Fake Drugs ಕಡಿವಾಣಕ್ಕೆ ಬರಲಿದೆ ಬಾರ್‌ಕೋಡ್: ಮೊದಲು 300 ಔಷಧಗಳಿಗೆ ಜಾರಿ

Published : Oct 01, 2022, 08:16 AM ISTUpdated : Oct 01, 2022, 08:49 AM IST
Fake Drugs ಕಡಿವಾಣಕ್ಕೆ ಬರಲಿದೆ ಬಾರ್‌ಕೋಡ್: ಮೊದಲು 300 ಔಷಧಗಳಿಗೆ ಜಾರಿ

ಸಾರಾಂಶ

ನಕಲಿ ಔಷಧಕ್ಕೆ ಕಡಿವಾಣ ಹಾಕಲು ಬಾರ್‌ಕೋಡ್‌ ಕಡ್ಡಾಯ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಮೊದಲ ಹಂತದಲ್ಲಿ 300 ಔಷಧಗಳಿಗೆ ಯೋಜನೆ ಜಾರಿಯಾಗಲಿದ್ದು, ಬಳಿಕ ಎಲ್ಲಾ ಔಷಧಗಳಿಗೂ ಬಾರ್‌ಕೋಡ್‌ ಕಡ್ಡಾಯವಾಗುವುದು ಎಂದು ತಿಳಿದುಬಂದಿದೆ. 

ನವದೆಹಲಿ (ಅಕ್ಟೋಬರ್ 1): ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ನಕಲಿ ಔಷಧಗಳಿಗೆ (Fake Drugs) ಕಡಿವಾಣ ಹಾಕಲು, ಔಷಧಗಳ ಪ್ಯಾಕ್‌ ಮೇಲೆ ಅವುಗಳ ಕುರಿತ ಸಮಗ್ರ ಮಾಹಿತಿ ಒದಗಿಸುವ ಬಾರ್‌ಕೋಡ್‌ (Barcode), ಕ್ಯೂಆರ್‌ ಕೋಡ್‌ (QR Code) ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರವೇ ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಾರ್‌ಕೋಡ್‌ ಲಾಭ?:
ಪ್ರತಿ ಔಷಧದ ಲೇಬಲ್‌ (Label) ಮೇಲೆ ಬಾರ್‌ಕೋಡ್‌ ಅಥವಾ ಕ್ಯೂಆರ್‌ ಕೋಡ್‌ ಮುದ್ರಿಸಲಾಗುವುದು. ಇದನ್ನು ಸ್ಕ್ಯಾನ್‌ (Scan) ಮಾಡಿದರೆ, ಆ ಔಷಧದ ವಿಶೇಷ ಗುರುತಿನ ಕೋಡ್‌, ಸಾಮಾನ್ಯ ಮತ್ತು ಜೆನೆರಿಕ್‌ ಹೆಸರು (Generic Name) , ಬ್ರ್ಯಾಂಡ್‌ ನೇಮ್‌, ಉತ್ಪಾದಕರ ವಿಳಾಸ, ಬ್ಯಾಚ್‌ ನಂಬರ್‌, ಉತ್ಪಾದನೆ ಮಾಡಿದ ದಿನಾಂಕ, ಅವಧಿ ಮುಗಿಯುವ ಸಮಯ, ಉತ್ಪಾದಕರ ಲೈಸೆನ್ಸ್‌ ನಂಬರ್‌ ಮೊದಲಾದ ವಿಷಯಗಳು ಗ್ರಾಹಕರಿಗೆ ಸುಲಭವಾಗಿ ಸಿಗುತ್ತದೆ.

ಇದನ್ನು ಓದಿ: 34 ಅಗತ್ಯ ಔಷಧಗಳ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಮೊದಲಿಗೆ 300 ಔಷಧಗಳಿಗೆ ಜಾರಿ:
ಈ ಯೋಜನೆಯನ್ನು ಮೊದಲ ಹಂತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಔಷಧಗಳಿಗೆ ಜಾರಿಗೊಳಿಸಲಾಗುವುದು. ನಂತರ ಇದನ್ನು ಇಡೀ ಔಷಧ ವಲಯಕ್ಕೆ ವಿಸ್ತರಣೆ ಮಾಡಲಾಗುವುದು. ಉದಾಹರಣೆಗೆ ಅಲ್ಲೆಗ್ರಾ, ಡೋಲೋ, ಆಗ್‌ಮೆಂಟಿನ್‌, ಸಾರಿಡಾನ್‌, ಕಾಲ್‌ಪಾಲ್‌, ಥೈರೋನಾರ್ಮ್‌ ಮೊದಲಾದ ಔಷಧಗಳು ಮೊದಲ ಹಂತದಲ್ಲಿ ಯೋಜನೆಗೆ ಒಳಪಡುವ ಸಾಧ್ಯತೆ ಇದೆ.

ಯೋಜನೆ ಏಕೆ?:
ವಿಶ್ವದಲ್ಲಿ ಮಾರಾಟವಾಗುವ ಒಟ್ಟು ನಕಲಿ ಔಷಧಗಳ ಪೈಕಿ ಶೇ.35ರಷ್ಟು ಭಾರತದಿಂದಲೇ ರವಾನೆಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ. ಜಾಗತಿಕ ಮಟ್ಟಕ್ಕೆ ರವಾನೆಯಾಗುವ ಇಂಥ ನಕಲಿ ಔಷಧಗಳು ದೇಶೀಯ ಮಾರುಕಟ್ಟೆಯಲ್ಲೂ ಭಾರಿ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ. ದೇಶದ ಒಟ್ಟು ಔಷಧಗಳ ಮಾರಾಟದಲ್ಲಿ ಶೇ.25ರಷ್ಟು ನಕಲಿ ಔಷಧಗಳಾಗಿವೆ. ಇಂಥ ನಕಲಿ ಔಷಧಗಳ ವಾರ್ಷಿಕ ವಹಿವಾಟು 35000 ಕೋಟಿ ರೂ. ನಷ್ಟಿದೆ. ಇವುಗಳ ಮಾರಾಟದಿಂದ ರೋಗಿಗಳ ಆರೋಗ್ಯದಲ್ಲಿ ಎಡವಟ್ಟು, ಸರ್ಕಾರಕ್ಕೆ ತೆರಿಗೆ ವಂಚನೆ, ಮೂಲ ಕಂಪನಿಗಳಿಗೆ ನಷ್ಟ... ಹೀಗೆ ನಾನಾ ಸಮಸ್ಯೆಗಳಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಯೋಜನೆ ರೂಪಿಸಿದೆ.

ಇದನ್ನೂ ಓದಿ: ರೋಗಿಗಳಿಗೆ ಡೋಲೋ ಮಾತ್ರೆ ಶಿಫಾರಸಿಗಾಗಿ ವೈದ್ಯರಿಗೆ 1,000 ಕೋಟಿ ರೂ ಖರ್ಚು, ವರದಿ ಕೇಳಿದ ಸುಪ್ರೀಂ!

ಭಾರತಕ್ಕೆ ಬಾರ್‌ಕೋಡ್‌ಗಳು ಏಕೆ ಅಗತ್ಯ..?
ಭಾರತದಲ್ಲಿ ಹೆಚ್ಚುತ್ತಿರುವ ನಕಲಿ ಔಷಧಿಗಳ ಸಮಸ್ಯೆಯ ಬಗ್ಗೆ 2019 ರಲ್ಲಿ ಅಮೆರಿಕ ಎಚ್ಚರಿಕೆ ನೀಡಿತ್ತು. ಬೌದ್ಧಿಕ ಆಸ್ತಿ ರಕ್ಷಣೆ ಮತ್ತು ಕಡಲ್ಗಳ್ಳತನ ಹಾಗೂ ನಕಲಿಗಾಗಿ 'ಕುಖ್ಯಾತ ಮಾರುಕಟ್ಟೆಗಳ' ವಿಮರ್ಶೆಯ ತನ್ನ ವಾರ್ಷಿಕ 'ವಿಶೇಷ 301 ವರದಿ'ಯಲ್ಲಿ, ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಕಚೇರಿಯು ನಕಲಿ ಔಷಧಿಗಳ ಹೆಚ್ಚುತ್ತಿರುವ ಸಮಸ್ಯೆಗೆ ಭಾರತವನ್ನು ದೂಷಿಸಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಔಷಧೀಯ ಸರಕುಗಳಲ್ಲಿ ಸುಮಾರು 20 ಪ್ರತಿಶತವು ನಕಲಿಯಾಗಿದೆ ಎಂದು ಆ ವರದಿ ಹೇಳಿದೆ. ಭಾರತದಲ್ಲಿ ಬೆಳೆಯುತ್ತಿರುವ ಔಷಧೀಯ ಮಾರುಕಟ್ಟೆ ಮತ್ತು "ಜಗತ್ತಿಗೆ ಔಷಧಾಲಯ" ಎಂಬ ಅದರ ದಶಕಗಳಷ್ಟು ಹಳೆಯ ಖ್ಯಾತಿಯನ್ನು ಪರಿಗಣಿಸಿದರೆ ಈ ನಕಲಿ ಔಷಧಿಗಳು ಖಂಡನೀಯವಾಗಿದೆ.

ಇನ್ನೊಂದೆಡೆ, ಬಾರ್ ಕೋಡ್‌ಗಳನ್ನು ಹೊರತರುವ ಕ್ರಮವು 2016 ರಿಂದ ತಯಾರಿಕೆಯಲ್ಲಿದ್ದರೂ, ಈಗ ಅದನ್ನು ಜಾರಿಗೆ ತರಲಾಗುವುದು ಎಂದು ಮೂಲಗಳು ಹೇಳಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..