ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ : ಪ್ರಧಾನಿ ಮೋದಿ

By Anusha KbFirst Published Dec 26, 2023, 8:32 AM IST
Highlights

ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸೇವಾ ಮನೋಭಾವನೆಯಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಮಹತ್ವವಾಗಿದೆ ಎಂದು ಪ್ರಧಾನಿ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸೇವಾ ಮನೋಭಾವನೆಯಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಮಹತ್ವವಾಗಿದೆ ಎಂದು ಪ್ರಧಾನಿ ಮೋದಿ ಅವರು ಸೋಮವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಕ್ರೈಸ್ತ ಸಮುದಾಯದ ಮಾರ್ಗದರ್ಶನವನ್ನು ದೇಶವು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತದೆ ಎಂದು ಹೇಳಿದ್ದಾರೆ.  

ಕ್ರಿಸ್‌ಮಸ್‌ ಪ್ರಯುಕ್ತ ತಮ್ಮ ನಿವಾಸದಲ್ಲಿ ಕ್ರೈಸ್ತ ಧರ್ಮಗುರುಗಳು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಮೋದಿ ಕ್ರೈಸ್ತರೊಂದಿಗಿನ ತಮ್ಮ ಹಳೆಯ ಸಂಬಂಧವನ್ನು ನೆನೆಪಿಸಿಕೊಂಡು, ಕ್ರೈಸ್ತರು ಬಡವರು ಹಾಗೂ ಹಸಿದವರಿಗೆ ಸೇವೆ ಮಾಡುವಲ್ಲಿ ಸದಾ ಮುಂದಿರುತ್ತಾರೆ ಎಂದರು. ಈ ಧರ್ಮದವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಾಜಕ್ಕೆ ತಮ್ಮ ಮೂಲಕ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಸಂಭ್ರಮ: ಜೀಸಸ್ ಹುಟ್ಟಿದ ಬೆತ್ಲಹಮ್‌ನಲ್ಲಿ ಸಂಭ್ರಮವೇ ಇಲ್ಲ, ಸ್ಮಶಾನ ಮೌನ

ಏಸು ಕ್ರಿಸ್ತನ ಜೀವನವನ್ನು ನಾವು ಬಹಳ ದೊಡ್ಡ ಸಂದೇಶವಾಗಿ ಬದುಕಿನಲ್ಲಿ ಅನುಸರಿಸಬೇಕು. ಹಿಂದಿ ತತ್ವಶಾಸ್ತ್ರದ ಮೂಲವೆಂದು ಪರಿಗಣಿಸಲಾದ ಉಪನಿಷತ್ತುಗಳು ಬೈಬಲ್‌ನಂತಹ ಸಂಪೂರ್ಣ ಸತ್ಯವನ್ನು ಅರಿತುಕೊಳ್ಳುವತ್ತ ಗಮನಹರಿಸಿವೆ ಎಂದು ಹೇಳಿದರು.

ತನ್ನ 8ಲಕ್ಷ ಕೋಟಿ ರೂ ಮೌಲ್ಯದ ಕಂಪೆನಿಯಿಂದ ಬೃಹತ್ ಕ್ರಿಸ್ಮಸ್ ಉಡುಗೊರೆ ಸ್ವೀಕರಿಸಲು ರೆಡಿಯಾದ ಇಶಾ ಅಂಬಾನಿ

click me!