ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು

Published : Dec 09, 2025, 04:29 PM IST
coca cola company chartered accountant died by sudden collapse in Airport

ಸಾರಾಂಶ

Man dies at Lucknow airport: ಕೋಕಾ ಕೋಲಾ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ವಿಮಾನ ನಿಲ್ದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು

ಕೋಕಾ ಕೋಲಾ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ತಡವಾಗಿ ಬಂದು ವಿಮಾನವನ್ನು ಹತ್ತಲು ಹೋಗುತ್ತಿದ್ದಾಗ ಅವರು ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಅವರಿಗೆ ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿ ಪಿಸಿಆರ್ ಮಾಡಿದರೂ ಕೂಡ ಆಸ್ಪತ್ರೆಗೆ ತಲುಪುವುದಕ್ಕೂ ಮೊದಲೇ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರು ಅವರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ತುರ್ತು ವೈದ್ಯಕೀಯ ಸಹಾಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಮೃತರಾದ ಚಾರ್ಟೆಡ್‌ ಅಕೌಂಟೆಂಟ್ ಅವರನ್ನು 42 ವರ್ಷದ ಅನೂಪ್ ಕುಮಾರ್ ಪಾಂಡೆ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋ ಏರ್‌ಪೋರ್ಟ್ ಒಳಭಾಗದಲ್ಲೇ ಈ ಘಟನೆ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ದುರಂತ:

ರಾತ್ರಿ 10.30ಕ್ಕೆ ಇದ್ದ ವಿಮಾನದಲ್ಲಿ ಅವರು ದೆಹಲಿಗೆ ಹೋಗಬೇಕಿತ್ತು. ಆದರೆ ಅವರು ಬಂದ ಕ್ಯಾಬ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಅವರು ಬಹಳ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಓಡೋಡುತ್ತಲೇ ವಿಮಾನ ನಿಲ್ದಾಣದ ಕೌಂಟರ್‌ಗೆ ಆಗಮಿಸಿದ್ದರು. ಆದರೆ ವೇಗವಾಗಿ ಓಡುತ್ತಾ ಬಂದವರು ನೆಲಕ್ಕೆ ಕುಸಿದಿದ್ದು, ಮತ್ತೆ ಮೇಲೇಳಲಿಲ್ಲ. ಕೂಡಲೇ ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರಿಗ ಸಿಪಿಆರ್ ಮಾಡಿದ್ದಾರೆ. ಅಲ್ಲದೇ ಸ್ಟ್ರೆಚರ್ ತರಿಸಿ ಅನೂಪ್ ಅವರನ್ನು ಅದರಲ್ಲಿ ಮಲಗಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಲೋಕಬಂಧು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಅವರು ಆಸ್ಪತ್ರೆಗೆ ಬರುತ್ತಲೇ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್

ಕಾನ್‌ಪುರದ ಕಲ್ಯಾಣಪುರ ಮೂಲದವರಾದ ಅನೂಪ್ ಪಾಂಡೆ ಅವರು, ಸಿಎ ಹಾಗೂ ಹಣಕಾಸು ಕಾರ್ಯಾನಿರ್ವಹಣಾಧಿಕಾರಿಯಾಗಿ ಬೆಂಗಳೂರಿನ ಕೋಕಾ ಕೋಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಪೂಜಾ, ಒಬ್ಬ ಮಗ ಮತ್ತು ಮಗಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅವರು ಐದು ದಿನಗಳ ಹಿಂದೆ ಪರಿಚಯಸ್ಥರೊಬ್ಬರ ತೇರಾಹ್ವಿನ್ (13 ನೇ ದಿನದ ಆಚರಣೆ) ಯಲ್ಲಿ ಭಾಗವಹಿಸುವುದಕ್ಕಾಗಿ ಕಾನ್ಪುರಕ್ಕೆ ಬಂದಿದ್ದರು. ಆದರೆ ವಾಪಸ್ ಬೆಂಗಳೂರು ತಲುಪುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: 15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮನೆಗೆ ಬಂದ ಯೋಧ

ವಿಮಾನ ನಿಲ್ದಾಣ ಪ್ರಾಧಿಕಾರವೂ ಅವರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಬೆಂಬಲವನ್ನು ಒದಗಿಸುವುದಕ್ಕೆ ವಿಫಲವಾಗಿದೆ ಎಂದು ಅನೂಪ್ ಅವರ ಅಳಿಯ ಆರೋಪಿಸಿದ್ದಾರೆ. ಅಲ್ಲಿಗೆ ಆಂಬುಲೆನ್ಸ್ ಕೂಡ ಲೇಟಾಗಿ ಬಂತು ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಅವರು ಅಂದೇ ಮೃತರಾದರು ಮರುದಿನ ಅವರ ಕುಟುಂಬದವರಿಗೆ ತಿಳಿಸಲಾಯ್ತು ಎಂದು ಅವರ ಸಂಬಂಧಿ ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ತಮ್ಮ ಕಾರು ಸಿಲುಕಿಕೊಂಡ ನಂತರ ಅನೂಪ್ ಅವರು ಚಿಂತೆ ಹಾಗೂ ಒತ್ತಡಕ್ಕೆ ಒಳಗಾದರು. ಬಹುಶಃ ಈ ಒತ್ತಡವೇ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಕ್ಕೆ ಕಾರಣವಾಗಿರಬಹುದು. ಗಾಡಿಯನ್ನು ಪಾರ್ಕ್ ಮಾಡಿದ ಅವರು ಕೂಡಲೇ ಟರ್ಮಿನಲ್‌ಗೆ ಓಡಿ ಬಂದು ಅಲೇ ಕುಸಿದು ಬಿದ್ದರು ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?