನಟಿ ಹಾಗೂ ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಆರ್. ರೋಜಾ ಆಂಬುಲೆನ್ಸ್ ಡ್ರೈವರ್ ಸೀಟ್‌ನಲ್ಲಿ ಕೂತು ಜಾಲಿಯಾಗಿ ರೌಂಡ್ ಹೊಡೆದು ಫೋಟೋ ಹಾಗೂ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.

ಚಿತ್ತೂರಿನಲ್ಲಿ ಹೊಸ ಆಂಬುಲೆನ್ಸ್‌ ರಸ್ತೆಗೆ ಬಿಡುವ ಸಂದರ್ಭ ಚಾಲಕನ ಸೀಟು ಹತ್ತಿ ಕುಳಿತ ಶಾಸಕಿ, ತನ್ನ ಬೆಂಬಲಿಗರಿಗೆ ಫೋಟೋ ಹಾಗೂ ವಿಡಿಯೋ ಮಾಡುವಂತೆ ಒತ್ತಾಯಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಮೇಲೆ ಸಂಪರ್ಕಕ್ಕೆ ಸಿಗುತ್ತಿಲ್ಲ ಈ ನಟಿ!

ಕಳೆದ ವಾರ ಆಂಧ್ರಪ್ರದೇಶ ಸರ್ಕಾರ 412 ಹೊಸ ಆಂಬುಲೆನ್ಸ್ ಘೋಷಿಸಿತ್ತು. ಇದರಲ್ಲಿ ನಗರಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಆಂಬುಲೆನ್ಸ್ ಮಂಗಳವಾರ ತಲುಪಿತ್ತು. ಆಂಧ್ರಪ್ರದೇಶದಲ್ಲಿ ಹೆಚ್ಚು ಕೊರೋನಾ ಪ್ರಕರಣಗಳಿದ್ದು, ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಜುಲೈ 7ರಂದು ಆಂಧ್ರದಲ್ಲಿ 1178 ಕೊರೋನಾ ಪ್ರಕರಣ ವರದಿಯಾಗಿತ್ತು. ಒಟ್ಟು 21197 ಪ್ರಕರಣಗಳಿದ್ದು, ಒಟ್ಟು 252 ಸಾವು ಸಂಭವಿಸಿದೆ.

ಅಗತ್ಯ ಇರುವ ಸ್ಥಳಕ್ಕೆ ತುರ್ತಾಗಿ ಆಂಬುಲೆನ್ಸ್ ಕಳುಹಿಸುವ ಬದಲು ಕೆಲವು ಗಂಟೆ ಆಂಬುಲೆನ್ಸ್‌ನಲ್ಲಿ ಕುಳಿತು ರೋಜಾ ಪೋಸ್ ಕೊಟ್ಟಿದ್ದಾರೆ. ಆಂಬುಲೆನ್ಸ್ ಸ್ವಾಗತಿಸಿದ ನಂತರ ಡ್ರೈವ್ ಮಾಡುತ್ತಾ ಫೋಟೋ ತೆಗೆಯುವಂತೆ ಒತ್ತಾಯಿಸುತ್ತಿದ್ದರು.

ಜೊತೆಗೇ ಆಂಬುಲೆನ್ಸ್‌ನ ಎಮರ್ಜೆನ್ಸಿ ರೆಡಿಯೋ ಮೂಲಕ ಫೋನ್‌ ಕಾಲ್‌ ಎಟೆಂಡ್ ಮಾಡಿದ್ದರು. ತೆಲುಗು ನಟಿ ರೋಜಾ ಹಲವು ಬಾರಿ ಸಾರ್ವಜನಿಕ ವಿಚಾರಗಳಿಗಾಗಿ ಪಕ್ಷದ ಹೊರಗೆ ಮತ್ತು ಒಳಗೂ ಟೀಕೆಗೊಳಗಾಗಿದ್ದಾರೆ. 

ಕಬಡ್ಡಿ ಆಡಿದ ರೋಜಾ  :  ಆಂಧ್ರ ಪ್ರದೇಶದಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಬ್ಯುಸಿ ಯಾಗಿರುವ ನಟಿ ರೋಜಾ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಭಾಗಿಯಾಗಿದ್ದರು. ಬಹುಭಾಷಾ ನಟಿ, ರಾಜಕಾರಣಿ ಕ್ರೀಡೆ ಬಗ್ಗೆ ಹೊಂದಿರುವ ಆಸಕ್ತಿಯನ್ನು ಕಂಡು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

  •  ರೋಜಾ ಪ್ರಯಾಣಿಸುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಲ್ಯಾಂಡ್‌
  • -ರಾಜಮಂಡ್ರಿಯಿಂದ ತಿರುಪತಿಗೆ ಹೊರಟಿದ್ದ ಇಂಡಿಗೋ ವಿಮಾನ
click me!