ಬಾಲಕಿ, ಬಾಲಕರಿಗೆ ಕೇರಳದಲ್ಲಿ ಪ್ರತ್ಯೇಕ ಶಾಲೆ ಬೇಡ: ಮಕ್ಕಳ ಆಯೋಗ

Published : Jul 23, 2022, 08:00 AM IST
ಬಾಲಕಿ, ಬಾಲಕರಿಗೆ ಕೇರಳದಲ್ಲಿ ಪ್ರತ್ಯೇಕ ಶಾಲೆ ಬೇಡ: ಮಕ್ಕಳ ಆಯೋಗ

ಸಾರಾಂಶ

ಬಾಲಕಿಯರು ಹಾಗೂ ಬಾಲಕರಿಗಾಗಿ ಪ್ರತ್ಯೇಕ ಶಾಲೆಗಳನ್ನು ನಡೆಸುವ ಪದ್ಧತಿಯನ್ನು ಕೊನೆಗಾಣಿಸಿ, ಅಂತಹ ಎಲ್ಲ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಹ ಶಿಕ್ಷಣ ಸಂಸ್ಥೆಗಳನ್ನಾಗಿ ಪರಿವರ್ತಿಸುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಐತಿಹಾಸಿಕ ಆದೇಶ ಮಾಡಿದೆ. 

ತಿರುವನಂತಪುರ (ಜು.23): ಬಾಲಕಿಯರು ಹಾಗೂ ಬಾಲಕರಿಗಾಗಿ ಪ್ರತ್ಯೇಕ ಶಾಲೆಗಳನ್ನು ನಡೆಸುವ ಪದ್ಧತಿಯನ್ನು ಕೊನೆಗಾಣಿಸಿ, ಅಂತಹ ಎಲ್ಲ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಹ ಶಿಕ್ಷಣ ಸಂಸ್ಥೆಗಳನ್ನಾಗಿ ಪರಿವರ್ತಿಸುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಐತಿಹಾಸಿಕ ಆದೇಶ ಮಾಡಿದೆ. 2023-24ನೇ ಸಾಲಿನಿಂದ ಕೇರಳದಲ್ಲಿ ಸಹ ಶಿಕ್ಷಣದ ಸಂಸ್ಥೆಗಳು ಮಾತ್ರ ಇರತಕ್ಕದ್ದು. ಈ ಸಂಬಂಧ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. 

ಮುಂದಿನ 90 ದಿನಗಳಲ್ಲಿ ಸಹ ಶಿಕ್ಷಣ ವ್ಯವಸ್ಥೆ ಜಾರಿ ಕುರಿತು ವಿಸ್ತೃತವಾದ ವರದಿ ಸಲ್ಲಿಸಬೇಕು ಎಂದು ಹೇಳಿದೆ. ಸಹ ಶಿಕ್ಷಣದ ಅಗತ್ಯ ಕುರಿತು ಪೋಷಕರಿಗೆ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದೂ ಆಯೋಗ ತಿಳಿಸಿದೆ. ಕೇರಳದಲ್ಲಿ ಬಾಲಕಿಯರಿಗೆ ಮೀಸಲಾದ 280 ಹಾಗೂ ಬಾಲಕರಿಗೆ ಮೀಸಲಾದ 164 ಶಾಲೆಗಳು ಇವೆ.

ಕೇರಳ ನೀಟ್‌ ಪರೀಕ್ಷೆ ವೇಳೆ ಬಲವಂತವಾಗಿ ಒಳವಸ್ತ್ರ ಬಿಚ್ಚಿಸಿದ್ದ ಇನ್ನಿಬ್ಬರ ಬಂಧನ

ಆದೇಶ ಏಕೆ?: ಬಾಲಕಿಯರು ಹಾಗೂ ಬಾಲಕರಿಗೆ ಪ್ರತ್ಯೇಕ ಶಾಲೆಗಳನ್ನು ನಡೆಸುವ ಮೂಲಕ ಲಿಂಗ ಸಮಾನತೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೊಲ್ಲಂ ಜಿಲ್ಲೆಯ ಆಂಚಲ್‌ನ ಡಾ. ಐಸಾಕ್‌ ಪಾಲ್‌ ಅವರು ಆಯೋಗದ ಮೊರೆ ಹೋಗಿದ್ದರು. ಹೀಗಾಗಿ ಬಾಲಕಿಯರು ಹಾಗೂ ಬಾಲಕಿಯರನ್ನು ಪ್ರತ್ಯೇಕಿಸಿ ಶಾಲೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಆಯೋಗ ಆದೇಶಿಸಿದೆ.

ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಕೇರಳದಲ್ಲಿ ಹೈ ಅಲರ್ಟ್!

ಜಾರಿಗೆ ಬರುತ್ತಾ?: ಆಯೋಗದ ಅಭಿಪ್ರಾಯಕ್ಕೆ ಬೆಂಬಲ ಇದೆ. ಆದರೆ ಅದನ್ನು ಏಕಾಏಕಿ ಜಾರಿಗೆ ತರಲಾಗದು. ಸರ್ಕಾರ ಈ ಬಗ್ಗೆ ಚರ್ಚೆ ಆರಂಭಿಸಿದೆ. ಇದೇನು ಹೈಕೋರ್ಚ್‌ ಆದೇಶವಲ್ಲ. ಎಲ್ಲರನ್ನೂ ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ