ಸಿಎಂ ಯಡಿಯೂರಪ್ಪಗೆ ಕೊರೋನಾ, ವಿಶ್ರಾಂತಿಗೆ ಜಾರಿದ ಕಿಚ್ಚ ಸುದೀಪ್‌ : ಏ.16ರ ಟಾಪ್ 10 ಸುದ್ದಿ!

Published : Apr 16, 2021, 05:25 PM ISTUpdated : Apr 16, 2021, 05:29 PM IST
ಸಿಎಂ ಯಡಿಯೂರಪ್ಪಗೆ ಕೊರೋನಾ, ವಿಶ್ರಾಂತಿಗೆ ಜಾರಿದ ಕಿಚ್ಚ ಸುದೀಪ್‌ : ಏ.16ರ ಟಾಪ್ 10 ಸುದ್ದಿ!

ಸಾರಾಂಶ

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇತ್ತ ಆನಾರೋಗ್ಯ ಕಾರಣ ಕಿಚ್ಚ ಸುದೀಪ್ ವೀಕೆಂಡ್ ವಿಥ್ ಕಿಚ್ಚ ಕಾರ್ಯಕ್ರಮಕ್ಕೈ ಗೈರಾಗುತ್ತಿದ್ದಾರೆ. ಕುಂಭಮೇಳಕ್ಕೆ ಹೋದೋರು ಕರ್ನಾಟಕ ಎಂಟ್ರಿ ಆಗೋಕೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ವಿರಾಟ್ ಕೊಹ್ಲಿಗೆ ರೆಫ್ರಿ ಛೀಮಾರಿ, ನಿರುದ್ಯೋಗ ಸಮಸ್ಯೆ ಶೇ.8ರಷ್ಟು ಹೆಚ್ಚಳ ಸೇರಿದಂತೆ ಏಪ್ರಿಲ್ 16ರ ಟಾಪ್ 10 ಸುದ್ದಿ ವಿವರ.

ಸಿಎಂ BSYಗೆ 2ನೇ ಸಾರಿ ಕೊರೋನಾ, ಮಣಿಪಾಲ್ ಆಸ್ಪತ್ರೆಗೆ ದಾಖಲು...

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿದೆ.  ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದರು. 

ಕುಂಭಮೇಳದಲ್ಲಿ ಮುಮ್ತಾಜ್ ಎಂಬ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ...

 ಅಪ್ಪಟ ವೈಷ್ಣವ ಅನುಯಾಯಿಯಂತೆ ಹಣೆಗೆ ಯು ಆಕಾರದ ಗಂಧದ ತಿಲಕ ಹಚ್ಚಿ, ಸನ್ಯಾಸಿಗಳು ಧರಿಸುವ ತಿಳಿ ಬಣ್ಣದ ಕುರ್ತಾ ಧರಿಸಿ ಅಗ್ನಿಕುಂಡದ ಮುಂದೆ ಕುಳಿತ ಇವರು ಉಳಿದವರಂತೆಯೇ ಮಹಾ ಕುಂಭಮೇಳದ ಬೈರಾಗಿ ಕ್ಯಾಂಪ್‌ನಲ್ಲಿ ಕಾಣಸಿಗುತ್ತಾರೆ. 

ಕೊರೋನಾ ನಿರ್ಬಂಧ: ಏಪ್ರಿಲ್ ಮೊದಲೆರಡು ವಾರದಲ್ಲಿ ನಿರುದ್ಯೋಗ ಸಮಸ್ಯೆ ಶೇ.8ರಷ್ಟು ಹೆಚ್ಚಳ!...

ಕೊರೋನಾ ವೈರಸ್ ಕಾರಣ ಒಂದೊಂದೆ ರಾಜ್ಯಗಳು ಕಠಿಣ ನಿರ್ಬಂಧ ಹೇರಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಕರ್ಫ್ಯೂ ಜಾರಿಯಾಗಿದೆ. ಕಠಿಣ ರೂಲ್ಸ್ ಹೇರಿದ ಎರಡೇ ವಾರಕ್ಕೆ ಭಾರತದ ನಿರುದ್ಯೋಗ ಸಮಸ್ಯೆಯಲ್ಲೂ ಹೆಚ್ಚಳವಾಗಿದೆ. 

ಕುಂಭಮೇಳಕ್ಕೆ ಹೋದೋರು ಕರ್ನಾಟಕ ಎಂಟ್ರಿ ಆಗೋಕೆ ಕೊರೋನಾ ಟೆಸ್ಟ್ ಕಡ್ಡಾಯ...

ಉತ್ತರಖಂಡದ ಹರಿದ್ವಾರದಲ್ಲಿ ಕುಂಭ ಮೇಳದಿಂದ ಹಿಂದಿರುಗಿದ ಎಲ್ಲಾ ಕರ್ನಾಟಕ ಯಾತ್ರಿಕರಿಗೆ ಕೋರೋನಾ ಪರೀಕ್ಷೆ ಕಡ್ಡಾಯ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

IPL 2021: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಛೀಮಾರಿ...

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಔಟ್‌ ಬೇಸರದಲ್ಲಿ ಡಗೌಟ್‌ನಲ್ಲಿ ಚೇರ್‌ಗೆ ಒದ್ದಿದ್ದಕ್ಕೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮ್ಯಾಚ್‌ ರೆಫ್ರಿಯಿಂದ ಚೀಮಾರಿ ಹಾಕಿಸಿಕೊಂಡಿದ್ದಾರೆ. 

ಅನಾರೋಗ್ಯ: ವೀಕೆಂಡ್ ವಿಥ್ ಕಿಚ್ಚಗೆ ಹೋಗಲ್ಲ ಎಂದ ಸುದೀಪ್...

ನಟ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾದರೆ ಈ ವಾರದ ಬಿಗ್‌ಬಾಸ್‌ ಎಪಿಸೋಡ್‌ ವೀಕೆಂಡ್ ವಿಥ್ ಕಿಚ್ಚದಲ್ಲಿ ಯಾರಿರಲಿದ್ದಾರೆ? 

ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಈ ಬ್ಯಾಂಕ್‌ ಹೊರಕ್ಕೆ...

3 ದಶಕಗಳ ಸೇವೆ ಬಳಿಕ ಬ್ಯಾಂಕೊಂದು ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ  ಹೊರ ನಡೆಯುತ್ತಿದೆ. ಭಾರತ ಸೇರಿದಂತೆ 13 ದೇಶಗಳಲ್ಲಿನ ವಹಿವಾಟಿನಿಂದ ಮುಕ್ತವಾಗುತ್ತಿದೆ. 

ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ...

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ  ಹನುಮ ಜನ್ಮ ಸ್ಥಳದ ಬಗ್ಗೆ ಇತಿಹಾಸ ತಜ್ಞರು ಸಂಶೋಧನೆ ನಡೆಸಿದ ಮೇಲೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.  

ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ...

ಮಂಡ್ಯದಲ್ಲೊಂದು ಭೀಕರ ಘಟನೆ ನಡೆದಿದೆ. ಬಾಲಕ ಶ್ರೀಮಂತರ ಮನೆಯ ಬಾಲಕಿಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದ. ಮಧ್ಯರಾತ್ರಿ ಆಕೆ ಕರೆದಳೆಂದು ಬಂದವ ಅಲ್ಲಿಯೇ ಶವವಾದ. ಪ್ರೀತಿ ನಡುವೆ ಬಂದಿದ್ದು ಅಂತಸ್ತು, ಜಾತಿ.

ಬಸ್‌ ಸ್ಟ್ರೈಕ್‌: 'ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲ ನೌಕರರನ್ನೂ ವಜಾ ಮಾಡಲಿ'...

ಸಾರಿಗೆ ಸಂಸ್ಥೆಯ ನೌಕರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ನಿಲ್ಲದಿದ್ದರೆ, ನೌಕರರ ಹೋರಾಟದ ಸ್ವರೂಪವೇ ಬದಲಾಗಲಿದೆ| ಸರ್ಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಹಠಮಾರಿತನ ಬಿಟ್ಟು ಮಾತುಕತೆ ನಡೆಸಬೇಕಿದೆ: ನೀರಲಕೇರಿ| 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ