
ಹರಿದ್ವಾರ(ಎ.16): ಅಪ್ಪಟ ವೈಷ್ಣವ ಅನುಯಾಯಿಯಂತೆ ಹಣೆಗೆ ಯು ಆಕಾರದ ಗಂಧದ ತಿಲಕ ಹಚ್ಚಿ, ಸನ್ಯಾಸಿಗಳು ಧರಿಸುವ ತಿಳಿ ಬಣ್ಣದ ಕುರ್ತಾ ಧರಿಸಿ ಅಗ್ನಿಕುಂಡದ ಮುಂದೆ ಕುಳಿತ ಇವರು ಉಳಿದವರಂತೆಯೇ ಮಹಾ ಕುಂಭಮೇಳದ ಬೈರಾಗಿ ಕ್ಯಾಂಪ್‌ನಲ್ಲಿ ಕಾಣಸಿಗುತ್ತಾರೆ. ಉಪನಿಷತ್ ಮತ್ತು ಭಗವದ್ಗೀತಾದ ಪ್ರವಚನವನ್ನು ನೀಡುತ್ತಾರೆ. ಇದೆಲ್ಲದರ ಕೊನೆಯಲ್ಲಿ ತಿಳಿದ ಅಚ್ಚರಿಯ ವಿಚಾರ ಏನೆಂದರೆ ಇವರೊಬ್ಬ ಮುಸ್ಲಿಂ. ಶ್ರೀ ಎಂ ಎಂದೇ ತಿಳಿಯಲ್ಪಡುವ ಮುಮ್ತಾಜ್ ಅಲಿ ಖಾನ್ ಕೇರಳದ ಅಪ್ಪಟ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದವರು.
ಕುಂಭಮೇಳದಲ್ಲಿ ಇವರು ಇವರದ್ದೇ ಆದ ಅಖಾಡ, ಯೋಗ ಧಾಮ, ಸಾಧು ಸೇವಾ ಮಾಡುವುದರೊಂದಿಗೆ ಭಜನೆಯನ್ನೂ ಮಾಡುತ್ತಾರೆ. ದೇವರು ಬೇರೆ ಬೇರೆ ನಾಮಗಳಿಂದ ಕರೆಯಲ್ಪಡುತ್ತಾನೆ ಅಷ್ಟೆ. ಅಲ್ಲಾ, ಕ್ರೈಸ್ಟ್, ಕೃಷ್ಣ ಮತ್ತು ಹಲವು ನಾಮ. ಈ ಭಿನ್ನ ಹೆಸರುಗಳ ಹೊರತಾಗಿ ದೇವರು ಒಬ್ಬನೇ. ಒಮ್ಮೆ ಈ ಜ್ಞಾನ ಪಡೆದರೆ ಎಲ್ಲರೂ ಹುಡುಕುವುದು ಇದೇ ಜ್ಞಾನ ಎಂಬುದು ಅರಿವಾಗುತ್ತದೆ ಎಂದು ನಸುನಗುತ್ತಾರೆ ಶ್ರೀ ಎಂ.
ಕುಂಭಮೇಳಕ್ಕೆ ಹೋದೋರು ಕರ್ನಾಟಕ ಎಂಟ್ರಿ ಆಗೋಕೆ ಕೊರೋನಾ ಟೆಸ್ಟ್ ಕಡ್ಡಾಯ
ಇವರ ಲೋಕೋಪಕಾರಿ ಮತ್ತು ಆಧ್ಯಾತ್ಮಿಕ ಕೆಲಸಕ್ಕಾಗಿ ಕಳೆದ ವರ್ಷ ಪದ್ಮ ಭೂಷಣವನ್ನೂ ಪಡೆದಿದ್ದಾರೆ. ಇವರ ಸಂಘಟನೆ ಸಸ್ತಾಂಗ್ ಫೌಂಡೇಷನ್ ಆಂಧ್ರಪ್ರದೇಶದ ಮದನಪಳ್ಳಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆಯನ್ನೂ ನಡೆಸುತ್ತದೆ.
ತಿರುವನಂತಪುರದ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಇವರು ಚಿಕ್ಕಂದಿನಿಂದಲೇ ಯೋಗಿಯ ಬದುಕಿನ ಬಗ್ಗೆ ಆಸಕ್ತರಾಗಿದ್ದರು. 19ನೇ ವಯಸ್ಸಿನಲ್ಲಿಯೇ ಹಿಮಾಲಯಕ್ಕೆ ಓಡಿ ಹೋಗಿ ಅಲ್ಲಿ ತಮ್ಮ ಗುರುವಿಗಾಗಿ ಹುಡುಕಾಡಿದರು. ಋಷಿಕೇಷ, ಬದರೀನಾಥ್‌ನಲ್ಲಿ 300 ಕಿಮೀಗೂ ಹೆಚ್ಚು ನಡೆದ ಇವರು ಅಲೆದಾಡುವ ಸಂತನಂತೆಯೇ ಬಟ್ಟೆ ಧರಿಸಿದ್ದರು.
48 ಗಂಟೆಗಳಲ್ಲಿ ಒಂದು ಸಾವಿರ ಕೊರೋನಾ ಕೇಸ್.. ಕುಂಭಮೇಳಕ್ಕೆ ತೆರೆ?
'Apprenticed to a Himalayan Master’ಎಂಬ ಪುಸ್ತಕ ಬರೆದು ತಮ್ಮ ಜೀವನದ ಸಾಹಸಗಳನ್ನು ಅದರಲ್ಲಿ ಬರೆದಿದ್ದಾರೆ. ಬದರಿನಾಥ್‌ನ ದೂರದ ಗುಹೆಯೊಂದರಲ್ಲಿ ಹಿಮಾಲಯನ್ ಯೋಗಿಯೊಬ್ಬರಲ್ಲಿ ಅವರು ಗುರುವನ್ನೂ ಕಂಡುಕೊಳ್ಳುತ್ತಾರೆ. ನಂತರದಲ್ಲಿ ಪ್ರಾಚೀನಾ ನಾಥ್ ಸಂಪ್ರದಾಯವನ್ನು ಕಲಿಯುತ್ತಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಇದೇ ಸಂಪ್ರದಾಯವರು.
ಸುಮಾರು ಮೂರು ವರ್ಷ ತಮ್ಮ ಗುರುಗಳೊಂದಿಗೆ ಅವರು ಹಿಮಾಲಯದಲ್ಲಿ ಅಲೆದಾಡುತ್ತಾರೆ. ಅವರಿಗೆ ಅವರ ಗುರುಗಳು ಪ್ರಾಚೀನ ಧರ್ಮಗ್ರಂಥದ ಬೋಧನೆಳನ್ನು ಮಾಡಿದ್ದು ಇದೇ ಸಂದರ್ಭದಲ್ಲಿ. ಈಗ ಶ್ರೀ ಎಂ ಯೋಗ ಸೂತ್ರ, ಉಪನಿಷತ್, ವೇದಾಂತದ ಬಗ್ಗೆ ತಮ್ಮ ಸ್ವ ಅನುಭವವನ್ನೂ ಸೇರಿಸಿ ಪ್ರವಚನ ನೀಡುತ್ತಾರೆಂಬುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ