ಕಾಳಿ ದೇವತೆಗೆ ಅವಮಾನ ಮಾಡಿದ ಉಕ್ರೇನ್‌ ರಕ್ಷಣಾ ಇಲಾಖೆ, ಭಾರತೀಯರ ಕಿಡಿ!

Published : Apr 30, 2023, 04:08 PM IST
ಕಾಳಿ ದೇವತೆಗೆ ಅವಮಾನ ಮಾಡಿದ ಉಕ್ರೇನ್‌ ರಕ್ಷಣಾ ಇಲಾಖೆ, ಭಾರತೀಯರ ಕಿಡಿ!

ಸಾರಾಂಶ

ಪ್ರಸಾರ ಮತ್ತು ಮಾಹಿತಿ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಈ ಬಗ್ಗೆ ಬರೆದುಕೊಂಡಿದ್‌ದಾರೆ. ಇತ್ತೀಚೆಗೆ ಉಕ್ರೇನ್ ಉಪ ವಿದೇಶಾಂಗ ಸಚಿವರು ಭಾರತದಿಂದ ಬೆಂಬಲವನ್ನು ಕೋರಲು ದೆಹಲಿಗೆ ಆಗಮಿಸಿದ್ದರು. ಅದರ ಹಿಂದೆ ಉಕ್ರೇನ್ ಸರ್ಕಾರದ ನಿಜವಾದ ಮುಖ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ನವದೆಹಲಿ (ಏ.30): ಉಕ್ರೇನ್‌ನ ರಕ್ಷಣಾ ಇಲಾಖೆಯ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾದ ಟ್ವೀಟ್‌ನಲ್ಲಿ ಕಾಳಿ ಮಾತೆಯನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಿರುವ ರೀತಿಗೆ ಆಕ್ರೋಶ ವ್ತಕ್ತವಾಗಿದೆ. ಇದು ಅತ್ಯಂತ ಕೆಟ್ಟ ಕೃತ್ಯ ಹಾಗೂ ಹಿಂದೂಫೋಬಿಕ್‌ ಎಂದು ಕರೆಯಲಾಗಿದ್ದು, ಭಾರತದ ನೆಟಿಜನ್ಸ್‌ಗಳನ್ನು ಕೆರಳಿಸಿದೆ. ಚಿತ್ರದಲ್ಲಿ ಸ್ಪೋಟದಿಂದ ನಿರ್ಮಾಣವಾದ ಹೊಗೆಯಲ್ಲಿ ಕಾಳಿ ಮಾತೆ ಇರುವಂತೆ ಚಿತ್ರಣ ಮಾಡಲಾಗಿದೆ. ಈ ಚಿತ್ರದೊಂದಿಗೆ ಅಧಿಕೃತ ಟ್ವಿಟರ್‌ ಖಾತೆ 'ವರ್ಕ್‌ ಆಫ್‌ ಆರ್ಟ್‌' ಎಂದು ಬರೆದುಕೊಂಡಿದೆ. ಭಾನುವಾರ ಈ ಪೋಸ್ಟ್‌ ಪ್ರಕಟವಾಗಿದ್ದು, ಬಾಲಿವುಹಾಲಿವುಡ್‌ ನಟಿ ಮರ್ಲಿನ್‌ ಮನ್ರೋ ಅವರ ಸ್ಕರ್ಟ್‌ ಮೇಲೇರಿದ್ದ ಚಿತ್ರದ ಹೋಲಿಕೆ ರೀತಿಯಲ್ಲಿ ಕಾಳಿ ಮಾತೆಯನ್ನು ಚಿತ್ರವನ್ನು ಮಾರ್ಫಿಂಗ್‌ ಮಾಡಲಾಗಿತ್ತು. ಭಾರತೀಯ ಮೂಲದ ಟ್ವಿಟರ್‌ ಬಳಕೆದಾರರು ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಭಾರತೀಯ ಬಳಕೆದಾರರು ಉಕ್ರೇನ್‌ ವಿರುದ್ಧ ಸಿಟ್ಟಾಗಿದ್ದಾರೆ. ಭಾರತೀಯರ ಪಾಲಿಗೆ ಪೂಜ್ಯ ದೇವತೆಯಾಗಿರುವ ಕಾಳಿ ಮಾತೆಯ ನೀಲಿ ಚರ್ಮದ ಬಣ್ಣ, ನಾಲಿಗೆಯನ್ನು ಚಾಚಿದ ಭಂಗಿ ಮತ್ತು ಕುತ್ತಿಗೆಯ ಸುತ್ತಲೂ ತಲೆಬರುಡೆಯ ಮಾಲೆಯೊಂದಿಗೆ ಚಿತ್ರಿಸಲಾಗಿದೆ.

ಆದರೆ, ಚಿತ್ರ ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಉಕ್ರೇನ್‌ ರಕ್ಷಣಾ ಇಲಾಖೆ ತಕ್ಷಣವೇ ಟ್ವಿಟರ್‌ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದೆ. “ಇದಕ್ಕಾಗಿಯೇ ನಿಮಗೆ ಭಾರತದಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಹಾಗೂ ನಿಮಗೆ ಒದ್ದು ಒದ್ದು ಕಳಿಸುತ್ತಿದ್ದಾರೆ' ಎಂದು ಮೋಹನ್ ಸಿನ್ಹಾ ಎನ್ನುವ ಹೆಸರಿನ ವ್ಯಕ್ತಿಯೊಬ್ಬರು ಬರೆದಿದ್ದಾರೆ.

'ಪೂಜ್ಯ ಹಿಂದೂ ದೇವತೆಯಾದ ಮಾ ಕಾಳಿಯನ್ನು ಅಪಹಾಸ್ಯ ಮಾಡುತ್ತಿರುವ ಉಕ್ರೇನ್‌ನ ರಕ್ಷಣಾ ಇಲಾಖೆಯ ಹ್ಯಾಂಡಲ್‌ನ ಟ್ವೀಟ್‌ ನೋಡಿ ನಾನು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದೇನೆ. ಇದು ಸಂವೇದನಾಶೀಲತೆ ಮತ್ತು ಅಜ್ಞಾನದ ಪ್ರದರ್ಶನವಾಗಿದೆ. ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಮತ್ತು ಕ್ಷಮೆಯಾಚಿಸಲು ನಾನು ಅವರನ್ನು ಒತ್ತಾಯಿಸುತ್ತೇನೆ. ಎಲ್ಲಾ ಧರ್ಮಗಳು ಮತ್ತು ನಂಬಿಕೆಗಳಿಗೆ ಗೌರವವು ಅತ್ಯುನ್ನತವಾಗಿದೆ' ಎಂದು ಇನ್ನೊಬ್ಬ ಸುಧಾಂಶು ಸಿಂಗ್ ಟ್ವೀಟ್ ಮಾಡಿದ್ದಾರೆ.

ಉಕ್ರೇನ್‌ ವಿರುದ್ಧ ಯುದ್ಧದ ಪಾಪ: ಪುಟಿನ್‌ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ

'ಇಂತಹ ಕಾರ್ಟೂನ್‌ಗಳನ್ನು ಮಾಡಿ ನಮ್ಮ ನಂಬಿಕೆಗೆ ಅಪಮಾನ ಮಾಡಿದ್ದಕ್ಕಾಗಿ ನಾಚಿಕೆಯಾಗಬೇಕು! ಸಂಪೂರ್ಣ ಅಸಹ್ಯಕರ ಪ್ರಯತ್ನ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಈ ಪೋಸ್ಟ್‌ನ ಕುರಿತಾಗಿ ಸಿಟ್ಟಾದ ಹೆಚ್ಚಿನ ಬಳಕೆದಾರರು, ಟ್ವಿಟ್‌ನ ಸಿಇಒ ಎಲಾನ್‌ ಮಸ್ಕ್‌ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದರು, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana