ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯೋಧರೊಬ್ಬರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಹೃದಯಾಘಾತಕ್ಕೀಡಾದ ವ್ಯಕ್ತಿಯೊಬ್ಬರ ಜೀವ ಉಳಿದಿದೆ. ಗುಜರಾತ್‌ನ ಅಹ್ಮದಾಬಾದ್ ಏರ್ಪೋರ್ಟ್‌ನಲ್ಲಿ ಈ ಘಟನೆ ನಡೆದಿದೆ. ಯೋಧ ವ್ಯಕ್ತಿಯೊಬ್ಬರಿಗೆ ಸಿಪಿಆರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯೋಧನ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುಂಬೈನಿಂದ (Mumbai) ಆಗಮಿಸಿದ ವ್ಯಕ್ತಿಯೊಬ್ಬರಿಗೆ ಅಹ್ಮದಾಬಾದ್ ಏರ್‌ಪೋರ್ಟ್‌ನಲ್ಲಿ ದಿಢೀರ್ ಹೃದಯಾಘಾತವಾಗಿದೆ. ಏರ್‌ಪೋರ್ಟ್‌ನಲ್ಲಿ (Ahmedabad airport) ಸೆಕ್ಯೂರಿಟಿ ಚೆಕ್ ವೇಳೆ ಈ ಘಟನೆ ನಡೆದಿದ್ದು, ಅಲ್ಲೇ ಇದ್ದ ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ (CISF sub-inspector) ಕಪಿಲ್ ರಾಘವ್ (Kapil Raghav) ಅವರು ವ್ಯಕ್ತಿಗೆ ಸಿಪಿಆರ್ ಮಾಡಿದ್ದಾರೆ. ಅಲ್ಲದೇ ಆತ ಯಶಸ್ವಿಯಾಗಿ ಮೇಲೇಳುವಂತೆ ಮಾಡಿದ್ದಾರೆ.
ಸಿಐಎಸ್ಎಫ್ ಟ್ವಿಟ್ಟರ್ ಪೇಜ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಕಪಿಲ್ ರಾಘವ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧಾರ್ (Sunil Deodhar) ಕೂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಯೋಧನ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೋ ನೋಡಿ ಧನ್ಯವಾದ ತಿಳಿಸಿದ್ದು, ಈ ಕಾರ್ಯ ಜನ ಸಾಮಾನ್ಯರಿಗೂ ತಿಳಿದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯೆನಿಸುತ್ತದೆ ಸಿಐಎಸ್‌ಎಫ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿದ್ದ ರೈತನಿಗೆ ಹೃದಯಾಘಾತ: CPR ಮಾಡಿ ಜೀವ ಉಳಿಸಿದ ಪೊಲೀಸ್
ಭಾರತದಲ್ಲಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ನ(Cardiac Arrest) ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಆತಂಕಕಾರಿ ವಿಷಯವೆಂದರೆ ಜನರಿಗೆ ಹೃದಯ ಸ್ತಂಭನದ ಬಗ್ಗೆ ತಿಳಿದಿಲ್ಲ. ಜನರು ಇದನ್ನು ಹೃದಯಾಘಾತ ಎಂದು ಪರಿಗಣಿಸುತ್ತಾರೆ ಮತ್ತು 5 ನಿಮಿಷಗಳಲ್ಲಿ ಮಾಡಬಹುದಾದ ಚಿಕಿತ್ಸೆಯನ್ನು ತುಂಬಾ ತಡವಾಗಿ ಮಾಡುತ್ತಾರೆ. ಇದರಿಂದ ರೋಗಿಯ ಪ್ರಾಣ ಬೇಗನೆ ಹೋಗುತ್ತೆ. CPR ಹೃದಯ ಸ್ತಂಭನದ ಸಮಯದಲ್ಲಿ ಅಥವಾ ಹೃದಯ ಬಡಿತವನ್ನು ನಿಲ್ಲಿಸಿದಾಗ ನಿರ್ವಹಿಸುವ ಪ್ರಥಮ ಚಿಕಿತ್ಸಾ ತಂತ್ರವಾಗಿದೆ. CPR ಅನ್ನು ಹೇಗೆ ನಿರ್ವಹಿಸಬೇಕೆಂದು ನೀವು ತಿಳಿದಿರಬೇಕು. ಸಿಪಿಆರ್ ಅನ್ನು ಸರಿಯಾಗಿ ನೀಡಿದಾಗ, ರೋಗಿಯ ಬದುಕುಳಿಯುವ ಸಾಧ್ಯತೆಯನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮುಂದೆ ಇರುವ ವ್ಯಕ್ತಿಯು ಉಸಿರಾಡದಿದ್ದರೆ ಅಥವಾ ನೀವು ಅವರ ನಾಡಿಮಿಡಿತವನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ, ಯಾವುದೇ ಸಮಯವನ್ನು ವ್ಯರ್ಥ ಮಾಡದೆ CPR ಅನ್ನು ಪ್ರಾರಂಭಿಸಿ.
ಮೊದಲನೆಯದಾಗಿ, ರೋಗಿಯು (Patient) ಸಮತಟ್ಟಾದ ಮೇಲ್ಮೈಯಲ್ಲಿ ಮಲಗಿದ್ದಾನೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಕೈಗಳು ಒಂದರ ಮೇಲೊಂದರಂತೆ ನಿಮ್ಮ ಬೆರಳುಗಳನ್ನು ಪರಸ್ಪರ ಜೋಡಿಸಿಕೊಂಡು ಎದೆಯ ಮಧ್ಯದಲ್ಲಿ ಇಡಬೇಕು. ನಿಮ್ಮ ಭುಜವು ನಿಮ್ಮ ಕೈಗಳ (Hand) ಮೇಲೆ ನೇರವಾಗಿ ಮಲಗಿರಬೇಕು. ಸಂಕೋಚನವನ್ನು ನೀಡುವಾಗ, ನಿಮ್ಮ ಕೈಗಳು ಮತ್ತು ಭುಜಗಳು ರೋಗಿಯ ಎದೆಗೆ ಲಂಬವಾಗಿರಬೇಕು. ನಿಮ್ಮ ಮೊಣಕೈಗಳನ್ನು ಲಾಕ್ ಮಾಡಿ, ನಿಮ್ಮ ತೋಳುಗಳನ್ನು ನೇರವಾಗಿ ಇರಿಸಿ. ಇಲ್ಲದಿದ್ದರೆ ನೀವು ಸಂಕೋಚನದಲ್ಲಿ ಸರಿಯಾದ ಪ್ರಮಾಣದ ಒತ್ತಡವನ್ನು ಪಡೆಯುವುದಿಲ್ಲ.
World Heart Day 2022: ಕಾಲೇಜು ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆ ತರಬೇತಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ