ಒಂಟೆ ಹಾಲಿನಿಂದ ಕಾಫಿ ಟೀ: ಫಾರ್ಮ್ ಆರಂಭಿಸಿದ ತಮಿಳುನಾಡಿನ ವ್ಯಕ್ತಿ

Published : Mar 28, 2022, 12:33 PM ISTUpdated : Mar 28, 2022, 12:46 PM IST
ಒಂಟೆ ಹಾಲಿನಿಂದ ಕಾಫಿ ಟೀ: ಫಾರ್ಮ್ ಆರಂಭಿಸಿದ ತಮಿಳುನಾಡಿನ ವ್ಯಕ್ತಿ

ಸಾರಾಂಶ

ಒಂಟೆ ಹಾಲಿನಿಂದ ಹೆಚ್ಚುತಂತೆ ರೋಗ ನಿರೋಧಕ ಶಕ್ತಿ ಫಾರ್ಮ್‌ ಆರಂಭಿಸಿದ ತಮಿಳುನಾಡಿನ ವ್ಯಕ್ತಿ ಒಂಟೆ ಹಾಲಿನಿಂದ ಟೀ ಕಾಫಿ ತಯಾರಿ

ಕೊಯಮತ್ತೂರು(ಮಾ.28): ತಮಿಳುನಾಡಿನ ವ್ಯಕ್ತಿಯೊಬ್ಬರು ಒಂಟೆ ಫಾರ್ಮ್ ಆರಂಭಿಸಿದ್ದು, ಒಂಟೆ ಹಾಲಿನಿಂದ ಟೀ, ಕಾಫಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅವರ ಒಂಟೆ ಹಾಲಿಗೆ ಈಗ ಭಾರಿ ಬೇಡಿಕೆ ಉಂಟಾಗಿದೆ. ಕೊಯಮತ್ತೂರು(Coimbatore) ಜಿಲ್ಲೆಯ ನೀಲಂಬೂರ್ ಪ್ರದೇಶದ ಮಣಿಕಂದನ್ ಎಂಬುವವರೇ ಹೀಗೆ ಒಂಟೆ ಫಾರ್ಮ್‌ ಆರಂಭಿಸಿ ವಿನೂತನ ಉದ್ಯಮ ಆರಂಭಿಸಿದ ವ್ಯಕ್ತಿ. ಇವರು ನೀಲಂಬೂರ್ (Neelambur) ಪಕ್ಕದ ಕುಲತ್ತೂರ್ (Kulathur) ಪ್ರದೇಶದಲ್ಲಿ ‘ಸಂಗಮಿತ್ರ’ ಹೆಸರಿನ ಒಂಟೆ ಸಾಕಣೆ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಒಂಟೆ ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಂತೆ ಹೀಗಾಗಿ ಒಂಟೆ ಫಾರ್ಮ್ ಆರಂಭಿಸಿ ಒಂಟೆಗಳನ್ನು ಸಾಕುತ್ತಿದ್ದು, ಅವುಗಳು ನೀಡುವ ಹಾಲಿನಿಂದ ಅವರು ಟೀ ಕಾಫಿ ಮಾಡಿ ಗ್ರಾಹಕರಿಗೆ ನೀಡುವ ಉದ್ಯಮವನ್ನು ಆರಂಭಿಸಿದ್ದಾರೆ.  

ಈ ಬಗ್ಗೆ ಮಾತನಾಡಿದ ಮಣಿಕಂದನ್ (Manikandan), 'ಕೆಲವು ತಿಂಗಳ ಹಿಂದೆ ನಾನು ಕೋವಿಡ್ 19 ಸೋಂಕಿನಿಂದ  ಬಳಲುತ್ತಿದೆ. ಒಂಟೆ ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ನಾನು ಕೇಳಿದ್ದೇನೆ ಹೀಗಾಗಿ ಸರ್ಕಾರದಿಂದ ಅನುಮತಿ ಪಡೆದು 'ಸಂಗಮಿತ್ರ'(Sangamitra) ಎಂಬ ಒಂಟೆ ಹಾಲಿನ ಫಾರ್ಮ್ ಆರಂಭಿಸಿದ್ದೇನೆ ಎಂದರು.

ಒಂಟೆ ಮೂತ್ರ ನೀಡುವ ಕೆಫೆ ಆರಂಭ!

ಒಂಟೆ ಹಾಲನ್ನು ಲೀಟರ್‌ಗೆ 450 ರೂ.ಗೆ ಮಾರಾಟ ಮಾಡುತ್ತೇನೆ. ನಾನು ಚಹಾ, ಕಾಫಿ ಮತ್ತು ಗುಲಾಬಿ ಹಾಲು ತಯಾರಿಸುತ್ತೇನೆ. ಒಂಟೆ ಹಾಲು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು. ಇದನ್ನು ಸಾಬೀತುಪಡಿಸಲು ನನ್ನ ಬಳಿ ವೈದ್ಯಕೀಯ ಸಾಕ್ಷ್ಯವಿದೆ ಎಂದು ಮಣಿಕಂದನ್ ಹೇಳಿದರು. ಈ ಫಾರ್ಮ್‌ನಲ್ಲಿ ಕುದುರೆ ಸವಾರಿಯೂ ಲಭ್ಯವಿದೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಒಂಟೆ ಹಾಲಿನ (Camel milk) ಟೀ ಕುಡಿಯುವುದು ವಿಭಿನ್ನ ಅನುಭವ. ಮಕ್ಕಳು ಒಂಟೆಗಳನ್ನು ನೋಡಿ ಖುಷಿ ಪಡುತ್ತಾರೆ. ಇದೊಂದು ಮನರಂಜನೆಯ ತಾಣ ಎನ್ನುತ್ತಾರೆ ಗ್ರಾಹಕಿ ಕವಿತಾ (Kavitha). ಈ ಫಾರ್ಮ್‌ನ ಯಶಸ್ಸಿನಿಂದ ಖುಷಿಯಾಗಿರುವ ಮಣಿಕಂದನ್ ಶೀಘ್ರದಲ್ಲೇ ತಮಿಳುನಾಡಿನಾದ್ಯಂತ(Tamil Nadu) ಒಂಟೆ ಫಾರ್ಮ್ ಅನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದ್ದಾರೆ. 

ಮಂಡ್ಯ; ಕಸಾಯಿ ಖಾನೆ ಪಾಲಾಗುತ್ತಿದ್ದ 11 ಒಂಟೆ ರಕ್ಷಿಸಿ ರಾಜಸ್ಥಾನಕ್ಕೆ ರವಾನೆ  

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋವಿಡ್ ಹೆಚ್ಚಾದಂತಹ ಸಂದರ್ಭದಲ್ಲಿ ರಾಜಸ್ತಾನದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ವಾಹನ ಸೌಕರ್ಯವಿಲ್ಲದ ಹಳ್ಳಿಗಳಿಗೆ ಒಂಟೆ ಏರಿ ಹೋಗಿ ಹಳ್ಳಿಗಳನ್ನು ತಲುಪಿ ಲಸಿಕಾಕರಣದ ಯಶಸ್ಸಿಗೆ ಸಹಕರಿಸಿದ್ದರು. ಈ ದೃಶ್ಯವನ್ನು ಕೇಂದ್ರ  ಆರೋಗ್ಯ ಸಚಿವ ಮನ್ಶುಕ್‌ ಮಾಂಡವಿಯಾ (Manshukh Mandaviya) ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಆರೋಗ್ಯ ಕಾರ್ಯಕರ್ತೆ ಹಳ್ಳಿ ಹಳ್ಳಿಗೂ ಕೋವಿಡ್‌ ಲಸಿಕೆ ತಲುಪುವ ನಿಟ್ಟಿನಲ್ಲಿ ದೂರದ ಹಳ್ಳಿಗಳ ಜನರನ್ನು ತಲುಪುವ ಸಲುವಾಗಿ ತಾವೇ ಒಂಟೆ ಸವಾರಿ ಮಾಡುತ್ತಿರುವ ದೃಶ್ಯವಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಲಸಿಕೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆಯಾಗಿತ್ತು.

ಆದರೆ ಈ ಆರೋಗ್ಯ ಕಾರ್ಯಕರ್ತೆ ಯಾರು ಎಂಬ ಉಲ್ಲೇಖ ಈ ಪೋಸ್ಟ್‌ನಲ್ಲಿ ಇಲ್ಲ. ' ಇದೊಂದು ಸಂಕಲ್ಪ ಹಾಗೂ ಕರ್ತವ್ಯ ನಿಷ್ಠೆಯ ಸಂಗಮ' ರಾಜಸ್ತಾನದ ಬಡಮೇರ್‌ ಜಿಲ್ಲೆಯ ಕೋವಿಡ್‌ ಲಸಿಕಾಕರಣದ ಫೋಟೋ ಇದು ಎಂದು ಬರೆದು ಕೇಂದ್ರ  ಆರೋಗ್ಯ ಸಚಿವ ಮನ್ಶುಕ್‌ ಮಾಂಡವಿಯಾ ಅವರು  ಟ್ವಿಟರ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ಒಡಿಶಾದ ಆರೋಗ್ಯ ಕಾರ್ಯಕರ್ತೆಯೊಬ್ಬರು ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಪೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ