ಕೇರಳದಲ್ಲಿ ದ್ವೇಷವನ್ನು ಉಂಟು ಮಾಡುವ ಕಾರಣಕ್ಕಾಗಿಯೇ ಕೇರಳ ಸ್ಟೋರಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಇದು ಸಂಘ ಪರಿವಾರದ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ನವದೆಹಲಿ (ಏ.30): ಬಿಡುಗಡೆಗೆ ಸಿದ್ಧವಾಗಿರುವ ದಿ ಕೇರಳ ಸ್ಟೋರಿ ಚಿತ್ರದ ಬಗ್ಗೆ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೋಮು ಧ್ರುವೀಕರಣದ ಉದ್ದೇಶದಿಂದ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರವನ್ನು ಮಾಡುವ ಸಲುವಾಗಿ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಇಡೀ ಚಿತ್ರ ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯ ಉತ್ಪನ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದ ಕುರಿತಾಗಿ ಮೊದಲ ಬಾರಿಗೆ ಮಾತನಾಡಿರುವ ಸಿಪಿಐ(ಎಂ) ನಾಯಕ, 'ದಿ ಕೇರಳ ಸ್ಟೋರಿ' ಚಿತ್ರದ ಟ್ರೇಲರ್ ಜಾತ್ಯತೀತತೆಯ ನೆಲವಾಗಿರುವ ಕೇರಳದಲ್ಲಿ, ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿರುವ ಸಂಘಪರಿವಾರದ ಪ್ರಚಾರವನ್ನು ಹರಡಲು ಚಿತ್ರ ಪ್ರಯತ್ನಿಸುತ್ತಿದೆ ಎಂದು ಸೂಚನೆ ನೀಡಿದೆ. "ಅವರು (ಸಂಘಪರಿವಾರ) ನಕಲಿ ಕಥೆಗಳು ಮತ್ತು ಚಲನಚಿತ್ರಗಳ ಮೂಲಕ ವಿಭಜನೆಯ ರಾಜಕೀಯವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಸಂಘಪರಿವಾರವು ಯಾವುದೇ ಸತ್ಯ ಮತ್ತು ಪುರಾವೆಗಳಿಲ್ಲದೆ ಇಂತಹ ಕಟ್ಟು ಕಥೆಗಳನ್ನು ಹರಡುತ್ತಿದೆ. ಕೇರಳದಲ್ಲಿ 32,000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆ ಎಂಬ ದೊಡ್ಡ ಸುಳ್ಳು ಚಿತ್ರದ ಟ್ರೇಲರ್‌ನಲ್ಲಿ ನಾವು ನೋಡಿದ್ದು, ಈ ನಕಲಿ ಕಥೆ ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸುದೀಪ್ತೋ ಸೇನ್ ಬರೆದು ನಿರ್ದೇಶನ ಮಾಡಿರುವ 'ದಿ ಕೇರಳ ಸ್ಟೋರಿ' ದಕ್ಷಿಣ ರಾಜ್ಯದಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾದ "ಸುಮಾರು 32,000 ಮಹಿಳೆಯರು" ಕುರಿತಾದ ಘಟನೆಯನ್ನು ವಿವರಿಸುತ್ತದೆ ಎಂದು ಚಿತ್ರಿಸಲಾಗಿದೆ. ಅವರು ಮತಾಂತರಗೊಂಡಿದ್ದು ಮಾತ್ರವಲ್ಲದೆ, ಭಾರತ ಮತ್ತು ಜಗತ್ತಿನಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ನಿಯೋಜಿಸಲ್ಪಟ್ಟರು ಎಂದು ಚಲನಚಿತ್ರವು ತಿಳಿಸಿದೆ. ಕೇರಳದ ಚುನಾವಣಾ ರಾಜಕೀಯದಲ್ಲಿ ಲಾಭ ಪಡೆಯಲು ಸಂಘಪರಿವಾರ ನಡೆಸುತ್ತಿರುವ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇಂಥ ಚಿತ್ರಗಳು ಮತ್ತು ಅವುಗಳ ಮುಸ್ಲಿಂ ಪರಕೀಯತೆಯನ್ನು ನೋಡುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಆಡಳಿತಾರೂಢ ಸಿಪಿಐ(ಎಂ) ಮತ್ತು ಪ್ರತಿಪಕ್ಷ ಕಾಂಗ್ರೆಸ್ ಕೂಡ ಚಲನಚಿತ್ರವನ್ನು ಟೀಕಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದಲ್ಲಿ ವಿಷವನ್ನು ಉಗುಳುವ ಪರವಾನಗಿಯಲ್ಲ ಮತ್ತು ಚಲನಚಿತ್ರವು ರಾಜ್ಯದ ಕೋಮು ಸೌಹಾರ್ದತೆಯನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ಹೇಳಿದೆ. ಸುಳ್ಳು ಹೇಳಿಕೆಗಳ ಮೂಲಕ ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಉದ್ದೇಶದಿಂದ ವಿವಾದಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡದಂತೆ ಕಾಂಗ್ರೆಸ್ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ.
'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ವಿರೋಧ; ಇದನ್ನ ನಾನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸಾ
ಲವ್ ಜಿಹಾದ್ ಆರೋಪ ನಿಜ ಮಾಡಲು ಚಿತ್ರದ ಪ್ರಯತ್ನ: ಕೇರಳ ಸಿಎಂ ಪಿಣರಾಯಿ ವಿಜಯನ್, "ದಿ ಕೇರಳ ಸ್ಟೋರಿ ಚಲನಚಿತ್ರವು ಲವ್ ಜಿಹಾದ್ ಆರೋಪಗಳು ನಿಜ ಎಂದು ರೂಪಿಸುವ ವ್ಯವಸ್ಥಿತ ಕ್ರಮದ ಭಾಗವಾಗಿದೆ, ಅದನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ಮತ್ತು ಕೇಂದ್ರ ಗೃಹ ಸಚಿವಾಲಯವೂ ತಿರಸ್ಕರಿಸಿದೆ. ಈ ಕುರಿತಾಗಿ ಸ್ವತಃ ಸಚಿವ ಜಿ ಕಿಶನ್ ರೆಡ್ಡಿ ಕೂಡ ಸಂಸತ್ತಿನಲ್ಲಿ ಉತ್ತರಿಸಿದರು. "ಲವ್ ಜಿಹಾದ್" ಇದರ ವಿಚಾರವಾಗಿರಲಿಲ್ಲ ಎಂದಿದ್ದರು. ಈ ಸುಳ್ಳು ಆರೋಪವನ್ನು ಸಿನಿಮಾದಲ್ಲಿ ಮುಖ್ಯ ವಿಷಯವನ್ನಾಗಿ ಮಾಡಿರುವುದು ಕೇರಳವನ್ನು ಜಗತ್ತಿನ ಮುಂದೆ ಅವಮಾನಿಸುವ ಉದ್ದೇಶ ಹೊಂದಿದೆ. ಕೇರಳದ ಧಾರ್ಮಿಕ ಸಾಮರಸ್ಯದ ವಾತಾವರಣವನ್ನು ಮುರಿದು ಕೋಮುವಾದದ ವಿಷವನ್ನು ಹರಡಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಪಿಣರಾಯಿ ವಿಜಯನ್ ಹೇಳಿದ್ದಾರೆ.
The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್!
ಪರಿವಾರ ರಾಜಕೀಯಕ್ಕೆ ಕೇರಳದಲ್ಲಿ ನೆಲೆಯಿಲ್ಲ: ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪಿಣರಾಯಿ ವಿಜಯಯ್, ಬಿಜೆಪಿಯ ಪರವಾರ ರಾಜಕೀಯ ಕೇರಳದಲ್ಲಿ ಕೆಲಸ ಮಾಡೋದಿಲ್ಲ ಎಂದರು. 'ದೇಶದಲ್ಲಿ ಕೋಮುವಾದ ಮತ್ತು ತಾರತಮ್ಯವನ್ನು ಸೃಷ್ಟಿಸಲು ಸಿನಿಮಾವನ್ನು ಬಳಸುತ್ತಿರುವವರನ್ನು ಸಮರ್ಥಿಸುವುದು ಸರಿಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯವು ಈ ದೇಶವನ್ನು ವರ್ಗೀಕರಿಸಲು, ತಪ್ಪು ಗೆರೆಗಳನ್ನು ಹರಡಲು ಮತ್ತು ಜನರನ್ನು ವಿಭಜಿಸಲು ಪರವಾನಗಿಯಲ್ಲ, ಅಂತಹ ಕೋಮು ಮತ್ತು ವಿಭಾಗವನ್ನು ತಿರಸ್ಕರಿಸಬೇಕೆಂದು ನಾನು ಮಲಯಾಳಿಗಳಲ್ಲಿ ವಿನಂತಿಸುತ್ತೇನೆ. ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೋಮುವಾದಿ ಯತ್ನಗಳ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳಬೇಕು, ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಣರಾಯಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಮೇ 5 ರಂದು ಬಿಡುಗಡೆಯಾಗಲಿದೆ. 'ದಿ ಕೇರಳ ಸ್ಟೋರಿ' ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಹಣ ಕೂಡಿದೆ. ಇದನ್ನು ವಿಪುಲ್ ಅಮೃತಲಾಲ್ ಷಾ ಸ್ಥಾಪಿಸಿದ್ದು, ಅವರು ನಿರ್ಮಾಪಕ, ಸೃಜನಶೀಲ ನಿರ್ದೇಶಕ ಮತ್ತು ಚಿತ್ರದ ಬರಹಗಾರರೂ ಆಗಿದ್ದಾರೆ.