ಮನ್ ಕೀ ಬಾತ್ ನನಗೆ ಕೇವಲ ಕಾರ್ಯಕ್ರಮವಲ್ಲ, ಅದು ನಂಬಿಕೆ, ಪ್ರಾರ್ಥನೆ ಮತ್ತು ಸಂಕಲ್ಪ. ಇದು ಭಾರತದ ಪ್ರಜೆಗಳಿಗೆ ನನ್ನ ಅರ್ಪಣೆ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ (ಏಪ್ರಿಲ್ 30, 2023): ‘’ಮನ್ ಕೀ ಬಾತ್’’ ಮಾಸಿಕ ರೇಡಿಯೋ ಕಾರ್ಯಕ್ರಮಕ್ಕೆ ಇಂದು 100ನೇ ಸಂಭ್ರಮ. ಈ ವಿಶೇಷ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಎಂದಿನಂತೆ ನಾನಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರತಿ ಸಂಚಿಕೆಯೂ ವಿಶೇಷವಾಗಿದೆ. ಎಂದು 100ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಹೇಳಿದರು. ಈ ವೇಳೆ ‘ಮಗಳ ಜೊತೆ ಸೆಲ್ಫಿ’ ಅಭಿಯಾನವನ್ನು ಸಹ ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.
100ನೇ ಸಂಚಿಕೆ ವೇಳೆ ಮಾತನಾಡಿದ ಪ್ರಧಾನಿ ಮೋದಿ, 'ಮಗಳ ಜೊತೆ ಸೆಲ್ಫಿ' ಅಭಿಯಾನವನ್ನು ನೆನಪಿಸಿಕೊಂಡಿದ್ದಾರೆ. ಸಂಚಿಕೆಯೊಂದರಲ್ಲಿ ಈ ಅಭಿಯಾನದ ಬಗ್ಗೆ ಮಾತನಾಡಿದ್ದು, ಇದಕ್ಕೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ, ಈ ಆಲೋಚನೆ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡಿದ್ದೇನೆ ಎಂದೂ ಹೇಳಿಕೊಂಡರು.
ಇದನ್ನು ಓದಿ: Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ
ಇನ್ನೊಂದೆಡೆ, 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಕೋಟ್ಯಂತರ ಭಾರತೀಯರ 'ಮನ್ ಕೀ ಬಾತ್' ನ ಪ್ರತಿಬಿಂಬವಾಗಿದೆ. ಇದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಹಾಗೂ, ಮನ್ ಕೀ ಬಾತ್ ಆರಂಭವಾಗಿ ಇಷ್ಟು ವರ್ಷಗಳಾಗಿವೆ ಎಂದು ನನಗೆ ನಂಬಲಾಗುತ್ತಿಲ್ಲ. ಪ್ರತಿಯೊಂದು ಸಂಚಿಕೆಯೂ ವಿಶೇಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಇನ್ನು, ‘ಮನ್ ಕೀ ಬಾತ್’ ಸಾರ್ವಜನಿಕ ಚಳುವಳಿಗಳಿಗೆ ಕಾರಣವಾಯಿತು ಎಂದೂ ಪ್ರಧಾನಿ ಮೋದಿ ಮನ್ ಕೀ ಬಾತ್ ವೇಳೆ ಹೇಳಿದ್ದಾರೆ. ಸ್ವಚ್ಛ ಭಾರತ್, ಖಾದಿ, ಆಜಾದಿ ಕಾ ಅಮೃತ್ ಮಹೋತ್ಸವ ಸಾರ್ವಜನಿಕ ಆಂದೋಲನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೆ, ಬೇಟಿ ಬಚಾವೋ ಬೇಟಿ ಪಢಾವೋ ಆಗಿರಬಹುದು, ಸ್ವಚ್ಛ ಭಾರತ ಅಭಿಯಾನ, ಖಾದಿಯ ಮೇಲಿನ ಪ್ರೀತಿ, ಪ್ರಕೃತಿ ಸಂಬಂಧಿತ ಕಾಳಜಿ, ಆಜಾದಿ ಕಾ ಅಮೃತ್ ಮಹೋತ್ಸವ ಅಥವಾ ಅಮೃತ ಸರೋವರ ಯಾವುದೇ ಆಗಿರಬಹುದು ಮನ್ ಕೀ ಬಾತ್ ಯಾವುದೇ ವಿಷಯದೊಂದಿಗೆ ಸಂಬಂಧ ಹೊಂದಿದ್ದರೂ ಅದು ಜನಾಂದೋಲನವನ್ನು ಹುಟ್ಟುಹಾಕಿದೆ ಎಂದು 100ನೇ ಮನ್ ಕೀ ಬಾತ್ ವೇಳೆ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ‘ಮನ್ ಕೀ ಬಾತ್’ಗೆ ಇಂದು ಶತಕ: ದೇಶದ 4 ಲಕ್ಷ ಕಡೆ ಕೇಳಲು ಬಿಜೆಪಿ ವ್ಯವಸ್ಥೆ
ಅಲ್ಲದೆ, ಮನ್ ಕೀ ಬಾತ್ ನನಗೆ ಕೇವಲ ಕಾರ್ಯಕ್ರಮವಲ್ಲ, ಅದು ನಂಬಿಕೆ, ಪ್ರಾರ್ಥನೆ ಮತ್ತು ಸಂಕಲ್ಪ. ಇದು ಭಾರತದ ಪ್ರಜೆಗಳಿಗೆ ನನ್ನ ಅರ್ಪಣೆ. ಇದು ನನ್ನ ಆಧ್ಯಾತ್ಮಿಕ ಯಾತ್ರೆಯಾಗಿದೆ ಎಂದೂ ಹೇಳಿದ್ದಾರೆ. ಮನ್ ಕೀ ಬಾತ್ ವಿವಿಧ ಕ್ಷೇತ್ರಗಳಾದ್ಯಂತ ಪ್ರತಿಭಾವಂತ ವ್ಯಕ್ತಿಗಳ ಕಥೆಗಳನ್ನು ಪ್ರದರ್ಶಿಸಿದೆ, ಆತ್ಮನಿರ್ಭರ್ ಭಾರತವನ್ನು ಉತ್ತೇಜಿಸುವುದರಿಂದ ಹಿಡಿದು ಮೇಕ್ ಇನ್ ಇಂಡಿಯಾ ಮತ್ತು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳವರೆಗೆ ಅನೇಕ ಕ್ಷೇತ್ರಗಳನ್ನು ಉತ್ತೇಜಿಸಿದೆ ಎಂದೂ ಏಪ್ರಿಲ್ 2023ರ ಮನ್ ಕೀ ಬಾತ್ ವೇಳೆ ನಮೋ ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಅದು ನಮ್ಮ ನೈಸರ್ಗಿಕ ಸಂಪನ್ಮೂಲಗಳಾಗಲಿ, ನದಿಗಳಾಗಲಿ, ಪರ್ವತಗಳಾಗಲಿ, ಕೊಳಗಳಾಗಲಿ ಅಥವಾ ನಮ್ಮ ಯಾತ್ರಾ ಸ್ಥಳಗಳಾಗಲಿ, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಇದು ಪ್ರವಾಸೋದ್ಯಮಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: 'ಮನ್ ಕೀ ಬಾತ್' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್ ಖಾನ್ ಪ್ರಶಂಸೆಯ ಮಳೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕೀ ಬಾತ್ ಮೊದಲ ಬಾರಿಗೆ ಅಕ್ಟೋಬರ್ 3, 2014 ರಂದು ಪ್ರಸಾರವಾಯಿತು. ಈ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ ಮತ್ತು ಪ್ರಪಂಚದಾದ್ಯಂತ ಭಾರೀ ಅಭಿಮಾನಿಗಳನ್ನು ಗಳಿಸಿದೆ. ಜನಪ್ರಿಯ ಕಾರ್ಯಕ್ರಮದ 100 ನೇ ಸಂಚಿಕೆಯನ್ನು ಗುರುತಿಸುವುದರಿಂದ ಈ ತಿಂಗಳ ಪ್ರಸಾರವು ವಿಶೇಷವಾಗಿ ಮಹತ್ವದ್ದಾಗಿದೆ. ಈ ಮೈಲಿಗಲ್ಲು ಸಂಚಿಕೆಯು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಿಂದ ನೇರ ಪ್ರಸಾರವಾಗಿದ್ದು, ಇತಿಹಾಸ ನಿರ್ಮಿಸಿದೆ.
ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್ ಕೀ ಬಾತ್ ಭಾಷಣದಲ್ಲಿ ಜನತೆಗೆ ಮೋದಿ ಕರೆ